Site icon Vistara News

Uttara Kaanda Cinema: ಡಾಲಿ, ರಮ್ಯಾ, ಶಿವಣ್ಣ ಜತೆ ಅಭಿನಯಿಸುವ ಅವಕಾಶ; ಆಡಿಷನ್‌ ಎಲ್ಲಿ?

Uttara Kanda Cinema Dolly Dhananjay audition

ಬೆಂಗಳೂರು: ಕೆ.ಆರ್.ಜಿ ಸ್ಟುಡಿಯೋಸ್‌ ಸಂಸ್ಥೆಯ ಕಾರ್ತಿಕ್‌ ಮತ್ತು ಯೋಗಿ ಜಿ. ರಾಜ್ ನಿರ್ಮಾಣದ ʼಉತ್ತರಕಾಂಡʼ (uttra kaanda Cinema) ಚಿತ್ರದಲ್ಲಿ ಡಾಲಿ ಧನಂಜಯ್‌ (Dolly Dhananjay) ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರ ಉತ್ತರ ಕರ್ನಾಟಕದ ಶೈಲಿಯಲ್ಲಿ ಮೂಡಿ ಬರಲಿದೆ. ಉತ್ತರ ಕರ್ನಾಟಕದ ಶೈಲಿಯಲ್ಲಿ ʻಖೇಲ್‌ ಶುರು, ನಾಟಕ್‌ ಚಾಲುʼ ಎಂಬ ಟ್ಯಾಗ್‌ಲೈನ್‌ ಅನ್ನು ಚಿತ್ರತಂಡ ನೀಡಿದ್ದು ಸಖತ್‌ ಸೌಂಡ್‌ ಮಾಡಿತ್ತು. ಆಗಾಗ ಚಿತ್ರದ ಪೋಸ್ಟರ್ ರಿಲೀಸ್ ಮಾಡುತ್ತ ಸಿನಿಮಾದ ಅಪ್ ಡೇಟ್ ನೀಡುತ್ತಲೇ ಇರುತ್ತದೆ ಚಿತ್ರತಂಡ. ಇದೀಗ ಉತ್ತರಕಾಂಡ (Uttara kaanda) ಹೊಸ ಅಪ್‌ಡೇಟ್‌ ಹಂಚಿಕೊಂಡಿದೆ. “ಉತ್ತರಕಾಂಡ” ಚಿತ್ರಕ್ಕಾಗಿ ಚಿತ್ರ ತಂಡ ಇದೀಗ ಆಡಿಷನ್ ಆಯೋಜಿಸಿದೆ.

“ಉತ್ತರಕಾಂಡ” ಚಿತ್ರವು ಒಂದು ಕ್ರೈಂ ಡ್ರಾಮಾ ಚಿತ್ರವಾಗಿದ್ದು, ಇದನ್ನು ರೋಹಿತ್ ಪದಕಿ ನಿರ್ದೇಶಿಸಲಿದ್ದಾರೆ. ಕರುನಾಡ ಚಕ್ರವರ್ತಿ ಡಾ.‌ ಶಿವರಾಜ್‌ ಕುಮಾರ್,‌ ಡಾಲಿ‌ ಧನಂಜಯ, ಮೋಹಕ ತಾರೆ ರಮ್ಯಾ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಉತ್ತರ ಕರ್ನಾಟಕದ ಸೊಗಡನ್ನು ಹೊಂದಿರುವ ಈ‌ ಚಿತ್ರಕ್ಕಾಗಿ‌ ಚಿತ್ರ ತಂಡವು ಉತ್ತರ ಕರ್ನಾಟಕ ಭಾಗಗಳಲ್ಲಿ‌ ಆಡಿಷನ್ ಆಯೋಜಿಸಿದೆ. ಮಾರ್ಚ್ 27 ವಿಜಯಪುರದಲ್ಲಿ‌ ಹಾಗೂ 28 ಹುಬ್ಬಳ್ಳಿಯಲ್ಲಿ ಆಡಿಷನ್ ಆಯೋಜಿಸಿದೆ. ಆಡಿಷನ್‌ನಲ್ಲಿ ಭಾಗವಹಿಸಲು ವಯೋಮಿತಿ 12‌ರಿಂದ‌ 75 ವರ್ಷವಾಗಿದ್ದು, ನವ‌ ಪ್ರತಿಭೆಗಳನ್ನು ಗುರುತಿಸಿ ಅವಕಾಶ ನೀಡುವ ಉದ್ದೇಶವನ್ನು ಚಿತ್ರ‌ತಂಡ ಹೊಂದಿದೆ.

ಇದನ್ನೂ ಓದಿ: Film Festival: ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ನಟ ಡಾಲಿ ಧನಂಜಯ್‌ ರಾಯಭಾರಿ

“ಬ್ಯಾನರ್‌ ನೋಡ್ಕೋತಾ ನಿತ್ರ್‌ ಏನೂ ಸಿಗಂಗಿಲ್ಲ…
ನೀ ಅಲ್ಲಲ್ಲಾ ಇಲ್ಲಿರ್ಬೇಕ್‌!
ಪಿಚ್ಚರನ್ಯಾಗ್‌ ಶಿವಣ್ಣ ಡಾಲಿ ಕೊಡ್ತಾರ್‌ ಡಿಚ್ಚಿ
ನೀ ಅವರ ಜೊತಿ ನಿಂತ್ರ್‌ ಫುಲ್‌ ಗಿಚ್ಚಿʼ ಎಂದು ಪೋಸ್ಟರ್‌ನಲ್ಲಿ ಬರೆದುಕೊಂಡಿದೆ ಚಿತ್ರತಂಡ.

ಡಾಲಿ ಧನಂಜಯ್ ನಟನೆಯ ಉತ್ತರಕಾಂಡ (Uttarkanda) ಸಿನಿಮಾ ಮೂಲಕ ಮೋಹಕ ತಾರೆ ರಮ್ಯಾ ಮತ್ತೆ ನಟಿಯಾಗಿ ಸ್ಯಾಂಡಲ್‌ವುಡ್ ಪ್ರವೇಶ ಮಾಡುತ್ತಿರುವ ವಿಷಯ ಗೊತ್ತೇ ಇದೆ. ಚರಣ್ ರಾಜ್ ಅವರು ಸಂಗೀತ ನಿರ್ದೇಶನ ಮಾಡುತ್ತಿರುವ ಈ ಚಿತ್ರಕ್ಕೆ ಸ್ವಾಮಿ ಅವರು ಛಾಯಾಗ್ರಾಹಕರಾಗಿದ್ದಾರೆ. ದೀಪು ಎಸ್ ಕುಮಾರ್ ಅವರು ಸಂಕಲನ ಮತ್ತು ವಿಶ್ವಾಸ್ ಕಶ್ಯಪ್ ಅವರು ವಿನ್ಯಾಸದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ʼಟಗರುʼ ಚಿತ್ರದ ನಂತರ ತೆಲುಗಿನ ʼಪುಷ್ಟʼ ಸಿನಿಮಾದಲ್ಲಿ ಡಾಲಿ ಕಾಣಿಸಿಕೊಂಡರು. ʼರತ್ನನ್‌ ಪ್ರಪಂಚʼ ಮೂಲಕ ಮತ್ತೆ ಹೆಸರು ಪಡೆದರು. ʼಉತ್ತರಕಾಂಡʼ ಚಿತ್ರವನ್ನು ವಿಜಯ್‌ ಕಿರಂಗದೂರು ಅವರು ಪ್ರಸ್ತುತಪಡಿಸುತ್ತಿದ್ದಾರೆ.

Exit mobile version