Site icon Vistara News

Kichcha Sudeepa: ನಾನು ಹೇಗಿದ್ದೇನೆಯೋ ಹಾಗೆಯೇ ನನ್ನನ್ನು ಸ್ವೀಕರಿಸಿದ್ದೀರಿ; ಕಿಚ್ಚ ಸುದೀಪ್‌!

Kiccha Sudeep remembers the movie journey

ಬೆಂಗಳೂರು: ಅಭಿನಯ ಚಕ್ರವರ್ತಿ, ಕಿಚ್ಚ ಸುದೀಪ್‌ (Kichcha Sudeepa) ಸಿನಿ ರಂಗಕ್ಕೆ ಕಾಲಿಟ್ಟು ಇಂದಿಗೆ 28 ವರ್ಷಗಳು ಕಳೆದಿವೆ.  ಕಿಚ್ಚ ಸುದೀಪ್‌ ಮೊದಲಿಗೆ 1997ರಲ್ಲಿ ಬಿಡುಗಡೆಯಾದ ʻತಾಯವ್ವʼ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಆ ಸಿನಿಮಾಕ್ಕೆಂದು ಅವರು ಜನವರಿ 31ರಂದು ಮೊದಲನೆಯದಾಗಿ ಬಣ್ಣ ಹಚ್ಚಿ, ಕ್ಯಾಮೆರಾ ಮುಂದೆ ನಿಂತಿದ್ದರು. ಇದೀಗ ಕಿಚ್ಚ ಅವರು ಮೊದಲ ದಿನ ಕ್ಯಾಮೆರಾ ಎದುರಿಸಿದ್ದನ್ನು ಟ್ವೀಟ್‌ ಮೂಲಕ ಹೇಳಿಕೊಂಡಿದ್ದಾರೆ.

ಕಿಚ್ಚ ಸುದೀಪ್‌ ಟ್ವೀಟ್‌ನಲ್ಲಿ ʻʻಕೆಲವು ವರ್ಷಗಳ ಹಿಂದೆ ನಾನು ಕಂಠೀರವ ಸ್ಟುಡಿಯೋದಲ್ಲಿ ಅಂಬರೀಶ್‌ ಮಾಮ ಅವರೊಂದಿಗೆ ಕ್ಯಾಮೆರಾವನ್ನು ಎದುರಿಸಿದೆ. ʻʻಬ್ರಹ್ಮʼʼ ಚಿತ್ರದ ಶೂಟಿಂಗ್‌ ಆಗ. ಈ ಸಿನಿಮಾ ಶೂಟಿಂಗ್‌ ಕೆಲವೇ ವರ್ಷವಾಗಿದೆ ಎಂಬ ಅನುಭವ. ಆಗಲೇ ಇದಕ್ಕೆ 28 ವರ್ಷಗಳು ತುಂಬಿವೆ. ಎಲ್ಲರಿಗೂ ಧನ್ಯವಾದ’ ಎಂದು ಸುದೀಪ್ ಬರೆದುಕೊಂಡಿದ್ದಾರೆ.

ಇನ್ನೊಂದು ಪೋಸ್ಟ್‌ನಲ್ಲಿ ʻʻಈ ಅದ್ಭುತ ಮನರಂಜನಾ ಕ್ಷೇತ್ರದಲ್ಲಿ 28 ಸುಂದರ ವರ್ಷಗಳು. ನನ್ನ ಜೀವನದ ಅತ್ಯಂತ ಸುಂದರ ಭಾಗವಾಗಿದೆ. ಈ ಉಡುಗೊರೆಗಾಗಿ ನಾನು ದೇವರಿಗೆ ಧನ್ಯವಾದ ತಿಳಿಸುತ್ತೇನೆ. ನನ್ನ ಪೋಷಕರು, ಕುಟುಂಬ, ಎಲ್ಲಾ ಅಮೂಲ್ಯ ತಂತ್ರಜ್ಞರು, ಬರಹಗಾರರು, ನಿರ್ಮಾಪಕರು, ನನ್ನ ಸಹ-ನಟರು, ಮಾಧ್ಯಮ, ಮನರಂಜನಾ ಚಾನೆಲ್‌ಗಳು, ವಿತರಕರು, ಪ್ರದರ್ಶಕರಿಗೆ ನನ್ನ ಪ್ರಯಾಣದ ಭಾಗವಾಗಿರುವ ಪ್ರತಿಯೊಬ್ಬರಿಗೂ ಧನ್ಯವಾದಗಳು. ಯಾವಾಗಲೂ ನನ್ನನ್ನು ಪ್ರೀತಿಸುತ್ತಿರುವುದಕ್ಕಾಗಿ, ನನ್ನ ಜೀವನದಲ್ಲಿ ನನ್ನ ಅತ್ಯಮೂಲ್ಯ ಗಳಿಕೆಯಾಗಿರುವ ಅಭಿಮಾನಿಗಳ ರೂಪದಲ್ಲಿ ನನ್ನ ಎಲ್ಲಾ ಸ್ನೇಹಿತರಿಗೆ ಒಂದು ದೊಡ್ಡ ಅಪ್ಪುಗೆ.
ಇದು ರೋಲರ್-ಕೋಸ್ಟರ್ ಸವಾರಿಯಾಗಿದೆ. ನಾನು ಜೀವನದಲ್ಲಿ ಗಳಿಸಿದ ಅತ್ಯಂತ ಅಮೂಲ್ಯ ವಿಚಾರ ಎಂದರೆ ಅದು ಫ್ಯಾನ್ಸ್. ಅವರಿಗೂ ಧನ್ಯವಾದ. ನಾನು ದೋಷರಹಿತನಲ್ಲ, ಪರಿಪೂರ್ಣನಲ್ಲ, ನಾನು ನನ್ನ ಕೈಲಾದಷ್ಟು ಪ್ರಯತ್ನಿಸಿದ್ದೇನೆ. ಮತ್ತು ಅವಕಾಶಗಳು ಬಂದಾಗ ನನ್ನ ಅತ್ಯುತ್ತಮವಾದದ್ದನ್ನು ನೀಡಿದ್ದೇನೆ. ನಾನು ಹೇಗಿದ್ದೇನೆಯೋ ಹಾಗೆಯೇ ನನ್ನನ್ನು ಸ್ವೀಕರಿಸಿದ್ದಕ್ಕಾಗಿ ಎಲ್ಲರಿಗೂ ಧನ್ಯವಾದಗಳು..ಕಿಚ್ಚʼʼಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Kichcha Sudeepa: ರಕ್ತದಲ್ಲಿ ಸುದೀಪ್ ಚಿತ್ರ ಬಿಡಿಸಿ ಮಹಿಳಾ ಅಭಿಮಾನಿಯ ಹುಚ್ಚು ಪ್ರೀತಿ; ಕಿಚ್ಚ ಹೇಳಿದ್ದೇನು?

ಕಿಚ್ಚ ಸುದೀಪ್‌ ಟ್ವೀಟ್‌

ಸಿನಿಮಾ ವಿಚಾರಕ್ಕೆ ಬಂದರೆ ಜಿಮ್‌, ವರ್ಕೌಟ್‌ ಎಂದರೆ ದೂರವೇ ಇರುತ್ತಿದ್ದ ಕಿಚ್ಚ ಸುದೀಪ್‌, ಪೈಲ್ವಾನ್‌ ಸಿನಿಮಾಗಾಗಿ ದೇಹವನ್ನು ಕಟುಮಸ್ತಾಗಿ ಬೆಳೆಸಿಕೊಂಡಿದ್ದರು. ಆ ಮೂಲಕ ಅಭಿಮಾನಿಗಳಿಗೆ ಸುದೀಪ್‌ (Kichcha Sudeep) ಅಚ್ಚರಿ ನೀಡಿದ್ದರು. ಈಗ ಮ್ಯಾಕ್ಸ್‌ ಸಿನಿಮಾಗೆ (ಕಿಚ್ಚ 46)ಅವಿರತವಾಗಿ ವರ್ಕೌಟ್‌ ಮಾಡುವ ಮೂಲಕ ಭರ್ಜರಿಯಾಗಿಯೇ ದೇಹವನ್ನು ಅಣಿಗೊಳಿಸಿದ್ದಾರೆ. ಜತೆಗೆ ಕಿಚ್ಚ 47 ಸಿನಿಮಾ ಬಗ್ಗೆ ಹೊಸ ಹೊಸ ಅಪ್‌ಡೇಟ್‌ಗಳು ಹೊರ ಬರುತ್ತಿವೆ. ಕಿಚ್ಚ 47 ಟೀಸರ್ ಮೇಕಿಂಗ್ ವಿಡಿಯೋ ಈ ಹಿಂದೆ ವೈರಲ್‌ ಆಗಿತ್ತು. ಕಿಚ್ಚ47 ಚಿತ್ರವನ್ನು ತಮಿಳಿನ ಚೇರನ್ ನಿರ್ದೇಶನ ಮಾಡಲಿದ್ದಾರೆ.

Exit mobile version