Site icon Vistara News

Vinod Raj: ಲೀಲಮ್ಮನ ಮಗ, ನಟ ವಿನೋದ್‌ ರಾಜ್‌ ಆಸ್ಪತ್ರೆಗೆ ದಾಖಲು

Vinod Raj admitted hospital

ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟಿ ದಿವಂಗತ ಲೀಲಾವತಿ ಪುತ್ರ, ನಟ ವಿನೋದ್‌ ರಾಜ್‌ (Vinod Raj) ಆಸ್ಪತ್ರೆಗೆ ದಾಖಲಾಗಿದ್ದಾರೆ. ಕರುಳಿನ ಸಮಸ್ಯೆಯಿಂದ ಇವರು ನೆಲಮಂಗಲದ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂಲಗಳ ಪ್ರಕಾರ 11 ವರ್ಷಗಳ ಹಿಂದೆ ಹಾರ್ಟ್ ಆಪರೇಷನ್‌ಗೆ ಒಳಗಾಗಿ ಸ್ಟಂಟ್ ಹಾಕಿಸಿಕೊಂಡಿದ್ದರು ವಿನೋದ್ ರಾಜ್. ಇದೀಗ ಅದೇ ಸ್ಟಂಟ್‌ನಿಂದ ಕರುಳಿನ ಸಮಸ್ಯೆ ಎದುರಾಗಿದೆ ಎನ್ನಲಾಗಿದೆ. ಸದ್ಯ ಆಪರೇಷನ್‌ಗೆ ಒಳಗಾಗಿದ್ದಾರೆ ವಿನೋದರಾಜ್. ಇನ್ನು ಎರಡು ದಿನಗಳ ಕಾಲ ಆಸ್ಪತ್ರೆಯಲ್ಲಿ ವಿಶ್ರಾಂತಿ ಪಡೆಯಲಿದ್ದಾರೆ ಎಂದು ಮೂಲ ತಿಳಿಸಿದೆ.

ಇತ್ತೀಚೆಗೆ ವಿನೋದ್ ರಾಜ್ ಸಮಾಜಮುಖಿ ಕೆಲಸಗಳನ್ನು ಮಾಡಿ ಸುದ್ದಿಯಾಗಿದ್ದರು. ಸ್ಯಾಂಡಲ್​​ವುಡ್ ನಟ ವಿನೋದ್ ರಾಜ್ ಅವರು ಬೆಂಗಳೂರು ನಗರದ ನೆಲಮಂಗಲದ ಕರೆಕಲ್ ಕ್ರಾಸ್​ನಿಂದ ಸೋಲದೇವನಹಳ್ಳಿವರೆಗೂ ರಸ್ತೆ ಗುಂಡಿಗಳನ್ನು ಮುಚ್ಚುವ ಕೆಲಸ ಮಾಡಿದ್ದರು ಸರ್ಕಾರದ ಯಾವುದೇ ಅನುದಾನಕ್ಕೆ ಕಾಯದೇ ವಿನೋದ್‌ ರಾಜ್‌ ತಾವೇ ಸ್ವತಃ ನಿಂತು ತಮ್ಮ ಸ್ವಂತ ಖರ್ಚಿನಲ್ಲಿ ರಸ್ತೆ ರಿಪೇರಿ ಕೆಲಸ ಮಾಡಿಸಿದ್ದರು. ನೆಲಮಂಗಲದ ಕರೆಕಲ್ ಕ್ರಾಸ್​ನಿಂದ ಸೋಲದೇವನಹಳ್ಳಿವರೆಗೂ ಗುಂಡಿ ಬಿದ್ದ ರಸ್ತೆ ಹಾಗೂ ಕೆಟ್ಟು ಹೋದ ರಸ್ತೆಗಳನ್ನು ಸರಿ ಪಡಿಸಿದ್ದರು. ಈ ಮೂಲಕ ಮಳೆಗಾಲ ಆರಂಭವಾಗುವ ಮೊದಲೇ ವಿನೋದ್ ರಾಜ್ ರಸ್ತೆಯನ್ನು ರಿಪೇರಿ ಮಾಡಿಸಿದ್ದರು.

ಇದೀಗ ಹೆಂಡತಿ ಮಗನ ಜತೆ ನೆಲಮಂಗಲದಲ್ಲಿ ವಾಸವಿದ್ದಾರೆ. 1987ರವರೆಗೂ ಲೀಲಾವತಿ ಅವರ ಮಗ ಕೇವಲ ವಿನೋದ್‌ ಆಗಿದ್ದರು. ಖ್ಯಾತ ನಿರ್ಮಾಪಕ, ನಿರ್ದೇಶಕ ದ್ವಾರಕೀಶ್‌ ಅವರು ವಿನೋದ್‌ ಗಾಗಿ ಡ್ಯಾನ್ಸ್‌ ರಾಜಾ ಡ್ಯಾನ್ಸ್‌ ಸಿನಿಮಾವನ್ನು ನಿರ್ಮಿಸಿದಾಗ ವಿನೋದ್‌ ಎಂಬ ಹೆಸರನ್ನು ವಿನೋದ್‌ ರಾಜ್‌ ಆಗಿ ಪಡೆದರು.

ಇದನ್ನೂ ಓದಿ: Actor Darshan: ʻಡೆವಿಲ್‌ʼಗೆ ಜೈಲು ಗ್ಯಾರಂಟಿ ಆದ್ರೆ ಮುಂದಿನ ಸಿನಿಮಾಗಳ ಗತಿಯೇನು? ನಿರ್ಮಾಪಕರಿಗೆ ನಡುಕ!

80ರ ದಶಕದಲ್ಲಿ ಶಿವರಾಜ್‌ಕುಮಾರ್ ಇಂಡಸ್ಟ್ರಿಗೆ ಬಂದು ‘ಆನಂದ್’ ಸಿನಿಮಾ ಹಿಟ್ ಆಗಿತ್ತು.. ದ್ವಾರಕೀಶ್ ಅವರು ಅಣ್ಣಾವ್ರ ಜತೆ ಮೇಯರ್ ಮುತ್ತಣ್ಣ ಮತ್ತು ಭಾಗ್ಯವಂತರು ಸಿನಿಮಾ ಮಾಡಿದರು. ಮುಂದೆ ಡಾ. ರಾಜ್‌ ಅವರ ಡೇಟ್ಸ್‌ ಸಿಕ್ಕಿರಲಿಲ್ಲ. ಆಗ ದ್ವಾರಕೀಶ್‌ ಅವರು ಲೀಲಾವತಿ ಅವರ ಪುತ್ರ ವಿನೋದ್‌ ನನ್ನು ನಾಯಕನಾಗಿ ಮಾಡಿ ಸಿನಿಮಾ ಮಾಡಲು ನಿರ್ಧರಿಸಿದರು. ಲೀಲಾವತಿಯವರು ಒಪ್ಪಿಕೊಂಡಾಗ ಹುಟ್ಟಿದ್ದೇ ಡ್ಯಾನ್ಸ್‌ ರಾಜಾ ಡ್ಯಾನ್ಸ್‌. ದ್ವಾರಕೀಶ್‌ ಅವರು ಈ ಸಿನಿಮಾಕ್ಕಾಗಿ ವಿನೋದ್‌ ಅವರ ಹೆಸರನ್ನು ವಿನೋದ್‌ ರಾಜ್‌ ಮಾಡಿದರು.

Exit mobile version