Site icon Vistara News

Sanjay Dutt: `ಲಿಯೋ’ ಸಿನಿಮಾದಿಂದ ಸಂಜಯ್‌ ದತ್‌ಗೆ ಭರ್ಜರಿ ಗಿಫ್ಟ್‌!

Sanjay Dutt look from Leo

ಬೆಂಗಳೂರು: ಬಾಲಿವುಡ್‌ ನಟ ಸಂಜಯ್ ದತ್ (Sanjay Dutt) ಅವರು ಜುಲೈ 29ರಂದು 64ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಈ ವೇಳೆ ಸಂಜಯ್‌ ದತ್‌ ಅವರ ಮುಂಬರುವ ಚಿತ್ರ ‘ಲಿಯೋ’ ಸಿನಿಮಾ ಚಿತ್ರತಂಡ ನಟನ ಮಾಂಟೇಜ್‌ ಕ್ಲಿಪ್‌ ಶೇರ್‌ ಮಾಡಿಕೊಂಡಿದೆ.

ಇನ್ನೂ ಹೆಚ್ಚಾಗಿ, ಬಾಲಿವುಡ್ ಸಿನಿಮಾಗಳಲ್ಲಿ ನಟಿಸಿರುವ ಸಂಜಯ್ ದತ್ ಇದೀಗ ಸೌತ್ ಚಿತ್ರರಂಗದತ್ತ ಮುಖ ಮಾಡಿದ್ದು, ಕನ್ನಡದ ಕೆಜಿಎಫ್ ಚಾಪ್ಟರ್ 2 ಸೇರಿದಂತೆ ತಮಿಳು ಹಾಗೂ ತೆಲುಗಿನ ಚಿತ್ರಗಳಿಗಾಗಿ ವಿಲನ್ ಆಗಿ ಬಣ್ಣ ಹಚ್ಚಿದ್ದಾರೆ. ಹೀಗೆ ಸಂಜಯ್ ದತ್ ಖಳ ನಾಯಕನಾಗಿ ನಟಿಸುತ್ತಿರುವ ದಕ್ಷಿಣದ ಚಿತ್ರಗಳ ಪೈಕಿ ಅತಿಹೆಚ್ಚು ಗಮನ ಸೆಳೆದಿರುವುದು ತಮಿಳಿನ ಚಿತ್ರ ಲಿಯೋ. ದಳಪತಿ ವಿಜಯ್ ಹಾಗೂ ಲೋಕೇಶ್ ಕನಕರಾಜ್ ಕಾಂಬಿನೇಶನ್‌ನಲ್ಲಿ ಮೂಡಿ ಬರುತ್ತಿರುವ ʼಲಿಯೋʼ ಸಿನಿಮಾ ಸದ್ಯ ಸಿನಿ ರಸಿಕರಲ್ಲಿ ಅತಿದೊಡ್ಡ ಮಟ್ಟದ ನಿರೀಕ್ಷೆಯನ್ನು ಹುಟ್ಟುಹಾಕಿದೆ. ಈ ಚಿತ್ರದಲ್ಲಿ ವಿಜಯ್ ಎದುರು ಖಳ ನಾಯಕನಾಗಿ ಬಾಲಿವುಡ್‌ನ ಸಂಜಯ್ ದತ್ ತೊಡೆ ತಟ್ಟಿದ್ದು, ಸಂಜು ಬಾಬಾ ಹುಟ್ಟುಹಬ್ಬದ ಪ್ರಯುಕ್ತ ʼಲಿಯೋʼ ತಂಡ ವಿಶೇಷವಾದ ಟೀಸರ್ ಬಿಡುಗಡೆ ಮಾಡುವ ಮೂಲಕ ಶುಭ ಕೋರಿದೆ. ಸಿಗರೇಟ್ ಸೇದುತ್ತ ಸಿನಿರಸಿಕರ ಮುಂದೆ ಬಂದಿರುವ ಸಂಜಯ್ ದತ್ ಅವರು ಈ ಚಿತ್ರದಲ್ಲಿ ‘ಆಂಟನಿ ದಾಸ್’ ಎಂಬ ವಿಲನ್ ಪಾತ್ರವನ್ನು ನಿರ್ವಹಿಸಿದ್ದಾರೆ ಎಂಬುದು ಟೀಸರ್ ಮೂಲಕ ಬಹಿರಂಗಗೊಂಡಿದೆ.

ಇದನ್ನೂ ಓದಿ: Sanjay Dutt: ‘ಡಬಲ್ ಇಸ್ಮಾರ್ಟ್’ಗೆ ʻಬಿಗ್ ಬುಲ್ʼ ಎಂಟ್ರಿ; ಸಂಜಯ್ ದತ್ ಬರ್ತ್‌ಡೇ ಸ್ಪೆಷಲ್‌!

ʼಲಿಯೋʼ ಚಿತ್ರದಲ್ಲಿ ಸಂಜಯ್ ದತ್ ಅಣ್ಣನ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ದಳಪತಿ ವಿಜಯ್‌ (Thalathy Vijay) ಹಾಗೂ ಲೋಕೇಶ್‌ ಕನಕರಾಜ್‌ ಲಿಯೋ ಸಿನಿಮಾ ಸಖತ್‌ ಹೈಪ್‌ ಕ್ರಿಯೇಟ್‌ ಮಾಡುತ್ತಿದೆ. ಈಗಾಗಲೆ ಸಿನಿಮಾದ ಫಸ್ಟ್‌ ಲುಕ್‌ ಹಾಗೂ ಮೊದಲ ಸಾಂಗ್‌ ʻನಾ ರೆಡಿʼ ಬಿಡುಗಡೆಗೊಂಡಿದೆ. ಮಾಸ್ಟರ್ʼ ಸಿನಿಮಾ ಬಳಿಕ ವಿಜಯ್‌ ಮತ್ತು ಲೋಕೇಶ್‌ ಕನಕರಾಜ್‌ ಮತ್ತೆ ಈ ಸಿನಿಮಾ ಮೂಲಕ ಒಂದಾಗಿದ್ದಾರೆ. ಲಿಯೋದಲ್ಲಿ ತ್ರಿಶಾ, ಸಂಜಯ್ ದತ್, ಅರ್ಜುನ್, ಪ್ರಿಯಾ ಆನಂದ್, ಗೌತಮ್ ವಾಸುದೇವ್ ಮೆನನ್, ಮನ್ಸೂರ್ ಅಲಿ ಖಾನ್, ಸ್ಯಾಂಡಿ ಮತ್ತು ಮಿಸ್ಕಿನ್ ಸಹ ನಟಿಸಿದ್ದಾರೆ.

ಈ ಚಿತ್ರವನ್ನು ಸೆವೆನ್ ಸ್ಕ್ರೀನ್ ಸ್ಟುಡಿಯೊದ ಲಲಿತ್ ಕುಮಾರ್ ನಿರ್ಮಿಸುತ್ತಿದ್ದಾರೆ. ಅನಿರುದ್ಧ್ ರವಿಚಂದರ್ ಸಂಗೀತ ಸಂಯೋಜಿಸಿದ್ದಾರೆ, ಲಿಯೋ ಚಿತ್ರಕ್ಕೆ ಮನೋಜ್ ಪರಮಹಂಸ ಅವರ ಛಾಯಾಗ್ರಹಣ ಮತ್ತು ಫಿಲೋಮಿನ್ ರಾಜ್ ಅವರ ಸಂಕಲನವಿದೆ.

Exit mobile version