Site icon Vistara News

Actor Ramya: `ಸಂಜು ವೆಡ್ಸ್ ಗೀತಾ 2’ದಲ್ಲಿ ರಮ್ಯಾ ನಾಯಕಿ ಅಲ್ಲ; ಮೋಹಕ ತಾರೆಯ ಸ್ಥಾನ ತುಂಬಲಿರುವ ನಟಿ ಯಾರು?

Srinagar Kitty and Ramya

ಬೆಂಗಳೂರು: ನಾಗಶೇಖರ್ ಸಂಜು ವೆಡ್ಸ್ ಗೀತಾ ಸಿನಿಮಾದ ಪಾರ್ಟ್ 2 (Sanju Weds Geetha)ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಸಂಜು ವೆಡ್ಸ್ ಗೀತಾ ಚಿತ್ರದಲ್ಲಿ ನಾಯಕಿಯಾಗಿ ರಮ್ಯಾ (Actor Ramya) ನಟಿಸಿದ್ದರು. ಆದರೆ ಪಾರ್ಟ್‌2ನಲ್ಲಿ ಯಾರು ನಾಯಕಿಯಾಗಬಹುದು ಎಂದು ಸಿನಿಪ್ರಿಯರಲ್ಲಿ ಕುತೂಹಲವಿತ್ತು. ಇದೀಗ ಆ ಸ್ಥಾನವನ್ನು ರಚಿತಾ ರಾಮ್ ತುಂಬುತ್ತಿದ್ದಾರೆ ಎಂದು ವರದಿಯಾಗಿದೆ. ಶ್ರೀನಗರ ಕಿಟ್ಟಿ ಹುಟ್ಟುಹಬ್ಬದ ಪ್ರಯುಕ್ತ ಸಂಜು ವೆಡ್ಸ್ ಗೀತಾ ಸಿನಿಮಾದ ಪಾರ್ಟ್ 2 ಅಧಿಕೃತ ಘೋಷಣೆ ಮಾಡಿದೆ ಚಿತ್ರತಂಡ. ಡೈರೆಕ್ಟರ್ ನಾಗಶೇಖರ್ ಅವರು ರಮ್ಯಾ ಅವರ ಎಪಿಸೋಡ್‌ ವೀಕೆಂಡ್‌ ವಿತ್‌ ರಮೇಶ್‌ ಶೋದಲ್ಲಿ ಕೂಡ ಈ ಬಗ್ಗೆ ಪ್ರಸ್ತಾಪಿಸಿದರು.

ರಚಿತಾ ರಾಮ್‌ ಅವರು ರಮ್ಯಾ ಅವರ ಪಾತ್ರವನ್ನು ತುಂಬುತ್ತಿರುಬುದು ಇದೇನು ಮೊದಲಲ್ಲ. ಈ ಹಿಂದೆ ದುನಿಯಾ ವಿಜಯ್ ನಟನೆಯ ‘ಜಾನಿ’ (Johnny) ಸಿನಿಮಾದಲ್ಲಿ ರಮ್ಯಾ ನಾಯಕಿಯಾಗಿ ನಟಿಸಿದ್ದರು. ‘ಊರಿಗೊಬ್ಬಳೇ ಪದ್ಮಾವತಿ’ ಹಾಡಿನ ಮೂಲಕ ಪಡ್ಡೆಗಳ ನಿದ್ದೆ ಕದ್ದಿದ್ದರು. ಈ ಸಿನಿಮಾ ‘ಜಾನಿ ಜಾನಿ ಯೆಸ್ ಪಪ್ಪಾ’ ಹೆಸರಿನಲ್ಲಿ ಪಾರ್ಟ್ 2 ಬಂತು. ಆದರೆ, ಈ ಸಿನಿಮಾದಲ್ಲಿ ನಟಿಸಲು ರಮ್ಯಾ ನಿರಾಕರಿಸಿದ್ದರು. ಹಾಗಾಗಿ ರಚಿತಾ ರಾಮ್ ಅವರಿಗೆ ಅವಕಾಶ ಒದಗಿ ಬಂತು.

ಈಗಾಗಲೇ ನಿರ್ದೇಶಕ ನಾಗಶೇಕರ್‌ ಅವರು ರಚಿತಾ ರಾಮ್ ಅವರನ್ನು ಭೇಟಿ ಮಾಡಿ ಕಥೆಯನ್ನು ಹೇಳಿದ್ದಾರಂತೆ. ರಚಿತಾ ಅವರು ಕೂಡ ಕಥೆ ಮತ್ತು ಪಾತ್ರ ಇಷ್ಟಪಟ್ಟು ಒಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಸಿನಿಮಾ ಇದೇ ಆಗಸ್ಟ್ 15ರಂದು ಮುಹೂರ್ತ ಆಚರಿಸಿಕೊಳ್ಳುತ್ತಿದೆ.

ಇದನ್ನೂ ಓದಿ: Srinagar Kitty: ಬರ್ತಿದೆ ಸಂಜು ವೆಡ್ಸ್ ಗೀತಾ ಪಾರ್ಟ್ 2; ಇರಲಿದ್ದಾರಾ ಮೋಹಕ ತಾರೆ ರಮ್ಯಾ?

ಸಂಜು ವೆಡ್ಸ್‌ ಗೀತಾ ಸಿನಿಮಾ ಮಾಡುವ ಆರಂಭದಲ್ಲಿ ಹಣದ ಅಭಾವವೂ ಇತ್ತು. ನಿರ್ಮಾಣದ ಹಿಂದೆ ಒಂದಲ್ಲ ಎರಡಲ್ಲ, ಹಲವು ರೋಚಕ ಕಥೆಗಳಿವೆ ಎಂದು ವೀಕೆಂಡ್‌ ವಿತ್‌ ರಮೇಶ್‌ ಶೋದಲ್ಲಿ ರಮ್ಯಾ ಹೇಳಿಕೊಂಡಿದ್ದರು. ಸಂಜು ವೆಡ್ಸ್ ಗೀತಾ ಚಿತ್ರ ಮತ್ತೆ ಆರಂಭ ಆಗಲು ರಮ್ಯಾ ಹಣ ಕೊಟ್ಟಿದ್ದರಂತೆ. ಬಳಿಕ ಈ ಸಿನಿಮಾ ಸೂಪರ್ ಡೂಪರ್ ಹಿಟ್ ಕೂಡ ಆಯಿತು.

Exit mobile version