ಬೆಂಗಳೂರು: ಬಿಗ್ ಬಾಸ್ ಖ್ಯಾತಿಯ ಒಳ್ಳೆ ಹುಡುಗ ಪ್ರಥಮ್ (Pratham) ʻಫಸ್ಟ್ ನೈಟ್ ವಿತ್ ದೆವ್ವʼ ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಈ ವೇಳೆ ದರ್ಶನ್ (Actor Darshan) ಹಾಗೂ ಉಮಾಪತಿ ನಡುವೆ ಆದ ಮನಸ್ತಾಪದ ಬಗ್ಗೆ ವಿಸ್ತಾರ ಜತೆ ಅಭಿಪ್ರಾಯ ಹಂಚಿಕೊಂಡರು.
ಪ್ರಥನ್ ಈ ಬಗ್ಗೆ ಮಾತನಾಡಿ ʻʻನಿರ್ಮಾಪಕರಿಗೆ ಒಳ್ಳೆಯದು ಆಗಬೇಕು. ಕನ್ನಡ ಚಿತ್ರರಂಗದಲ್ಲಿ ದರ್ಶನ್ ಕೂಡ ಅಪ್ರತಿಮ ನಾಯಕ. ನಾನು ಒಂದು ಮಾತು ಹೇಳ್ತೀನಿ. ಚಿತ್ರರಂಗದಲ್ಲಿ ಅಣ್ಣವರು ಇದ್ದಾರೆ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲ ನಡೆಯುತ್ತಿದ್ದೇವೆ. ವಿನಮ್ರತೆಯಿಂದ ಹೇಗಿರಬೇಕು ಎಂಬದನ್ನು ಹೇಳಿಕೊಟ್ಟಿದ್ದು ಅಣ್ಣಾವ್ರು. ಇನ್ನು ದರ್ಶನ್ ಅವರು ತುಂಬ ಒಳ್ಳೆಯ ಕಲಾವಿದರು. ಏನೋ ಆಗಿದೆ. ನಾವು ಏನು ಮಾಡಬೇಕು ಅಂದರೆ ಬುದ್ಧಿವಂತರಾದವರು ಇದನ್ನು ಇಲ್ಲಿಗೆ ಬಿಟ್ಟುಬಿಡಬೇಕು. ಅವರಿಬ್ಬರೇ ಕೂತು ಮಾತನಾಡಿ ಸಾಲ್ವ್ ಮಾಡ್ಕೋಬೆಕು. ನಾನು ಯಾರ ಬಗ್ಗೆನೂ ಕಮೆಂಟ್ ಮಾಡಲ್ಲ. ಒಂದುವರೆ ತಿಂಗಳಲ್ಲಿ ಉಮಾಪತಿ ಕಾಂಗ್ರೆಸ್ ಪಾರ್ಟಿ ಟಿಕೆಟ್ ತಗೊಂಡಿದ್ದವರು. ಉಮಾಪತಿ ಅವರು ಸಾಮಾನ್ಯ ಮನುಷ್ಯನಲ್ಲ. ಹಾಗೇ ಒಬ್ಬ ಖಳನಟನ ಮಗ ದರ್ಶನ್ ಲೈಟ್ ಬಾಯ್ ಆಗಿ ಸೂಪರ್ ಸ್ಟಾರ್ ಆಗಿದ್ದು ಸಾಮಾನ್ಯ ಅಲ್ಲ. ನಾವೆಲ್ಲ ಯಾರು ಸರ್ ನಿಮಗೆ ಬುದ್ಧಿ ಹೇಳೋಕೆ? ನಿಮಗೆ ಮ್ಯಾಚುರಿಟಿ ಇದೆ. ಉಮಾಪತಿಗೆ ಹ್ಯಾಂಡಲ್ ಮಾಡೋ ಬುದ್ಧಿವಂತಿಕೆ ಇದೆ. ಯಾಕೆ ವಿಷ್ಣುವರ್ಧನ್ ದ್ವಾರಕೀಶ್ ಅವರು ಕಿತ್ತಾಡಿಕೊಂಡಿಲ್ವಾ..? ಒಂದೇ ಫ್ಲೈಟ್ ಅಲ್ಲಿ ಕೂತ್ರು ಮುಖ ನೋಡಿಲ್ಲ ಆ ದಿಗ್ಗಜರು. ನಂತರ ಆಪ್ತಮಿತ್ರ ಹಿಟ್ ಸಿನಿಮಾ ಕೊಟ್ಟರು. ಈಗ ಉಮಾಪತಿ -ದರ್ಶನ್ ಒಂದಾದರೆ ಮತ್ತೊಂದು ಹಿಟ್ ಸಿನಿಮಾ ಖಂಡಿತ ಕೊಡಬೋದುʼʼ ಎಂದು ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: Actor Darshan: ವಿವಾದಗಳ ನಡುವೆಯೂ ನಟ ದರ್ಶನ್ ಪಾರ್ಟಿ; ಪತ್ನಿ ಜತೆ ಮಸ್ತ್ ಡಾನ್ಸ್!
ಇನ್ನು ಪ್ರಥಮ್ ಅವರ ಸಿನಿಮಾ ವಿಚಾರಕ್ಕೆ ಬಂದರೆ ʻಫಸ್ಟ್ ನೈಟ್ ವಿತ್ ದೆವ್ವʼ ತಂಡ ಇದೀಗ ಚಿತ್ರದ ಟೀಸರ್ ರಿಲೀಸ್ ಮಾಡಿದೆ. ಫಸ್ಟ್ ನೈಟ್ ವಿತ್ ದೆವ್ವ ಸಿನಿಮಾದಲ್ಲಿ ಪ್ರಥಮ್ ಲಿಪ್ ಟು ಪಿಲ್ ಕಿಸ್ಸಿಂಗ್ ಸೀನ್ ಕೂಡ ಇವೆ. ಚಿತ್ರದಲ್ಲಿ ನಿಖಿತಾ ಸ್ವಾಮಿ ಪ್ರಥಮ್ಗೆ ಜೋಡಿ ಆಗಿದ್ದಾರೆ. ಅಧ್ವಿಕ್ ವರ್ಮಾ ಸಂಗೀತ ಕೊಟ್ಟಿದ್ದಾರೆ. ನವೀನ್ ಬೀರಪ್ಪ ಈ ಚಿತ್ರಕ್ಕೆ ಹಣ ಹಾಕಿದ್ದಾರೆ. ಶೀಘ್ರದಲ್ಲಿಯೇ ಸಿನಿಮಾ ರಿಲೀಸ್ ಕೂಡ ಆಗುತ್ತಿದೆ ಎಂದು ಸಿನಿಮಾ ತಂಡ ಟೀಸರ್ನಲ್ಲಿಯೇ ಹೇಳಿಕೊಂಡಿದೆ.