Site icon Vistara News

Sanjay Dutt: ಸೌತ್‌ ಸಿನಿಮಾ ಆಯ್ತು ಈಗ ಪಂಜಾಬಿ ಸಿನಿಮಾದತ್ತ ಸಂಜಯ್‌ ದತ್‌!

Sanjay Dutt with Gippy Grewal and Amardeep Grewal

ಸಂಜಯ್ ದತ್ (Sanjay Dutt) ಈ ನಡುವೆ ಸೌತ್‌ ಸಿನಿಮಾಗಳಿಗೆ ಭಾರಿ ಆಸಕ್ತಿ ತೋರುತ್ತಿದ್ದಾರೆ. ಆದರೆ ಕೆಜಿಎಫ್ 2 ಸಿನಿಮಾದ ಯಶಸ್ಸಿನ ನಂತರ ಸಂಜಯ್ ದತ್ ಹಿಂದಿಯ ಜವಾನ್, ತಮಿಳಿನ ಲಿಯೋ, ತೆಲುಗಿನ ʼಡಬಲ್ ಇಸ್ಮಾರ್ಟ್ʼ ಸೇರಿದಂತೆ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ತೆಲುಗು ಮತ್ತು ಕನ್ನಡ ಚಲನಚಿತ್ರಗಳಲ್ಲಿ ತಮ್ಮ ಅದೃಷ್ಟವನ್ನು ಪರೀಕ್ಷಿಸಿದ ನಂತರ, ಸಂಜಯ್ ದತ್ ಪಂಜಾಬಿ ನಿರ್ದೇಶಕನ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಈ ಚಿತ್ರವನ್ನು ಗಿಪ್ಪಿ ಗ್ರೆವಾಲ್ (Gippy Grewal) ನಿರ್ದೇಶಿಸಲಿದ್ದಾರೆ.

ನಿರ್ದೇಶಕನ ಜತೆಗಿರುವ ಫೋಟೊ ಹಂಚಿಕೊಂಡು ಸಂಜಯ್ ದತ್ ಸಿನಿಮಾ ಟೈಟಲ್‌ ರಿವೀಲ್‌ ಮಾಡಿದ್ದಾರೆ. “ನನ್ನ ಮೊದಲ ಪಂಜಾಬಿ ಚಲನಚಿತ್ರ ಶೆರಾನ್ ಡಿ ಕೌಮ್ ಪಂಜಾಬಿ (Sheran Di Kaum Punjabi)” ಎಂದು ಬರೆದುಕೊಂಡಿದ್ದಾರೆ. ಗಿಪ್ಪಿ ಗ್ರೆವಾಲ್ ಒಬ್ಬ ನಟ, ನಿರ್ದೇಶಕ ಮತ್ತು ಗಾಯಕ. `ಅರ್ದಾಸ್ ಕರಣ್’ ಮುಂತಾದ ಚಲನಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಕ್ಯಾರಿ ಆನ್ ಜಟ್ಟಾ, ಬೆಸ್ಟ್ ಆಫ್ ಲಕ್, ಡಬಲ್ ಡಿ ಟ್ರಬಲ್, ಸೆಕೆಂಡ್ ಹ್ಯಾಂಡ್ ಹಸ್ಬೆಂಡ್ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ: Sanjay Dutt: `ಲಿಯೋ’ ಸಿನಿಮಾದಿಂದ ಸಂಜಯ್‌ ದತ್‌ಗೆ ಭರ್ಜರಿ ಗಿಫ್ಟ್‌!

ಸಂಜಯ್‌ ದತ್‌ ಪೋಸ್ಟ್‌

ಸಂಜಯ್ ದತ್ ಖಳ ನಾಯಕನಾಗಿ ನಟಿಸುತ್ತಿರುವ ದಕ್ಷಿಣದ ಚಿತ್ರಗಳ ಪೈಕಿ ಅತಿಹೆಚ್ಚು ಗಮನ ಸೆಳೆದಿರುವುದು ತಮಿಳಿನ ಚಿತ್ರ ಲಿಯೋ. ದಳಪತಿ ವಿಜಯ್ ಹಾಗೂ ಲೋಕೇಶ್ ಕನಕರಾಜ್ ಕಾಂಬಿನೇಶನ್‌ನಲ್ಲಿ ಮೂಡಿ ಬರುತ್ತಿರುವ ʼಲಿಯೋʼ ಸಿನಿಮಾ ಸದ್ಯ ಸಿನಿ ರಸಿಕರಲ್ಲಿ ಅತಿದೊಡ್ಡ ಮಟ್ಟದ ನಿರೀಕ್ಷೆಯನ್ನು ಹುಟ್ಟುಹಾಕಿದೆ. ಈ ಚಿತ್ರದಲ್ಲಿ ವಿಜಯ್ ಎದುರು ಖಳ ನಾಯಕನಾಗಿ ಬಾಲಿವುಡ್‌ನ ಸಂಜಯ್ ದತ್ ತೊಡೆ ತಟ್ಟಲಿದ್ದಾರೆ. ಸಂಜಯ್ ದತ್ ಅವರು ಈ ಚಿತ್ರದಲ್ಲಿ ‘ಆಂಟನಿ ದಾಸ್’ ಎಂಬ ವಿಲನ್ ಪಾತ್ರವನ್ನು ನಿರ್ವಹಿಸಿದ್ದಾರೆ ಎಂಬುದು ಟೀಸರ್ ಮೂಲಕ ಬಹಿರಂಗಗೊಂಡಿದೆ. ʼಲಿಯೋʼ ಚಿತ್ರದಲ್ಲಿ ಸಂಜಯ್ ದತ್ ಅಣ್ಣನ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂದೂ ಹೇಳಲಾಗುತ್ತಿದೆ.

ಇದನ್ನೂ ಓದಿ: Sanjay Dutt: ಕೆ.ಡಿ ಚಿತ್ರತಂಡದೊಂದಿಗೆ ಚಾಮುಂಡಿ ತಾಯಿಯ ದರ್ಶನ ಪಡೆದ ನಟ ಸಂಜಯ್ ದತ್

ಪುರಿ ಜಗನ್ನಾಥ್ ಅವರ ಹೊಸ ಚಿತ್ರ ʼಡಬಲ್ ಇಸ್ಮಾರ್ಟ್‌ʼನಲ್ಲಿಯೂ ನಟಿಸಲಿದ್ದಾರೆ. ಈ ಚಿತ್ರದಲ್ಲಿ ತೆಲುಗು ಸ್ಟಾರ್ ರಾಮ್ ಪೋತಿನೇನಿ ನಟಿಸಿದ್ದಾರೆ.

Exit mobile version