ಬೆಂಗಳೂರು: ಸ್ಯಾಂಡಲ್‌ವುಡ್ ನಟ ಯಶ್ ಅವರ ʻಟಾಕ್ಸಿಕ್ʼ ಸಿನಿಮಾ (Toxic Movie) ದಿನೇ ದಿನೇ ಹೊಸ ಅಪ್‌ಡೇಟ್ ನೀಡುತ್ತಲೇ ಇದೆ. ಈ ಚಿತ್ರದ ಶೂಟಿಂಗ್ ಗೋವಾದಲ್ಲಿ ನಡೆಯುತ್ತಿದ್ದು, ಕೆಲವು ಫೋಟೊ ಹಾಗೂ ವಿಡಿಯೊಗಳು ಲೀಕ್ ಆಗಿವೆ. ವೈರಲ್ ಆದ ಫೋಟೊದಲ್ಲಿ ಯಶ್ ಕೂಡ ಕಾಣಿಸಿಕೊಂಡಿದ್ದಾರೆ. ಕೆಲವು ವರದಿಗಳ ಪ್ರಕಾರ ಇದು ಶೂಟಿಂಗ್ ವಿಡಿಯೊ ಅಲ್ಲ ಎನ್ನಲಾಗಿದೆ.
ಮಲಯಾಳಂ ಮೂಲದ ನಟಿ, ನಿರ್ದೇಶಕಿ ಗೀತು ಮೋಹನ್‌ದಾಸ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಬರೋಬ್ಬರಿ 170 ಕೋಟಿ ರೂಪಾಯಿ ಬಜೆಟ್‌ನ ಈ ಯಶ್ ಚಿತ್ರ ಡ್ರಗ್ ಮಾಫಿಯಾ ಬಗ್ಗೆ ಬೆಳಕು ಚೆಲ್ಲಲಿದೆ ಎಂದು ಮೂಲಗಳು ತಿಳಿಸಿದ್ದು, ಪ್ರಮುಖ ಪಾತ್ರದಲ್ಲಿ ಯಾರೆಲ್ಲ ನಟಿಸುತ್ತಿದ್ದಾರೆ ಎನ್ನುವ ವಿಚಾರವನ್ನು ಚಿತ್ರತಂಡ ಇದುವರೆಗೆ ಬಹಿರಂಗಪಡಿಸಿಲ್ಲ. 2025ರಲ್ಲಿ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆ ಕಾಣಲಿದೆ. ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾದಲ್ಲಿ ಡ್ರಗ್ಸ್ ಬಗ್ಗೆ ಇರಲಿದೆಯಂತೆ. ಗೋವಾದಲ್ಲಿ ಸಿನಿಮಾ ಶೂಟ್ ನಡೆಯಲಿದೆ ಎಂದು ವರದಿ ಆಗಿತ್ತು. ಅಂತೆಯೇ ಯಶ್ ಅವರು ಗೋವಾದಲ್ಲಿ ಈ ಚಿತ್ರದ ಶೂಟ್ನಲ್ಲಿ ಬ್ಯುಸಿ ಇದ್ದಾರೆ.
ಇದನ್ನೂ ಓದಿ: Actor Yash: ವಿಚಿತ್ರ ಲುಕ್‌ನಲ್ಲಿ ಕಂಡ ರಾಕಿಂಗ್ ಸ್ಟಾರ್ ಯಶ್: ಫ್ಯಾನ್ಸ್‌ಗೆ ಹೆಚ್ಚಿತು ಕುತೂಹಲ!
Jai #YashBOSS 💥
— ฿Ø₴₴ ₵ɄⱠ₮ ᵀᴹ (@Duckhaters777) March 14, 2024
Jai geethu akka 💥 https://t.co/G8Cy5FbLeN
ಕಥೆಗೆ ಬಹು ಮುಖ್ಯ ತಿರುವು ನೀಡುವ ಪಾತ್ರದಲ್ಲಿ ಕರೀನಾ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಈ ಹಿಂದೆಯೂ ಯಶ್ ಬಾಲಿವುಡ್ ಕಲಾವಿದರ ಜತೆ ತೆರೆ ಹಂಚಿಕೊಂಡಿದ್ದಾರೆ. ಪ್ರಶಾಂತ್ ನೀಲ್ ನಿರ್ದೇಶನದ ʼಕೆಜಿಎಫ್ 2ʼ ಚಿತ್ರದಲ್ಲಿ ಬಾಲಿವುಡ್ ತಾರೆಯರಾದ ಸಂಜಯ್ ದತ್ ಮತ್ತು ರವೀನಾ ಟಂಡನ್ ಕಾಣಿಸಿಕೊಂಡಿದ್ದರು. ಯಶ್ ಜತೆ ಇವರ ಪಾತ್ರಗಳೂ ಮೆಚ್ಚುಗೆ ಪಡೆದಿದ್ದವು. ಕೆವಿಎನ್ ಪ್ರೊಡಕ್ಷನ್ಸ್ ಅಡಿಯಲ್ಲಿ ವೆಂಕಟ್ ಕೆ. ನಾರಾಯಣ ʼಟಾಕ್ಸಿಕ್ʼ ಚಿತ್ರವನ್ನು ನಿರ್ಮಿಸಲಿದ್ದಾರೆ.