ಬೆಂಗಳೂರು: ಕನ್ನಡದ ಪ್ರತಿಷ್ಠಿತ ಚಿತ್ರ ನಿರ್ಮಾಣ ಸಂಸ್ಥೆ ‘ಹೊಂಬಾಳೆ ಫಿಲ್ಮ್ಸ್’ (Hombale Films) ನಿರ್ಮಿಸುತ್ತಿರುವ, ಯುವ ರಾಜ್‌ಕುಮಾರ್ ಅಭಿನಯದ ಚಿತ್ರ ʼಯುವʼ (Yuva Movie). ಮಾರ್ಚ್ 29ರಂದು ತೆರೆ ಕಂಡಿತ್ತು. ಆದರೀಗ ಸಿನಿಮಾ ತೆರೆ ಕಂಡ 21 ದಿನಕ್ಕೆ ಒಟಿಟಿಗೆ ಬಂದಿದೆ. ಸದ್ದಿಲ್ಲದೇ ಸಿನಿಮಾ ಅಮೇಜಾನ್ ಪ್ರೈಂನಲ್ಲಿ ಸ್ಟ್ರೀಮಿಂಗ್ (Amazon Prime) ಆಗುತ್ತಿದೆ.
ವಿಶೇಷ ಎಂದರೆ ಸಿನಿಮಾವನ್ನು ಪ್ರೈಂ ಚಂದಾದಾರರು ವೀಕ್ಷಿಸಲು ಸಾಧ್ಯವಿಲ್ಲ. ಸದ್ಯಕ್ಕೆ ಬಾಡಿಗೆ ಪದ್ಧತಿಯಲ್ಲಿ ಸಿನಿಮಾ ವೀಕ್ಷಣೆಗೆ ಲಭ್ಯವಿದೆ. 349 ರೂ. ಕೊಟ್ಟು ಸಿನಿಮಾ ವೀಕ್ಷಿಸಬೇಕಿದೆ. ಚಾಮರಾಜನಗರದಲ್ಲಿ ‘ಯುವ’ ಚಿತ್ರದ ಟೈಟಲ್ ಟ್ರ್ಯಾಕ್ ರಿಲೀಸ್ ಮಾಡಲಾಗಿತ್ತು. ಹೊಸಪೇಟೆಯಲ್ಲಿ ಅಭಿಮಾನಿಗಳ ಸಮ್ಮುಖದಲ್ಲಿ ಅದ್ಧೂರಿಯಾಗಿ ಪ್ರೀ ರಿಲೀಸ್ ಈವೆಂಟ್ ಕೂಡ ನಡೆದಿತ್ತು.ಸಿನಿಮಾ 20 ದಿನಕ್ಕೆ ಭರ್ಜರಿ ಕಲೆಕ್ಷನ್ ಮಾಡಿದೆ. ಒಟಿಟಿಗೆ ಬಂದಿದ್ದರೂ ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ.
ಈ ಚಿತ್ರದ ಮೊದಲ ಹಾಡಿಗೆ ನಿರ್ದೇಶಕ ಸಂತೋಷ್ ಆನಂದ್‌ರಾಮ್ ಸಾಹಿತ್ಯ ಬರೆದಿದ್ದಾರೆ. ನಕಾಶ್ ಅಜೀಜ್ ಜತೆ ಸೇರಿ ಸಂತೋಷ್ ಆನಂದ್ ರಾಮ್ ಹಾಗೂ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಹಾಡಿದ್ದಾರೆ. ಮೋಹನ್ ಭಜರಂಗಿ ಸಾಂಗ್ ಕೊರಿಯೋಗ್ರಫಿ ಮಾಡಿದ್ದಾರೆ. ಸುಮಾರು 3 ಕೋಟಿ ರೂ. ಮೊತ್ತಕ್ಕೆ ‘ಯುವ’ ಆಡಿಯೊ ರೈಟ್ಸ್ ಆನಂದ್ ಆಡಿಯೊ ಪಾಲಾಗಿದೆ ಎನ್ನಲಾಗಿದೆ.
ಇದನ್ನೂ ಓದಿ: Yuva Rajkumar: ʻಯುವʼನ ಆರ್ಭಟ ಶುರು: ಸಿನಿಮಾ ನೋಡಿ ಬೆಳ್ಳುಳ್ಳಿ ಕಬಾಬ್ ಚಂದ್ರು ಏನಂದ್ರು?
ಏಪ್ರಿಲ್ 23ರಂದು ಯುವ ರಾಜ್‌ಕುಮಾರ್ ಹುಟ್ಟುಹಬ್ಬ. ಮರುದಿನ ಡಾ. ರಾಜ್‌ಕುಮಾರ್ ಜಯಂತೋತ್ಸವ ಇದೆ. ಹಾಗಾಗಿ ಅದೇ ಸಂಭ್ರಮದಲ್ಲಿ ಹೊಸ ಸಿನಿಮಾ ಘೋಷಣೆ ಮಾಡುವ ನಿರೀಕ್ಷೆಯಿದೆ ಎನ್ನಲಾಗಿದೆ.