Site icon Vistara News

Sanju Weds Geetha 2: ʼಸಂಜು ವೆಡ್ಸ್‌ ಗೀತಾ-2ʼ ಟೀಸರ್‌ ಔಟ್‌; ಶೂಟಿಂಗ್‌ ಶುರು!

Sanju Weds Geetha 2

ಬೆಂಗಳೂರು: ಕನ್ನಡದಲ್ಲಿ ದೊಡ್ಡ ಯಶಸ್ಸು ಕಂಡ ಸಿನಿಮಾ ʼಸಂಜು ವೆಡ್ಸ್‌ ಗೀತಾʼ. ನಿರ್ದೇಶಕ ನಾಗಶೇಖರ್‌ (nagashekar) ನಿರ್ದೇಶನದಲ್ಲಿ ಮೂಡಿಬಂದಿದ್ದ ಈ ಸಿನಿಮಾ ಇದೀಗ ಎರಡನೇ ಭಾಗವಾಗಿ (Sanju Weds Geetha 2) ತೆರೆ ಕಾಣುವುದಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಬೆಂಗಳೂರಿನ ಅಶೋಕಾ ಹೋಟೆಲ್‌ನಲ್ಲಿ ಸಂಜು ವೆಡ್ಸ್ ಗೀತಾ-2 ಚಿತ್ರದ ಮುಹೂರ್ತ ಹಾಗೂ ಟೀಸರ್ ಬಿಡುಗಡೆ ಸಮಾರಂಭ ಆಗಸ್ಟ್‌ 16ರಂದು ನೆರವೇರಿತು. ಕಾರ್ಯಕ್ರಮದ ಆರಂಭದಲ್ಲಿ ಹಿಂದಿನ ಚಿತ್ರದ ಎವಿ ಪ್ರದರ್ಶನ ಹಾಗೂ ಆ ಚಿತ್ರದ ಟೈಟಲ್ ಟ್ರ್ಯಾಕ್‌ಗೆ ನೃತ್ಯ ಮಾಡುವ ಮೂಲಕ ಮೆಲುಕು ಹಾಕಲಾಯಿತು. ‘ಸಂಜು ವೆಡ್ಸ್ ಗೀತಾ -2’ ಚಿತ್ರಕ್ಕೆ ಅಶ್ವಿನಿ ಪುನೀತ್ ರಾಜ್ ಕುಮಾರ್ (ashwini puneeth rajkumar) ಚಾಲನೆ ನೀಡಿದರು.

ಟೀಸರ್‌ನಲ್ಲಿ ಹಿನ್ನೆಲೆ ಧ್ವನಿ ರಮ್ಯಾ ಅವರದ್ದೇ ಇದೆ. ಈ ಚಿತ್ರವನ್ನು ಪುನೀತ್ ರಾಜಕುಮಾರ್ ಅವರಿಗೆ ಅರ್ಪಣೆ ಮಾಡುವ ಮೂಲಕ ನಾಗಶೇಖರ್, ರಾಜರತ್ನನಿಗೆ ಗೌರವ ಸಲ್ಲಿಸಿದ್ದಾರೆ. ನಾಗಶೇಖರ್ ಮಾತನಾಡಿ ʻʻಕಪ್ಪಗಿರುವ ಈ ಹುಡುಗನನ್ನು ಕರೆದು ತಮ್ಮ ನಿರ್ದೇಶನದ ನಿನಗಾಗಿ ಚಿತ್ರದಲ್ಲಿ ಅವಕಾಶ ನೀಡಿದವರು ಎಸ್ ಮಹೇಂದರ್, ಅವರು ಇಂದು ನಮ್ಮ ಚಿತ್ರದ ಟೀಸರ್ ರಿಲೀಸ್ ಮಾಡಿದ್ದು ತುಂಬಾ ಖುಷಿಯಾಗಿದೆ. ಈ ಸಿನಿಮಾವನ್ನು 5 ವರ್ಷಗಳ ಹಿಂದೆಯೇ ಪ್ರಾರಂಭಿಸಬೇಕಾಗಿತ್ತು. ಆದರೆ ನಾನು ತೆಲುಗು, ತಮಿಳು ಕಡೆ ಹೋಗಿದ್ದರಿಂದ ಆಗಲಿಲ್ಲ. ರಮ್ಯಾ ಅವರು ಈ ಚಿತ್ರದಲ್ಲೂ ನಟನೆ ಮಾಡಬೇಕಿತ್ತು. ಅದರೆ ಅವರು ರಾಜಕೀಯದಲ್ಲಿ ಬ್ಯುಸಿ ಇದ್ದಾರೆ. ಅವರ ಬದಲಾಗಿ ಈ ಪಾತ್ರಕ್ಕೆ ಮೊದಲು ನನ್ನ ಕಣ್ಣಮುಂದೆ ಬಂದದ್ದೇ ರಚಿತಾ ರಾಮ್ (rachita ram), ತಮ್ಮ ಅದ್ಭುತವಾದ ಅಭಿನಯದ ಮೂಲಕವೇ ಅವರು ಹೆಸರು‌ ಮಾಡಿದವರು. ನನ್ನ ಚಿತ್ರದಲ್ಲಿ ಈ‌ ಪಾತ್ರಕ್ಕೆ ಜೀವ ತುಂಬುವುದೇ ಅಭಿನಯ. ಇನ್ನು ಹಿಂದಿನ ಚಿತ್ರದಲ್ಲಿದ್ದ ಬಹುತೇಕರು ಇದರಲ್ಲೂ ಇರುತ್ತಾರೆ. ನಾನು ಚಿತ್ರದಲ್ಲಿ ಕಥೆಯ ಜತೆ ಹಾಡುಗಳಿಗೂ ಜಾಸ್ತಿ ಪ್ರಾಮುಖ್ಯತೆ ಕೊಡುತ್ತೇನೆʼʼಎಂದರು.

ಇದನ್ನೂ ಓದಿ: Sanju Weds Geeta 2 : ಸಂಜು ವೆಡ್ಸ್‌ ಗೀತಾ 2ನಲ್ಲಿ ರಮ್ಯಾ ಇಲ್ಲ; ನಿರ್ದೇಶಕರು ಕೊಟ್ಟ ಕಾರಣ ಹೀಗಿದೆ!

ಅಂದ ಹಾಗೆ ʼಸಂಜು ವೆಡ್ಸ್‌ ಗೀತಾʼ ಸಿನಿಮಾದಲ್ಲಿ ಶ್ರೀನಗರ ಕಿಟ್ಟಿ (srinagar kitty) ಮತ್ತು ರಮ್ಯಾ ಅವರ ಜೋಡಿ ಅಭಿಮಾನಿಗಳನ್ನು ಮೋಡಿ ಮಾಡಿತ್ತು. ಆದರೆ ಸಿನಿಮಾದ ಎರಡನೇ ಭಾಗದಲ್ಲಿ ರಮ್ಯಾ ಇರುವುದೇ ಇಲ್ಲ. ರಮ್ಯಾ ಬದಲಾಗಿ ನಟಿ ರಕ್ಷಿತಾ ರಾಮ್‌ ಅವರನ್ನು ಸಿನಿ ತಂಡ ಆಯ್ಕೆ ಮಾಡಿಕೊಂಡಿದೆ.

ರಚಿತಾ ರಾಮ್‌ ಅವರು ರಮ್ಯಾ ಅವರ ಪಾತ್ರವನ್ನು ತುಂಬುತ್ತಿರುಬುದು ಇದೇನು ಮೊದಲಲ್ಲ. ಈ ಹಿಂದೆ ದುನಿಯಾ ವಿಜಯ್ ನಟನೆಯ ‘ಜಾನಿ’ (Johnny) ಸಿನಿಮಾದಲ್ಲಿ ರಮ್ಯಾ ನಾಯಕಿಯಾಗಿ ನಟಿಸಿದ್ದರು. ‘ಊರಿಗೊಬ್ಬಳೇ ಪದ್ಮಾವತಿ’ ಹಾಡಿನ ಮೂಲಕ ಪಡ್ಡೆಗಳ ನಿದ್ದೆ ಕದ್ದಿದ್ದರು. ಈ ಸಿನಿಮಾ ‘ಜಾನಿ ಜಾನಿ ಯೆಸ್ ಪಪ್ಪಾ’ ಹೆಸರಿನಲ್ಲಿ ಪಾರ್ಟ್ 2 ಬಂತು. ಆದರೆ, ಈ ಸಿನಿಮಾದಲ್ಲಿ ನಟಿಸಲು ರಮ್ಯಾ ನಿರಾಕರಿಸಿದ್ದರು. ಹಾಗಾಗಿ ರಚಿತಾ ರಾಮ್ ಅವರಿಗೆ ಅವಕಾಶ ಒದಗಿ ಬಂತು. ಈ ಸಿನಿಮಾಗೆ ಶ್ರೀಧರ್ ವಿ. ಸಂಭ್ರಮ್ ಸಂಗೀತ ನಿರ್ದೇಶನ, ಸತ್ಯ ಹೆಗಡೆ ಛಾಯಾಗ್ರಹಣ ಇದೆ.

Exit mobile version