Site icon Vistara News

Sanjjanaa Galrani | ನಟಿ ಸಂಜನಾ ಸಿಸೇರಿಯನ್ ವಿಡಿಯೊ ಸಿಕ್ಕಾಪಟ್ಟೆ ವೈರಲ್‌

Sanjjanaa Galrani

ಬೆಂಗಳೂರು : ವಿವಾದಗಳಿಂದಲೇ ಹೆಚ್ಚು ಸುದ್ದಿಯಲ್ಲಿದ್ದ ಕನ್ನಡದ ನಟಿ ಸಂಜನಾ ಗಲ್ರಾನಿ (Sanjjanaa Galrani) ಈಗ ತಾಯಿಯಾಗಿಯೂ ಸುದ್ದಿಯಲ್ಲಿದ್ದಾರೆ!

ಹೌದು, ಕಳೆದ ಮೇ ತಿಂಗಳಲ್ಲಿ ಸಂಜನಾ ಮೊದಲ ಮಗುವಿಗೆ ಜನ್ಮ ನೀಡಿದ್ದರು. ಇದು ಸಹಜ ಹೆರಿಗೆಯಾಗಿರಲಿಲ್ಲ. ಸಿಸೇರಿಯನ್‌ ಮಾಡಲಾಗಿತ್ತು. ಇದೀಗ ಅವರು ತಮ್ಮ ಇನ್ಸ್ಟಾ ಖಾತೆಯಲ್ಲಿ ತಮ್ಮ ಸಿಸೇರಿಯನ್‌ ಹೆರಿಗೆ ವಿಡಿಯೊ ಹಂಚಿಕೊಂಡಿದ್ದಾರೆ. ಇದು ಸೋಷಿಯಲ್‌ ಮಿಡಿಯಾದಲ್ಲಿ ಸಖತ್‌ ವೈರಲ್‌ ಆಗಿದೆ. ʼʼನೀವು ನಿಮ್ಮ ಮಗುವಿಗೆ ಸಿಸೇರಿಯನ್ ಮೂಲಕ ಜನ್ಮ ನೀಡಿದರೆ ನಿಮ್ಮಷ್ಟು ಶಕ್ತಿಶಾಲಿ ಮತೊಬ್ಬರಿಲ್ಲʼʼ ಎಂದು ಬರೆದುಕೊಂಡಿದ್ದು, ಈ ಕುರಿತು ಚರ್ಚೆ ನಡೆಯುತ್ತಿದೆ.

ಇದನ್ನೂ ಓದಿ | ಪ್ರಣೀತಾ ಸುಭಾಷ್‌ಗೆ ಹೆಣ್ಣು ಮಗು ಜನನ; ಫೋಟೋಗಳನ್ನು ಶೇರ್‌ ಮಾಡಿದ ನಟಿ

ಗಂಡು ಮಗುವಿನ ತಾಯಿಯಾಗಿರುವ ಸಂಜನಾ, ನಾಮಕರಣವನ್ನೂ ಈಗಾಗಲೇ ಮಾಡಿದ್ದಾರೆ. ಅಷ್ಟೇ ಅಲ್ಲದೇ ತಮ್ಮ ಮಗುವಿನ ಹೆಸರಿನಲ್ಲಿ ಇನ್ಸ್ಟಾ ಖಾತೆಯನ್ನು ತೆರೆದಿದ್ದಾರೆ. ಮಗುವಿಗೆ ʻಅಲಾರಿಕ್‌ʼ ಎಂದು ಹೆಸರು ಇಡಲಾಗಿದೆ.

ಅಲಾರಿಕ್‌ ಹೆಸರಿನ ಅರ್ಥ ʼಚಕ್ರವರ್ತಿʼ ಅಥವಾ ಎಲ್ಲರ ಆಡಳಿತಗಾರ ಎಂಬ ಅರ್ಥವಿದೆ. ಸದ್ಯ ಚಿತ್ರರಂಗದ ಚಟುವಟಿಕೆಗಳಿಂದ ದೂರವಿರುವ ಸಂಜನಾ ಮಗುವಿನ ಪಾಲನೆಯಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ.

ಇದನ್ನೂ ಓದಿ | ಆಲಿಯಾ ಭಟ್‌ ಗರ್ಭಿಣಿ; ಮದುವೆಯಾಗಿ 2 ತಿಂಗಳಿಗೆ ಸಿಹಿಸುದ್ದಿ ಕೊಟ್ಟ ಸ್ಟಾರ್‌ ದಂಪತಿ

Exit mobile version