Site icon Vistara News

Sanya Iyer: ಎದೆ ಮೇಲೆ ಕೈ ಇಟ್ಟ ಅಂತ ಕಿರಿಕ್‌ ಮಾಡಿದ್ರಿ, ಈಗೇನು ಉರ್ಫಿ ಜಾವೇದ್‌ ಆಗ್ತಾ ಇದ್ದೀರಲ್ಲ ಅಂದ್ರು ನೆಟ್ಟಿಗರು!

Sanya Iyer New Photo

‘ಬಿಗ್ ಬಾಸ್’ ಸೀಸನ್ 9ರ ಸ್ಪರ್ಧಿ ಸಾನ್ಯಾ ಅಯ್ಯರ್ (Sanya Iyer) ಆಗಾಗ ಹಾಟ್‌ ಫೋಟೊಶೂಟ್‌ ಮೂಲಕ ಸುದ್ದಿಯಲ್ಲಿಯೇ ಇರುತ್ತಾರೆ. ಇದೀಗ ಮತ್ತೆ ಹಾಟ್ ಅವತಾರದಲ್ಲಿ ನಟಿ ಕಾಣಿಸಿಕೊಂಡಿದ್ದಾರೆ.

ಫೋಟೊ ಶೇರ್‌ ಮಾಡಿಕೊಳ್ಳುತ್ತಿದ್ದಂತೆ ನೆಟ್ಟಿಗರು ಮನಬಂದಂತೆ ಕಮೆಂಟ್‌ ಮಾಡಿದ್ದಾರೆ. ʻಒಬ್ಬರು ಬರು ಬರುತ್ತ ಸಾನ್ಯ ಅವರು ಉರ್ಫಿ ಜಾವೇದ್‌ ಆಗುತ್ತಿದ್ದಾರೆʼʼ ಎಂದು ನೆಟ್ಟಿಗರೊಬ್ಬರು ಕಮೆಂಟ್‌ ಮಾಡಿದ್ದಾರೆ.

ಇನ್ನೊಬ್ಬರು ʻʻಹಿಂದೊಮ್ಮೆ ಎದೆ ಮೇಲೆ ಕೈ ಇಟ್ಟ ಎಂದು ಕಿರಿಕ್‌ ಮಾಡಿದ್ದು ನೀವೇ ಅಲ್ವಾ? ಈಗೇನು ಹೇಳ್ತೀರಾ?ʼʼ ಎಂದು ಸಾನ್ಯಾ ಹಾಟ್ ಫೋಟೊಗೆ ಕಿಡಿಕಾರಿದ್ದಾರೆ.

ಇತ್ತೀಚಿಗಷ್ಟೇ ಖ್ಯಾತ ಬಾಲಿವುಡ್ ಫೋಟೊಗ್ರಾಫರ್ ಡಬೂ ರತ್ನಾನಿ (Dabboo Ratnani) ಕ್ಯಾಮೆರಾ ಕಣ್ಣಿನಲ್ಲಿ ಸಾನ್ಯಾ ಅಯ್ಯರ್ ಫೋಟೊಶೂಟ್ ಮಾಡಿಸಿದ್ದರು.

ಇದೀಗ ನೇರಳೆ ಬಣ್ಣದ ಕೋಟ್, ಕಪ್ಪು ಬಣ್ಣದ ಸ್ಕರ್ಟ್ ಧರಿಸಿ ಕ್ಯಾಮೆರಾಗೆ ನಟಿ ಪೋಸ್ ನೀಡಿದ್ದಾರೆ. ಈ ಫೋಟೊಶೂಟ್‌ನಲ್ಲಿ ಮತ್ತಷ್ಟು ಬೋಲ್ಡ್ ಆಗಿಯೇ ಕಾಣಿಸಿಕೊಂಡಿದ್ದಾರೆ.

Exit mobile version