Site icon Vistara News

Vijay Suriya: ಎರಡನೇ ಮಗುವಿನ ಫೋಟೊ ರಿವೀಲ್‌ ಮಾಡಿದ ಗುಳಿಕೆನ್ನೆ ನಟ ವಿಜಯ್ ಸೂರ್ಯ!

Vijay Suriya reveal second child

‘ಅಗ್ನಿಸಾಕ್ಷಿ’ ,’ನಮ್ಮ ಲಚ್ಚಿ’ ಧಾರಾವಾಹಿ ಖ್ಯಾತಿಯ ನಟ ವಿಜಯ್ ಸೂರ್ಯ (Vijay Suriya) ಅವರು ಚೈತ್ರಾ ಶ್ರೀನಿವಾಸ್ ಎಂಬುವವರನ್ನು ಮದುವೆಯಾಗಿ ಐದು ವರ್ಷಗಳಾಗಿದ್ದು, ಪತ್ನಿಗೆ ಆನಿವರ್ಸರಿ ವಿಶ್ ಹೇಳಿದ್ದಾರೆ.

ಗುಳಿಕೆನ್ನೆಯ ನಟ ವಿಜಯ್ ಸೂರ್ಯ ಪ್ರೇಮಿಗಳ ದಿನದಂದೇ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದರು.

‘ಹ್ಯಾಪಿ ಅನಿವರ್ಸರಿ ಬಾಬಾ’ ಎಂದು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ನಟ ವಿಜಯ್ ಸೂರ್ಯ ಹಾಕಿಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ತಮ್ಮ ಎರಡನೇ ಮಗನ ಮುಖವನ್ನು ರಿವೀಲ್ ಮಾಡಿದ್ದಾರೆ.

ಮೊದಲನೇ ಮಗ ಸೋಹನ್ ಸೂರ್ಯಗೂ ಗುಳಿಕೆನ್ನೆ ಇರುವುದು ಇವರ ಅಭಿಮಾನಿಗಳಿಗೆ ಖುಷಿ ಕೊಟ್ಟಿತ್ತು. ಇದೀಗ ಎರಡನೇ ಮಗುವಿನ ಫೋಟೊ ರಿವೀಲ್‌ ಮಾಡಿದ್ದಾರೆ.

ಇದನ್ನೂ ಓದಿ : Jio Cinema : ಜಿಯೋಸಿನಿಮಾದ ‘ಜೀತೋ ಧನ್ ಧನಾ ಧನ್‌’ ಸ್ಪರ್ಧೆಗೆ ಟಿವಿಎಸ್​ ಯೂರೋಗ್ರಿಪ್​ ಪ್ರಾಯೋಜಕತ್ವ

ವಿಜಯ್ ಸೂರ್ಯ ಅವರ ಕಿರುತೆರೆ ಪಯಣ ಶುರುವಾಗಿದ್ದು ‘ಉತ್ತರಾಯಣ’ ಧಾರಾವಾಹಿಯ ಮೂಲಕ.’ಲಕ್ಷ್ಮಿ ಬಾರಮ್ಮ’ ಧಾರಾವಾಹಿಯಲ್ಲಿ ಸಿದ್ಧಾರ್ಥ್ ಆಗಿ ಅಭಿನಯಿಸಿದರು ವಿಜಯ್ ಸೂರ್ಯ. ಮುಂದೆ ‘ಅಗ್ನಿಸಾಕ್ಷಿ’ ಧಾರಾವಾಹಿಯಲ್ಲಿಯೂ ನಾಯಕ ಸಿದ್ಧಾರ್ಥ್ ಆಗಿ ಕಂಡಿದ್ದರು.

Exit mobile version