ಬೆಂಗಳೂರು: ವಸಿಷ್ಠ ಸಿಂಹ ನಟನೆಯ ‘ಲವ್ ಲಿ’ ಚಿತ್ರದ ಟ್ರೈಲರ್ ಲಾಂಚ್ ಕಾರ್ಯಕ್ರಮಕ್ಕೆ ರಿಷಬ್ ಆಗಮಿಸಿ ಶುಭ ಕೋರಿದ್ದಾರೆ. ಹರಿಪ್ರಿಯಾ ಹಾಗೂ ರಿಷಬ್ ಶೆಟ್ಟಿ ‘ರಿಕ್ಕಿ’ ಸಿನಿಮಾದಲ್ಲಿ (Rikky Movie) ಒಟ್ಟಾಗಿ ಕೆಲಸ ಮಾಡಿದ್ದರು. ಇವರ ಮಧ್ಯೆ ಒಳ್ಳೆಯ ಪರಿಚಯ ಇದೆ. ‘ಲವ್ ಲಿ’ ಚಿತ್ರವನ್ನು ಚೇತನ್ ಕೇಶವ್ ನಿರ್ದೇಶನ ಮಾಡುತ್ತಿದ್ದು, ವಸಿಷ್ಠ ಸಿಂಹಗೆ ನಾಯಕಿಯಾಗಿ ಜಾರ್ಖಂಡ್ ಮೂಲದ ಸ್ಟೆಫಿ ಪಟೇಲ್ ನಟಿಸುತ್ತಿದ್ದಾರೆ. ಸುಬ್ಬಲಕ್ಷ್ಮಿ ಸಂಸಾರ ಸೀರಿಯಲ್ ಖ್ಯಾತಿಯ ಸಮೀಕ್ಷಾ ಚಿತ್ರದಲ್ಲಿ ಪ್ರಮುಖ ರೋಲ್‌ನಲ್ಲಿ ಮಿಂಚಲಿದ್ದಾರೆ. ಟ್ರೈಲರ್ ಲಾಂಚ್ ವೇಳೆ ವೇದಿಕೆಯಲ್ಲಿ ರಿಷಬ್ ಅವರ ಕಾಲಿಗೆ ಬಿದ್ದರು ವಸಿಷ್ಠ ಸಿಂಹ.
ರಿಷಬ್ ಅವರ ಕಾಲಿಗೆ ಬಿದ್ದ ಬಳಿಕ ವಸಿಷ್ಠ ಅವರು ಮಾತನಾಡಿ ʻʻನಾಡಿಗೆ ಹಮ್ಮೆ ತಂದು ಕೊಟ್ಟ ಕಾಂತಾರ ಸಿನಿಮಾವನ್ನು ನೀಡಿದವರು ರಿಷಬ್. ನನ್ನ ಮೇಲೆ ಸಿನಿಮಾ ಪ್ರಭಾವ ಬೀರಿದೆ. ಅನುಭವ ಕೂಡ ಕೊಟ್ಟಿದೆ. ಕಾಂತಾರ 1 ಕೂಡ ಆಗ್ತಿದೆ. ನಿಮ್ಮ ಆಶೀರ್ವಾದ ನಮ್ಮ ಮೇಲೆ ಇರಬೇಕುʼʼ ಎಂದರು.
ಟ್ರೈಲರ್ ಲಾಂಚ್‌ಗೆ ಆಗಮಿಸಿ ರಿಷಬ್ ಮಾತನಾಡಿ ʻʻರಾಜಾಹುಲಿಯಿಂದ ಇಲ್ಲಿವರೆಗೂ ವಸಿಷ್ಠ ಸಿನಿಮಾಗಳನ್ನು ನೋಡಿಕೊಂಡು ಬಂದಿದ್ದೇನೆ. ಗೋಧಿ ಬಣ್ಣದಲ್ಲಿ ಇವರ ಬೇಸ್ ವಾಯ್ಸ್ ಕೇಳಿ, ಯಾವಾಗಲೂ ಮಿಮಿಕ್ರಿ ಮಾಡುತ್ತಿದ್ದೆ. ಚಿಟ್ಟೆ, ಕೆಜಿಎಫ್ ಆಯ್ತು. ಈಗ ಲವ್‌ಲಿ ಸಿನಿಮಾ ರಿಲೀಸ್‌ಗೆ ಸಜ್ಜಾಗಿದ್ದಾರೆ. ಇದು ಮಾಸ್ ಸಿನಿಮಾ. ನನ್ನ ಮೊದಲ ನಿರ್ದೇಶನದಲ್ಲಿ ಹರಿಪ್ರಿಯಾ ಮೊದಲ ನಾಯಕಿ ಆಗಿದ್ದರು. ಕನ್ನಡ ಚಿತ್ರರಂಗಕ್ಕೆ ವಸಿಷ್ಠ ಆಸ್ತಿ ಆಗ್ತಾರೆ.ಜೂನ್ 14ಕ್ಕೆ ಸಿನಿಮಾ ರಿಲೀಸ್ ಆಗ್ತಿದೆ. ಥಿಯೇಟರ್ ಅಲ್ಲೇ ಸಿನಿಮಾ ನೋಡಿʼʼ ಎಂದರು.
ಇದನ್ನೂ ಓದಿ: Dolly Dhananjay: ದಾವಣಗೆರೆಯಲ್ಲಿ ‘ಕೋಟಿ’ ಅಬ್ಬರ; ಜೂನ್ 14ರಂದು ಸಿನಿಮಾ ತೆರೆಗೆ!
ಕಾರ್ಯಕ್ರಮದಲ್ಲಿ ರಿಷಬ್ ಶೆಟ್ಟಿ ಅವರು ಹರಿಪ್ರಿಯಾ ಅವರಿಗೆ ಚಾಕೊಲೇಟ್ ಗಿಫ್ಟ್ ನೀಡಿದ್ದಾರೆ. ಇನ್ನು ಲವ್‌ಲಿ ತಂಡ ರಿಷಬ್ ಅವರಿಗೆ ಪಾದರಕ್ಷೆಗಳನ್ನು ಬಿಟ್ಟು ವರಾಹ ವಿಗ್ರಹ ಗಿಫ್ಟ್ ಕೂಡ ನೀಡಿದ್ದಾರೆ. ಈ ವೇಳೆ ವಸಿಷ್ಠ ಪತ್ನಿ ಹರಿಪ್ರಿಯಾ ಮಾತನಾಡಿದ್ದಾರೆ. ‘ನನ್ನ ಸಿನಿಮಾಗೂ ನಾನು ಇಷ್ಟು ನರ್ವಸ್ ಆಗಿರಲಿಲ್ಲ. ನನ್ನ ಗಂಡನ ಸಿನಿಮಾಗೆ ನರ್ವಸ್ ಆಗ್ತಿದೆ’ ಎಂದರು ಹರಿಪ್ರಿಯಾ.
ಲವ್ ಲಿ’ ಚಿತ್ರದಲ್ಲಿ ಮಾಸ್ಟರ್ ಆನಂದ್ ಪುತ್ರಿ ವಂಶಿಕಾ, ಸಾಧುಕೋಕಿಲ, ದತ್ತಣ್ಣ, ಮಾಳವಿಕಾ, ಶೋಭ್ ರಾಜ್, ಸೇರಿದಂತೆ ಹಲವು ಕಲಾವಿದರು ತಾರಾಗಣದಲ್ಲಿದ್ದಾರೆ. ಲವ್ ಲಿ ಚಿತ್ರವನ್ನು ರವೀಂದ್ರ ಕುಮಾರ್ ನಿರ್ಮಾಣ ಮಾಡುತ್ತಿದ್ದಾರೆ. ಅಶ್ವಿನ್ ಕೆನಡಿ ಕ್ಯಾಮೆರಾ ವರ್ಕ್, ಹರೀಶ್ ಕೊಮ್ಮೆ ಸಂಕಲನ, ಅನೂಪ್ ಸೀಳಿನ್ ಸಂಗೀತ ನಿರ್ದೇಶನ ಚಿತ್ರಕ್ಕಿದೆ.
ಇದೊಂದು ಕಮರ್ಶಿಯಲ್ ಲವ್ ಸ್ಟೋರಿ ಸಿನಿಮಾ. ರೌಡಿಸಂ ಕಥಾಹಂದರ ಕೂಡ ಇದೆ. ನೈಜ ಘಟನೆಯಿಂದ ಸ್ಪೂರ್ತಿ ಪಡೆದು ಅದನ್ನು ಸಿನಿಮೀಯ ರೀತಿಯಲ್ಲಿ ಹೇಳ ಹೊರಟಿದೆ ಚಿತ್ರತಂಡ. ಎಂಟರಿಂದ ಹತ್ತು ಭಾವನೆಗಳನ್ನು ಒಮ್ಮೆಲೆ ಕ್ಯಾರಿ ಮಾಡುವ ಅವಕಾಶ ಈ ಚಿತ್ರದಲ್ಲಿ ಸಿಕ್ಕಿದೆ ಎಂದು ಹಿಂದೊಮ್ಮೆ ವಸಿಷ್ಠ ಸಿಂಹ ಹೇಳಿಕೊಂಡಿದ್ದರು.