Site icon Vistara News

Yuva Trailer: ʻಯುವʼ ಟ್ರೈಲರ್‌ ಔಟ್‌; ಭರ್ಜರಿ ಆ್ಯಕ್ಷನ್, ಆ್ಯಕ್ಟಿಂಗ್‌ಗೆ ಮನಸೋತ ಫ್ಯಾನ್ಸ್‌!

Yuva Rajkumar

ಬೆಂಗಳೂರು: ಸಂತೋಷ್ ಆನಂದ್‌ರಾಮ್‌ ನಿರ್ದೇಶನ ರಾಘವೇಂದ್ರ ರಾಜ್‌ಕುಮಾರ್‌ ಅವರ ಕಿರಿಮಗ ಯುವ ರಾಜ್‌ಕುಮಾರ್ ಚೊಚ್ಚಲ ಸಿನಿಮಾ ‘ಯುವ’ ಟ್ರೈಲರ್‌ (Yuva Trailer) ಬಿಡುಗಡೆಗೊಂಡಿದೆ. ಈಗಾಗಲೇ ಹಾಡುಗಳು ಬಿಡುಗಡೆಯಾಗಿ ಹಿಟ್ ಆಗಿದ್ದು, ಟ್ರೈಲರ್‌ನಲ್ಲಿ ಅಬ್ಬರಿಸಿದ್ದಾರೆ ಯುವ ರಾಜ್‌ಕುಮಾರ್‌. ಟ್ರೈಲರ್‌ನಲ್ಲೇ ದೊಡ್ಮನೆ ಕುಡಿ ಯುವ ಸಿನಿಪ್ರೇಕ್ಷಕರಲ್ಲಿ ಭಾರಿ ನಿರೀಕ್ಷೆ ಹುಟ್ಟುಹಾಕಿದ್ದಾರೆ. ಭರ್ಜರಿ ಆ್ಯಕ್ಷನ್, ತಂದೆ ಮಗನ ಸೆಂಟಿಮೆಂಟ್ ಜತೆಗೆ ಯುವರಾಜ್ ಕುಮಾರ್ ಅಭಿನಯ ಸಖತ್ ಆಗಿ ಮೂಡಿಬಂದಿದೆ. ಮಾರ್ಚ್ 29ರಂದು ಅದ್ಧೂರಿಯಾಗಿ ಸಿನಿಮಾ ತೆರೆ ಕಾಣುತ್ತಿದೆ.

ಪ್ರಿ ರಿಲೀಸ್‌ ಇವೆಂಟ್‌

ಚಿತ್ರದಲ್ಲಿ ಕಾಲೇಜು ಹುಡುಗನ ಪಾತ್ರದಲ್ಲಿ ಯುವ ರಾಜ್‌ಕುಮಾರ್ ಬಣ್ಣ ಹಚ್ಚಿದ್ದಾರೆ. ‘ಯುವ’ ಚಿತ್ರದಲ್ಲಿ ‘ಕಾಂತಾರ’ ಬೆಡಗಿ ಸಪ್ತಮಿ ಗೌಡ ನಾಯಕಿಯಾಗಿ ಮಿಂಚಿದ್ದಾರೆ. ಕಿಶೋರ್, ಅಚ್ಯುತ್‌ ಕುಮಾರ್ ಹಾಗೂ ಸುಧಾರಾಣಿ ಚಿತ್ರದ ತಾರಾಗಣದಲ್ಲಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ, ಶ್ರೀಶ ಕುದುವಳ್ಳಿ ಛಾಯಾಗ್ರಹಣ ‘ಯುವ’ ಚಿತ್ರಕ್ಕಿದೆ. ಮಾರ್ಚ್‌ 29ರಂದು ಗುಡ್‌ ಫ್ರೈಡೆ ರಜೆ ಇದೆ. ಅದೇ ಕಾರಣಕ್ಕೆ ಅಂದೇ ಸಿನಿಮಾ ಬಿಡುಗಡೆ ಮಾಡಲು ನಿರ್ಮಾಪಕ ವಿಜಯ್ ಕಿರಗಂದೂರು ತೀರ್ಮಾನಿಸಿರುವುದಾಗಿ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Fraud Case: ಯುವತಿಗೆ ಸಿನಿಮಾ ಚಾನ್ಸ್ ಕೊಡಿಸೋದಾಗಿ ನಂಬಿಸಿ ಕೈಕೊಟ್ಟು ಪರಾರಿಯಾದ ನಟ!

ಪ್ರಿ ರಿಲೀಸ್‌ ಇವೆಂಟ್‌ ಶನಿವಾರ(ಮಾರ್ಚ್ 21) ಸಂಜೆ ಅದ್ಧೂರಿ ಕಾರ್ಯಕ್ರಮ ಏರ್ಪಡಿಸಲಾಗಿದೆ. ಪ್ರಿ ರಿಲೀಸ್‌ ಇವೆಂಟ್‌ಗೆ ಯುವ ರಾಜ್‌ಕುಮಾರ್ ಚಿಕ್ಕಮ್ಮ ಅಶ್ವಿನಿ ಪುನೀತ್ ರಾಜ್‌ಕುಮಾರ್ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ. ಶಿವರಾಜ್‌ ಕುಮಾರ್‌ ಕೂಡ ಭಾಗಿ ಆಗುವ ಸಾಧ್ಯತೆಯಿದೆ. ಇಡೀ ಚಿತ್ರತಂಡ ಹಾಜರಿರುತ್ತದೆ ಎಂದು ನಿರ್ದೇಶಕರು ಹೇಳಿದ್ದಾರೆ. ನಿಶ್ವಿಕಾ ನಾಯ್ಡು ಡ್ಯಾನ್ಸ್, ವಿಜಯ್ ಪ್ರಕಾಶ್, ನವೀನ್ ಸಜ್ಜು ಗಾಯನ ಇರುತ್ತದೆ ಎಂದು ವಿವರಿಸಿದ್ದಾರೆ.

ಇದನ್ನೂ ಓದಿ: Aishwarya Rai: ‘ಪೊನ್ನಿಯನ್ ಸೆಲ್ವನ್ 2’ಪ್ರಿ ರಿಲೀಸ್‌ ಇವೆಂಟ್‌ನಲ್ಲಿ ಕ್ಯೂಟ್‌ ಆಗಿ ಕಂಡ ಐಶ್ವರ್ಯಾ ರೈ

“ಒಬ್ಬನೇ ಶಿವ ಒಬ್ಬನೇ ಯುವ” ಸಾಂಗ್‌ಗೆ ಮೆಚ್ಚುಗೆ

ರಾಜ್ ಕುಟುಂಬದ ಅಭಿಮಾನಿಗಳಿಂದ ಯುವ ಚಿತ್ರದ ಆಡಿಯೋ ಲಾಂಚ್ ಮಾಡಿಸಲಾಗಿದ್ದು, ಹಾಡಿನಲ್ಲಿ ವರನಟ ಡಾ. ರಾಜಕುಮಾರ್‌ ಅವರ​ ಮೊಮ್ಮಗನ ಮಾಸ್ ಅವತಾರ ಕಂಡು ಫ್ಯಾನ್ಸ್​ ಫಿದಾ ಆಗಿದ್ದರು.

ಈ ಚಿತ್ರದ ಮೊದಲ ಹಾಡಿಗೆ ನಿರ್ದೇಶಕ ಸಂತೋಷ್ ಆನಂದ್‌ರಾಮ್ ಸಾಹಿತ್ಯ ಬರೆದಿದ್ದಾರೆ. ನಕಾಶ್ ಅಜೀಜ್ ಜತೆ ಸೇರಿ ಸಂತೋಷ್ ಆನಂದ್ ರಾಮ್ ಹಾಗೂ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಹಾಡಿದ್ದಾರೆ. ಮೋಹನ್ ಭಜರಂಗಿ ಸಾಂಗ್ ಕೊರಿಯೋಗ್ರಫಿ ಮಾಡಿದ್ದಾರೆ. ಸುಮಾರು 3 ಕೋಟಿ ರೂ. ಮೊತ್ತಕ್ಕೆ ‘ಯುವ’ ಆಡಿಯೊ ರೈಟ್ಸ್ ಆನಂದ್ ಆಡಿಯೊ ಪಾಲಾಗಿದೆ ಎನ್ನಲಾಗಿದೆ.

Exit mobile version