Site icon Vistara News

Kannada New Movie: ಹೊಸ ಸಿನಿಮಾಗೆ ಕಥೆ ಬರೆಯಿರಿ: 1 ಲಕ್ಷ ರೂ. ಬಹುಮಾನ ಗೆಲ್ಲಿರಿ!

Write a story for a new movie one lakh rupees Win a prize kishore megalamane movie

ಬೆಂಗಳೂರು: ಇತ್ತೀಚೆಗಷ್ಟೇ ಕಿಶೋರ್ ಮೇಗಳಮನೆ (Kannada New Movie) ನಿರ್ದೇಶನದ ಹಾಗೂ ಆದಿತ್ಯ ಅಭಿನಯದ “ಕಾಂಗರೂ” ಚಿತ್ರವನ್ನು ನಿರ್ಮಿಸಿದ್ದ ಆರೋಹ ಪ್ರೊಡಕ್ಷನ್ಸ್ ಸಂಸ್ಥೆ ತನ್ನ ಎರಡನೇ ನಿರ್ಮಾಣದ ಚಿತ್ರಕ್ಕೆ ಮುಂದಾಗಿದೆ. ಈ ಚಿತ್ರಕ್ಕೆ ಕಥೆ ಬರೆಯಲು ಸಂಸ್ಥೆ ಹೊಸ ಕಥೆಗಾರರಿಗೆ ಆಹ್ವಾನ ನೀಡಿದೆ‌.

ಸ್ಟೋರಿ ಏನು?

ಶಾಲಾ ಕಾಲೇಜು ದಿನದಲ್ಲಿ ನೀವು ಮಾಡಿದ ಮೋಜು ಮಸ್ತಿ ಬಗ್ಗೆ ಕಥೆ ಬರೆಯಬೇಕು. ಶಾಲಾ ಹಾಗೂ ಕಾಲೇಜು ದಿನಗಳಲ್ಲಿ ನಿಮ್ಮ ಸ್ನೇಹಿತರ ಜತೆ ನೀವು ಸಂಭ್ರಮಿಸಿದ ಖುಷಿಯ ಕ್ಷಣಗಳು ಮತ್ತು ನೀವು ಮಾಡಿರುವ ಕಿರಿಕ್ ಗಳು ಹಾಗೂ ನಿಮ್ಮ ಹಳೆಯ ಲವ್ ಸ್ಟೋರಿಗಳ ಬಗ್ಗೆ ಮೂರು ಪುಟ ಮೀರದಂತೆ ಬರೆದು ಕಳುಹಿಸಿಬೇಕು. ಆಯ್ಕೆಯಾದ ಬರಹಕ್ಕೆ ಒಂದು ಲಕ್ಷ ಬಹುಮಾನ ಕೊಡಲಿದೆ ಚಿತ್ರತಂಡ.

ಪ್ರಥಮ ಬಹುಮಾನ 1,00,000 ರೂ.
ದ್ವಿತೀಯ ಬಹುಮಾನ 50,000 ರೂ.
ತೃತೀಯ ಬಹುಮಾನ 10 ಬರಹಗಳಿಗೆ ತಲಾ 25,000 ರೂ.

ಇದು ಸಿನಿಮಾವೊಂದಕ್ಕೆ ಬೇಕಾಗಿರುವ ಬರಹ. ಹಾಗಾಗಿ ರೋಚಕ ಎನಿಸುವ ಬರಹಕ್ಕೆ ಸೂಕ್ತ ಬಹುಮಾನವಿದೆ ಎಂದು ತಂಡ ಹೇಳಿಕೊಂಡಿದೆ. ಬರವಣಿಗೆ ಸ್ವಾರಸ್ಯಕರವಾಗಿದ್ದರೆ ಪ್ರಥಮ ಆದ್ಯತೆ, ಪೂರ್ತಿ ಕಥೆ ಬೇಡ. ಅನುಭವಿಸಿರುವ ಕೆಲ ಸನ್ನಿವೇಶಗಳನ್ನು ವಿವರವಾಗಿ ಬರೆದು ಕಳುಹಿಸಿದರೆ ಸಾಕು ಎಂದು ಹೇಳಿಕೊಂಡಿದೆ.ಪ್ರಥಮ ಮತ್ತು ದ್ವಿತೀಯ ಸ್ಥಾನಗಳನ್ನು ಗಳಿಸುವವರು ಸಿನೆಮಾದ ಚಿತ್ರಕಥೆ ವಿಭಾಗದಲ್ಲಿ ಬರೆಯುವರ ಹೆಸರನ್ನು ಬಳಸಲಾಗುವುದು ಎಂದು ಹೇಳಿದೆ ಚಿತ್ರತಂಡ.

ಲೇಖನವನ್ನು 9844460128 ಈ ವಾಟ್ಸ್‌ಆಪ್‌ ನಂಬರ್ ಕಳುಹಿಸಿಬೇಕು ಅಥವಾ kishore.megalamane@gmail.com ಇದಕ್ಕೆ ಮೇಲ್ ಮಾಡಬಹುದು.

ಇದನ್ನೂ ಓದಿ: Hamare Baarah: ಮುಸ್ಲಿಂ ಮಹಿಳೆಯರ ಕುರಿತಾದ ‘ಹಮಾರೆ ಬಾರಾ’ ಸಿನಿಮಾ ಬ್ಯಾನ್‌ ಮಾಡಿದ ಕರ್ನಾಟಕ ಸರ್ಕಾರ

ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆಯುವ ಬರಹಗಾರರಿಗೆ ಕನ್ನಡದ ಸೂಪರ್ ಸ್ಟಾರ್ ನಟಿಸಲಿರುವ ಆರೋಹ ಪ್ರೊಡಕ್ಷನ್ ನಿರ್ಮಾಣದ ದ್ವಿತೀಯ ಚಿತ್ರದಲ್ಲಿ ಕೆಲಸ ಮಾಡಲು ಚಿತ್ರತಂಡ ಅವಕಾಶ ಕೊಡಲಿದೆ. ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ.
ಕಾಂಗರೂ ಚಿತ್ರದ ನಿರ್ದೇಶಕರು ಕಿಶೋರ್ ಮೇಗಳಮನೆ,ಕಥೆಗಾರ, ಸಂಭಾಷಣೆಗಾರ ಮಾಸ್ತಿ, ಹಿರಿಯ ನಿರ್ದೇಶಕರು ಶಿವಮಣಿ,ಪದೇ ಪದೇ ಚಿತ್ರದ ನಿರ್ದೇಶಕರು ಪೀಣ್ಯ ನಾಗರಾಜ್,ಆಪರೇಷನ್ ನಕ್ಷತ್ರ ಚಿತ್ರದ ನಿರ್ದೇಶಕರು ಮಧುಸೂಧನ ತೀರ್ಪುಗಾರರ ಮಂಡಳಿಯಲ್ಲಿರುತ್ತಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ ಚಿತ್ರತಂಡ.

Exit mobile version