ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ (Upendra Movie) ನಟನೆಯ “ಉಪೇಂದ್ರʼ ಸಿನಿಮಾದ “ಓ ನಲ್ಲ.. ಏನಿಲ್ಲ” ಹಾಡು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಟ್ರೆಂಡಿಂಗ್ನಲ್ಲಿದೆ. ಕ್ರಿಯೇಟಿವ್ ಆಗಿ ಹೊಸ ಪ್ರತಿಭೆಗಳು ರೀಲ್ಸ್ ಹಂಚಿಕೊಳ್ಳಲು ಶುರು ಮಾಡಿದ್ದಾರೆ. ಜತೆಗೆ ಈ ಹಾಡಿಗೆ ಟ್ಯೂನ್ ಹಾಕಿದ್ದ ಗುರುಕಿರಣ್ ಕೂಡ ಇದ್ದಕ್ಕಿದ್ದಂತೆ ಹಾಡಿನ ಕ್ರೇಜ್ ಹೆಚ್ಚಾಗಿದ್ದರ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಏಕಾಏಕಿ ಈ ಹಾಡು ಟ್ರೆಂಡಿಂಗ್ ಆಗಿದ್ದು ಹೇಗೆ? ಟ್ರೆಂಡ್ ಮಾಡಿದ್ದು ಯಾರು ಎಂದು ತಿಳಿಯಲು ಮುಂದೆ ಓದಿ..
‘ಉಪೇಂದ್ರ’ ಸಿನಿಮಾದ “ಓ ನಲ್ಲ..” ಹಾಡು ಇಷ್ಟೊಂದು ಟ್ರೆಂಡಿಂಗ್ನಲ್ಲಿ ಇರಲು ಕಾರಣ ಕಲ್ಯಾಣ ಕರ್ನಾಟಕ ಭಾಗದ ಕನಕ ಅವರು. ಕನಕ ತಮ್ಮ ಇನ್ಸ್ಟಾದಲ್ಲಿ ಪ್ರೀತಿಸಿದ ಹುಡುಗಿ ಕೈ ಕೊಟ್ಟು ಹೋದಾಗ ಆಕೆ ಹೇಳಿದ ಮಾತುಗಳು ಎಂದು ಹೇಳಿ ಈ ಹಾಡಿನ ಸಾಲುಗಳನ್ನು ಪೋಸ್ಟ್ ಮಾಡಿದ್ದಾರೆ. ಇದು ಸಖತ್ ವೈರಲ್ ಆಗಿದೆ. ಇದೀಗ ರೀಲ್ಸ್ ಟ್ರೋಲ್ಗೆ ಕೂಡ ಗುರಿಯಾಗಿದೆ.
ಕನಕ ಪೋಸ್ಟ್
ಇದನ್ನೂ ಓದಿ: Nitin Gadkari: ಉತ್ತಮ ಕೆಲಸ ಮಾಡುವವರಿಗೆ ಅರ್ಹವಾದ ಗೌರವ ಸಿಗುವುದಿಲ್ಲ: ನಿತಿನ್ ಗಡ್ಕರಿ
“ಐಟಿ ರೇಡ್ ಆಗಿ ದುಡ್ಡು ಸಿಕ್ಕಿದಾಗ ಒಂದು ಮಾತು ಹೇಳ್ತಾರೆ ಮಗ.. ಏನ್ ಅಂತಲೇ.. ಓ ನಲ್ಲ.. ನಾನಲ್ಲ.. ಕರಿ Money ಮಾಲೀಕ ನಾನಲ್ಲ” ಎಂದು ಬರೆದು ಟ್ರೋಲ್ ಮಾಡಲಾಗುತ್ತಿದೆ. “ಓ ನಲ್ಲ ಕರಿ Money (ಮನಿ) ಮಾಲೀಕ ನಾನಲ್ಲ” ಎನ್ನುವ ಟ್ರೋಲ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಕನಕ ಅವರ ವಿಡಿಯೊಗೆ 32 ಲಕ್ಷ ವ್ಯೂಸ್ ಬಂದಿದೆ.
1999ರಲ್ಲಿ ʻಉಪೇಂದ್ರʼ ಸಿನಿಮಾ ಬಿಡುಗಡೆಯಾಗಿತ್ತು. 1999ರ ಅಕ್ಟೋಬರ್ 22ಕ್ಕೆ ಬಿಡುಗಡೆಯಾದ ಈ ಸಿನಿಮಾ ಹಿಟ್ ಆಗಿತ್ತು. ನಟಿ ಪ್ರೇಮಾ, ರವೀನಾ ಟಂಡನ್, ದಾಮಿನಿ ಮೂವರು ನಾಯಕಿಯರಾಗಿದ್ದರು. ಈ ಹಾಡು ಮಾತ್ರವಲ್ಲ ಸಿನಿಮಾದ ಇತರೆ ಹಾಡುಗಳು ಕೂಡ ಭಾರಿ ಸದ್ದು ಮಾಡಿದ್ದವು.
ಗುರು ಕಿರಣ್ ಪೋಸ್ಟ್
ಏನಿಲ್ಲ..ಏನಿಲ್ಲ ಪದ ಹುಟ್ಟಿದ್ದು ಹೇಗೆ?
ಆಗ ಉಪೇಂದ್ರ ಹಾಗೂ ಪ್ರೇಮಾ ಮಧ್ಯೆ ಏನೋ ಇದೆ ಎನ್ನುವ ಗಾಸಿಪ್ಗಳು ಹುಟ್ಟಿಕೊಂಡಿದ್ದವು. ಹಾಗೇನೂ ಇಲ್ಲ ಎಂದು ಹೇಳಲು ʻಉಪೇಂದ್ರʼ ಸಿನಿಮಾದಲ್ಲಿ ಗುರು ಕಿರಣ್ ಈ ಹಾಡು ಮಾಡಲು ಪ್ಲಾನ್ ಮಾಡಿದ್ದರು. ಏನಿಲ್ಲ ಏನಿಲ್ಲ ಅಂತಲೇ ಶುರು ಮಾಡಿದ್ದರು. ಹಾಗೆ ಏನೀಲ್ಲ ಏನೀಲ್ಲ ನನ್ನ ನಿನ್ನ ನಡುವೆ ಏನಿಲ್ಲ… ಹೀಗೆ ಹಲವು ಪದಗಳು ಸೇರಿ ಒಂದು ಪಲ್ಲವಿ ಕೂಡ ಆಗಿತ್ತು. ಉಪ್ಪಿ ಹೆಸರಿನ ಸಿನಿಮಾಕ್ಕೂ ಗುರುಕಿರಣ್ ಸಂಗೀತ ಕೊಟ್ಟಿದ್ದರು.