ಬೆಂಗಳೂರು: ಬಾಲಿವುಡ್ ನಟ ಸಂಜಯ್ ದತ್ (Sanjay Dutt) ಅವರಿಗೆ ಜು.29 ಶುಕ್ರವಾರ ಜನುಮ ದಿನದ ಸಂಭ್ರಮ.
ಸಂಜಯ್ ಬಾಲಿವುಡ್ ತಾರೆ ಸುನೀಲ್ ದತ್ ಹಾಗೂ ನರ್ಗಿಸ್ ದತ್ ಅವರ ಪುತ್ರ. ಸಂಜಯ್ ದತ್ ಬಾಲಿವುಡ್‌ನ ಯಶಸ್ವಿ ನಟರಲ್ಲಿ ಒಬ್ಬರು. ಅವರು ತಮ್ಮ ತಂದೆ ಸುನಿಲ್ ದತ್ ಅವರ ರೋಮ್ಯಾಂಟಿಕ್ ಆಕ್ಷನ್ ಚಿತ್ರ ರಾಕಿ(1981)ಯಲ್ಲಿ ಟೀನಾ ಅಂಬಾನಿ ಜತೆ 1981ರಲ್ಲಿ ನಟನೆ ಪ್ರಾರಂಭಿಸಿದರು. ಮಹೇಶ್ ಭಟ್ ಅವರ ಕ್ರೈಮ್ ಥ್ರಿಲ್ಲರ್ ಚಿತ್ರ ʻನಾಮ್ʼ(1986)ನಲ್ಲಿ ಅಭಿನಯಿಸಿ ಗಮನ ಸೆಳೆದರು. ಇದು ಅವರ ವೃತ್ತಿಜೀವನದಲ್ಲಿ ಒಂದು ಮಹತ್ವದ ತಿರುವು ಪಡೆದುಕೊಂಡಿತು.
ಇದನ್ನೂ ಓದಿ | Dulquer Salmaan | ಮಲಯಾಳಂ ಖ್ಯಾತ ನಟ ದುಲ್ಕರ್ ಸಲ್ಮಾನ್‌ಗೆ ಜನುಮದಿನದ ಸಂಭ್ರಮ
1991ರಲ್ಲಿ ಇವರು ಲಾರೆನ್ಸ್ ಡಿ’ಸೋಜಾ ನಿರ್ದೇಶನದ ʻಸಾಜನ್ʼ (1991) ಚಿತ್ರದಲ್ಲಿ ನಟಿಸಿದರು. ಇದು ಸೂಪರ್ ಹಿಟ್ ಆಯಿತು. ಈ ಚಿತ್ರದ ಅತ್ಯುತ್ತಮ ಅಭಿನಯಕ್ಕಾಗಿ ಸಂಜಯ್ ದತ್ ಫಿಲ್ಮ್‌ಫೇರ್ ಪ್ರಶಸ್ತಿಗೆ ಪಾತ್ರರಾದರು. ʻಖಲ್ ನಾಯಕ್ʼ (1993) ಚಿತ್ರದಲ್ಲಿನ ಅಭಿನಯಕ್ಕಾಗಿ ಅವರು ಮತ್ತೊಮ್ಮೆ ಫಿಲ್ಮ್ ಫೇರ್ ಪ್ರಶಸ್ತಿ ಪಡೆದರು.
2003ರಲ್ಲಿ ದತ್ ರಾಜ್‌ಕುಮಾರ್ ಹಿರಾನಿ ನಿರ್ದೇಶನದ ʻಮುನ್ನಾ ಭಾಯಿ M.B.B.Sನಲ್ಲಿ ಅಭಿನಯಿಸಿ ಜನಪ್ರಿಯತೆ ಗಳಿಸಿದರು. ಈ ಚಿತ್ರ ಭಾರತದಲ್ಲಿ ₹ 230 ಕೋಟಿ ಗಳಿಸಿತು. ಅತ್ಯುತ್ತಮ ಅಭಿನಯಕ್ಕಾಗಿ ದತ್ ಫಿಲ್ಮ್‌ಫೇರ್ ಪ್ರಶಸ್ತಿ ಗೆದ್ದರು. ನಟನೆಯ ಹೊರತಾಗಿ ದತ್ ಅವರು ಸಲ್ಮಾನ್ ಖಾನ್ ಜತೆ ಬಿಗ್ ಬಾಸ್ (2011-2012) ಸೀಸನ್ 5ರಲ್ಲಿ ಭಾಗಿಯಾಗಿದ್ದರು.
ಕನ್ನಡದಲ್ಲಿಯೂ ನಟಿಸಿರುವ ಸಂಜಯ್ ದತ್ ಕೆಜಿಎಫ್ -2 ಸಿನಿಮಾದಲ್ಲಿ ಅಧೀರನ ಪಾತ್ರದಲ್ಲಿ ಮಿಂಚಿದ್ದರು. ಶಂಶೇರಾ ಚಿತ್ರದಲ್ಲಿಯೂ ಸಂಜಯ್ ದತ್ ಬಣ್ಣ ಹಚ್ಚಿದ್ದಾರೆ.
ಇದನ್ನೂ ಓದಿ | IMDb top 10 films | ಜನಪ್ರಿಯ ಭಾರತೀಯ ಫಿಲಂಗಳ ರೇಟಿಂಗ್: ಮೊದಲ ಸ್ಥಾನದಲ್ಲಿ ಯಾವ ಸಿನಿಮಾ?