ಸ್ಯಾಂಡಲ್‌ವುಡ್‌ನ ಭರವಸೆಯ ನಿರ್ದೇಶಕ ತರುಣ್ ಸುಧೀರ್ (Tharun Sudhir) ಹಾಗೂ ಸೋನಲ್ ಮೊಂಥೆರೋ (Sonal Monteiro) ಅವರ ಆರತಕ್ಷತೆಯು ಅದ್ಧೂರಿಯಾಗಿ ನಿನ್ನೆ ನಡೆದಿತ್ತು. ಸ್ಯಾಂಡಲ್‌ವುಡ್ ನಟ, ನಟಿಯರು, ನಿರ್ದೇಶಕರು, ನಿರ್ಮಾಪಕರು, ರಾಜಕಾರಣಿಗಳು ಸೇರಿ ನೂರಾರು ಗಣ್ಯರು ರಿಸೆಪ್ಶನ್‌ನಲ್ಲಿ ಭಾಗವಹಿಸಿ, ನೂತನ ಜೋಡಿಗೆ ಶುಭ ಹಾರೈಸಿದ್ದರು. ಇದೀಗ ಜೋಡಿ ಕೆಲವೇ ಕ್ಷಣಗಳಲ್ಲಿ ಸಪ್ತಪದಿ ತುಳಿಯಲಿದೆ. ಜೋಡಿಯ ಫ್ಯಾನ್ಸ್ ಕೂಡ ಇದೀಗ ಮದುವೆಯ ಸುಂದರ ಕ್ಷಣವನ್ನು ಕಣ್ತುಂಬಿಸಿಕೊಳ್ಳಬಹುದು.
ಲೈವ್ ವಿಡಿಯೊ
ಈಗಾಗಲೇ ಮದುವೆ ಶಾಸ್ತ್ರಗಳು ಭರದಿಂದ ಸಾಗುತ್ತಿದೆ. ಕಿಚ್ಚ ಸುದೀಪ್ ಸೇರಿ ಹಲವು ನಟ, ನಟಿಯರು, ನಿರ್ದೆಶಕರನ್ನು ಭೇಟಿಯಾಗಿ ತರುಣ್ ಸುಧೀರ್ ಅವರು ಮದುವೆಯ ಆಮಂತ್ರಣ ನೀಡಿದ್ದಾರೆ. ರಚಿತಾ ರಾಮ್, ಉಪೇಂದ್ರ, ರಾಘವೇಂದ್ರ ರಾಜ್ಕುಮಾರ್ ಅವರಿಗೂ ತರುಣ್ ಸುಧೀರ್ ಆಹ್ವಾನ ನೀಡಿದ್ದರು.
ಸೋನಲ್ ಅವರು ಮಂಗಳೂರಿನವರು. ಅವರು ಮೊದಲು ತಮಿಳು ಸಿನಿಮಾದಲ್ಲಿ ನಟಿಸಿದ್ದರು. ಆನ್ಲೈನ್ನಲ್ಲಿ ಇರುವ ಮಾಹಿತಿ ಪ್ರಕಾರ ಅವರು ಜನಿಸಿದ್ದು 1995ರ ಆಗಸ್ಟ್ 11ರಂದು. ಕೆಲವೇ ದಿನಗಳಲ್ಲಿ 29 ವರ್ಷ ತುಂಬಲಿದೆ. ತರುಣ್ ಸುಧೀರ್ ಅವರಿಗೆ 41 ವರ್ಷ ಎನ್ನಲಾಗಿದೆ. ಈಗ ಅವರು ಜನಿಸಿದ್ದು 1983ರಲ್ಲಿ. ಅಂದರೆ, ಇಬ್ಬರ ಮಧ್ಯೆ ಸುಮರು 12 ವರ್ಷಗಳ ಅಂತರ ಇದೆ.
ಇದನ್ನೂ ಓದಿ: Jr NTR: ಸಿನಿಮಾ ಮುಹೂರ್ತದಲ್ಲಿ ಜ್ಯೂ. ಎನ್ಟಿಆರ್ ಧರಿಸಿದ ವಾಚ್ ಬೆಲೆ ಕೇಳಿದರೆ ನೀವು ಬೆರಗಾಗೋದು ಖಚಿತ!
ಲವ್ ಸ್ಟೋರಿ ಏನು?
ತರುಣ್ ಸುಧೀರ್ ಮಾತನಾಡಿ ʻʻನನ್ನ ಸೋನಲ್ ಪರಿಚಯ ಆಗಿದ್ದು ರಾಬರ್ಟ್ ಸಿನಿಮಾ ಮೂಲಕ. ಆಡಿಷನ್‌ನಲ್ಲಿ ಪರಿಚಯವಾದರು. ರಾಬರ್ಟ್ ಸೆಟ್ ಅಲ್ಲಿ ಲವ್ ಆಗಿಲ್ಲ. ಪ್ರೊಫೆಷನಲ್ ರಿಲೇಶನ್ ಶಿಪ್ ಅಲ್ಲಿ ಇದ್ವಿ. ಆದರೆ ಲವ್ ಆಗಿರಲಿಲ್ಲ. ಆಗಾಗ ಬರ್ತ್‌ಡೇ ವಿಶ್ ಮಾತ್ರ ಮೆಸೇಜ್ ಮಾಡ್ತಿದ್ವಿ. 2023 ಯಿಂದ ಇಬ್ಬರ ನಡುವೆ ಬಾಂಡಿಂಗ್ ಬೆಳೆದಿದ್ದು. ದರ್ಶನ್ ಅವರು ಕಾಲೆಳೆಯುತ್ತಿದ್ರು. ಸೋನಲ್ ಗೆ ಮಾತ್ರ ಯಾಕೆ ಚೆನ್ನಾಗ್ ಫ್ರೇಮ್ ಇಡ್ತಿಯಾ? ಅಂತ ತಮಾಷೆ ಮಾಡೋಕೆ ಶುರು ಮಾಡಿದ್ರು. ಏನು ಸೋನಲ್‌ನ ಲವ್ ಮಾಡ್ತಿದೀಯ ಎಂದು ರೇಗಿಸುತಿದ್ದರು. ನಂತರ ಮದುವೆ ಆಗ್ತೀಯಾ? ಅಂದ್ರು. ಅದ್ಕೆ ನಾನು ನೀವು ಯಾರನ್ನ ತೋರಿಸ್ತಿರೋ ಆಗ್ತೀನಿ ಅಂದೇ. ಕಾಟೇರ ಸೆಟ್ ನಲ್ಲೂ ದರ್ಶನ್ ಹಾಗು ಕೆಲವರು ಸೋನಲ್ ಹೆಸರಲ್ಲಿ ರೇಗಿಸುತಿದ್ರು. ಕೊನೆಗೆ ಒಂದು ಸಿನ ಸೋನಲ್ ನನಗೆ ಕಾಲ್ ಮಾಡಿ ಇಬ್ಬರು ಡೇಟ್ ಮಾಡುತ್ತಿದ್ದೇವೆ ಎನ್ನುವ ಸುದ್ದಿ ಹಬ್ಬುತಿದೆ. ತಪ್ಪು ತಿಳ್ಕೊಬೇಡಿ ಎಂದಿದ್ದರು. ನನಗೂ ಯಾಕೋ ಯೂನಿವರ್ಸ ನಮ್ಮಿಬ್ಬರನ್ನು ಕನೆಕ್ಟ್ ಮಾಡ್ತಿದೆ ಅನ್ಸಿತ್ತು. ನಾನು ಕಾಂಪ್ಲಿಕೇಟ್ ಇದೀನಿ ನೀವು ಸಿಂಪಲ್, ವರ್ಕ್ ಆಗುತ್ತ ಎಂದು ಸೋನಲ್ ಅವರನ್ನ ಕೇಳಿದ್ದೆ. ಕಾಟೇರ ವರೆಗೂ ಮದುವೆ ಬಗ್ಗೆ ಯೋಚಿಸಿಲ್ಲ. ಈ ಬಗ್ಗೆ ಸೋನಲ್‌ಗೂ ಹೇಳಿದ್ದೆ ಕಾಟೇರ ಸಕ್ಸಸ್ ಆಯಿತು. ಇದು ರೈಟ್ ಟೈಮ್ ಅಂತ ಸೋನಲ್ ಮನೆಯಲ್ಲಿ ಮದುವೆ ವಿಚಾರ ಪ್ರಸ್ತಾಪ ಆಯಿತು.ಇಬ್ಬರ ಕುಟುಂಬದ ಸಮ್ಮತಿಯಿಂದ ಮದುವೆ ಆಗುತ್ತಿದ್ದೇವೆʼʼ ಎಂದರು,