ಬೆಂಗಳೂರು: ಇಂದು (Actor Darshan) (ಫೆ.20) ಪ್ರಸನ್ನ ಚಿತ್ರಮಂದಿರದಲ್ಲಿ ʻಕಾಟೇರʼ ಸಿನಿಮಾದ 50ನೇ ದಿನದ ಸಂಭ್ರಮಾಚರಣೆ ನಡೆಯುತ್ತಿದೆ. ಈ ಸಮಾರಂಭದಲ್ಲಿ ದರ್ಶನ್ ಕೂಡ ಭಾಗಿಯಾಗಿದ್ದಾರೆ. ಇದೇ ವೇಳೆ ದರ್ಶನ್ ʻರಾಬರ್ಟ್ʼ ಸಿನಿಮಾದ ನಿರ್ಮಾಪಕ ಉಮಾಪತಿಗೆ ತಿರುಗೇಟು ಕೊಟ್ಟಿದ್ದಾರೆ. ಈ ಹಿಂದೆ ಉಮಾಪತಿ ಅವರು ಕಾಟೇರ ಟೈಟಲ್ ನಾನೇ ಕೊಟ್ಟಿದ್ದು ಎಂದು ಹಲವಾರು ಸಂದರ್ಶನಗಳಲ್ಲಿ ಹೇಳಿದ್ದರು ಆದರೆ ದರ್ಶನ್ ಇಂದಿನ ಸಮಾರಂಭದಲ್ಲಿ, ಉಮಾಪತಿಯನ್ನುದ್ದೇಶಿಸಿ ‘ತಗಡು’ ಇನ್ನಿತರೆ ಕಠು ಪದಗಳನ್ನು ಬಳಸಿ ನಿಂದಿಸಿದ್ದಾರೆ. ಇದೀಗ ಉಮಾಪತಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಉತ್ತರ ಕೊಡುವಷ್ಟು ದೊಡ್ಡ ವ್ಯಕ್ತಿ ನಾನಲ್ಲ
ʻʻನಾನು ಅವರಿಗೆಲ್ಲ ಉತ್ತರ ಕೊಡುವಷ್ಟು ದೊಡ್ಡ ವ್ಯಕ್ತಿ ನಾನಲ್ಲ. ತಗಡುಗಳು..ತಗಡಿನ ಹಾಗೇ ಇರಬೇಕು. ದೊಡ್ಡ ವ್ಯಕ್ತಿಗಳು ಮಾತನಾಡಿದ್ದಾರೆ ತೊಂದರೆ ಇಲ್ಲ. ದೊಡ್ಡವರು ಮಾತನಾಡಿದ್ದಾರೆ. ಅದಕ್ಕೆಲ್ಲ ಉತ್ತರ ಕೊಟ್ಟುಕೊಂಡು ಕುಳಿತುಕೊಳ್ಳಲು ಆಗುತ್ತದೆಯಾ? ಈಗ ಎಲ್ಲ ಕತೆಗಳನ್ನು ಸಿನಿಮಾ ಮಾಡೋಕಾಗಲ್ಲ. ‘ಕಾಟೇರ’ ಟೈಟಲ್ ಯಾರ ಬ್ಯಾನರ್ ಅಲ್ಲಿ ರಿಜಿಸ್ಟರ್ ಆಯ್ತು ಎಂಬುದು ಚೇಂಬರ್ನಲ್ಲಿ ಮಾಹಿತಿ ಸಿಗುತ್ತದೆ. ಟೈಟಲ್ ರೆಫರ್ ಮಾಡಿದ್ರು. ಅದನ್ನು ನನ್ನ ಹೆಸರಲ್ಲಿ ರಿಜಿಸ್ಟರ್ ಮಾಡಿಸಿಕೊಂಡಿದ್ದೆ. ‘ಮದಗಜ’ ಸಿನಿಮಾ ಟೈಟಲ್ ರಾಮಮೂರ್ತಿ ಅವರ ಬಳಿ ಇತ್ತು, ನೀವು ‘ಮದಗಜ’ ಕೊಡಿ ನಾನು ‘ಕಾಟೇರ’ ಕೊಡ್ತೀನಿ ಎನ್ನುವ ಒಪ್ಪಂದದ ಮೇಲೆ ಟೈಟಲ್ ಕೊಟ್ಟೆ’ ಎಂದಿದ್ದಾರೆ ಉಮಾಪತಿ.
ಎಲ್ಲದಕ್ಕೂ ಉತ್ತರ ಕೊಟ್ಟುಕೊಂಡು ಕುಳಿತುಕೊಳ್ಳಲು ಆಗಲ್ಲ
ಕಾಟೇರ ವಿಚಾರವಾಗಿ ಮಾತನಾಡಿ ʻಕಥೆಯನ್ನು ಎಲ್ಲರೂ ಕೂತು ಚರ್ಚಿಸಿಯೇ ಮಾಡಿದ್ದು. ಅದರಲ್ಲಿ ಪ್ರಮುಖ ಪಾತ್ರ ನಂದಿತ್ತು. ಈಗ ಹಾಗಲ್ಲ ನಿರ್ದೇಶಕರು ಅವರ ಕಡೆ ಇದ್ದಾರೆ. ಅವರ ಅಕ್ಕ ಪಕ್ಕದಲ್ಲಿ ಇರೋರು ಸಪೋರ್ಟ್ ಮಾಡುತ್ತಾರೆ. ಈಗ ನಾವು ಎಲ್ಲದಕ್ಕೂ ಉತ್ತರ ಕೊಟ್ಟುಕೊಂಡು ಕುಳಿತುಕೊಳ್ಳಲು ಆಗಲ್ಲ. ನಾವು ತಗಡಗಳು ತಗಡಗಳಾಗಿಯೇ ಇರಬೇಕುʼʼಎಂದರು.
ಇದನ್ನೂ ಓದಿ: Actor Darshan: ಅಯ್ಯೋ ತಗಡೇ, ಯಾಕಪ್ಪ ಗುಮ್ಮಿಸ್ಕೋತಿಯಾ: ಉಮಾಪತಿಗೆ ದರ್ಶನ್ ವಾರ್ನಿಂಗ್!
ಕಾಲಯ ತಸ್ಮೈ ನಮಃ,
ʻʻವಾದ ಮಾಡುವಷ್ಟು ದೊಡ್ಡ ವ್ಯಕ್ತಿ ನಾನಲ್ಲ. ಅವರ ಸರಿ ಸಮಾನಕ್ಕೆ ಇರೋ ವ್ಯಕ್ತಿ ನಾನಲ್ಲ. ಹಾಗಾಗಿ ಅವರ ಹೇಳಿದ್ದಕ್ಕೆ ನಾವು ವಾದ ಮಾಡೋಕು ಆಗಲ್ಲ. ಹರ್ಟ್ ಅಂತಲ್ಲ. ನಮಗೆ ಮಾಡೋಕೆ ಕೆಲಸ ತುಂಬ ಇದೆ. ಅವರಷ್ಟು ಬೆಳೆದಾಗ ನಾವು ಉತ್ತರ ಕೊಡೋಣ. ಕಾಲಯ ತಸ್ಮೈ ನಮಃ, ಎಲ್ಲಾದಕ್ಕೂ ಉತ್ತರ ಕೊಡಲೇ ಬೇಕು ಎಂದೇನಿಲ್ಲ. ಅವರು ಗೆದ್ದಿದ್ದಾರೆ ಖುಷಿಯಾಗಿದ್ದಾರೆ. ನಮ್ಮಿಂದ ಅವರ ಗೆಲುವಿಗೆ ಏನು ಕೊಡುಗೆ ಇಲ್ಲʼʼ ಎಂದರು.
ʻಹಿಂದೆಯೇ ಒಮ್ಮೆ ಮಾತನಾಡಿ ಸಿಕ್ಕಿ ಹಾಕಿಕೊಂಡಿದ್ದ ಎಂದು ದರ್ಶನ್ ಹೇಳಿದ ಮಾತಿಗೆ ಪ್ರತಿಕ್ರಿಯಿಸಿದ ಉಮಾಪತಿ, ಯಾರು ಯಾರು ಸಿಕ್ಕಿ ಬಿದ್ದರು? ಯಾರು ಏನು ಮಾಡಿಕೊಂಡರು? ಅವರೆಲ್ಲ ದೊಡ್ಡ ವ್ಯಕ್ತಿಗಳು. ನಮ್ಮ ಹಾಸಿಗೆ ಇದ್ದಷ್ಟು ನಾವು ಕಾಲು ಚಾಚಬೇಕು. ನಾನು ತಪ್ಪು ಮಾಡಿದ್ದಾಗಿದ್ದರೆ ಲೀಗಲಿ ಮೂವ್ ಮಾಡಬಹುದಿತ್ತು, ಯಾಕೆ ಮಾಡಲಿಲ್ಲ’ ಎಂದು ಪ್ರಶ್ನೆ ಮಾಡಿದರು. ʻಕಾಟೇರ ನಿಮ್ಮದೇ ಅಂತ ಕ್ಲೇಮ್ ಮಾಡ್ತೀರಾ?ʼʼ ಎಂದು ಕೇಳಿದಾಗ, ಮಾತನಾಡಿʻʻ ‘ಬಾಯಲ್ಲಿ ಏನು ಬೇಕಾದರೂ ಹೇಳಬಹುದು ಆದರೆ ಮನಸಾಕ್ಷಿಗೆ ಮೋಸ ಮಾಡಿಕೊಳ್ಳಲು ಸಾಧ್ಯವಿಲ್ಲ. ಕತೆ ಮಾಡಿಸಬೇಕಾದರೆ ಯಾರು ಮಾಡಿಸಿದ್ದು ಎಂಬುದು ಎಲ್ಲರಿಗೂ ಗೊತ್ತಿದೆ. ದೊಡ್ಡ ವ್ಯಕ್ತಿ ತರುಣ್ ಸುಧೀರ್ಗೆ ಸಹ ಗೊತ್ತಿದೆ. ಈಗ ನಾವು ಕಾಲು ಧೂಳು ಸಮನಾಗಿ ಕಾಣಿಸುತ್ತಿದ್ದೇವೆʼʼ ಎಂದು ಬೇಸರ ಹೊರ ಹಾಕಿದರು ಉಮಾಪತಿ.