ಬೆಂಗಳೂರು : ರಿಷಬ್ ಶೆಟ್ಟಿ ನಿರ್ದೇಶನದ ‘ಕಾಂತಾರ’ ಸಿನಿಮಾ ಮೂಲಕ ನಟಿ ಸಪ್ತಮಿ ಗೌಡ (Sapthami Gowda) ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟಿದ್ದರು. ಇದೀಗ ʻದಿ ಕಾಶ್ಮೀರ್ ಫೈಲ್ಸ್ʼ ಸಿನಿಮಾದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ಹೊಸ ಸಿನಿಮಾ ‘ದಿ ವ್ಯಾಕ್ಸಿನ್ ವಾರ್’ ಚಿತ್ರಕ್ಕೆ ನಾಯಕಿಯಾಗಿ ಸಪ್ತಮಿ ಗೌಡ ಆಯ್ಕೆಯಾಗಿದ್ದಾರೆ.
ಬಾಲಿವುಡ್ಗೆ ಸಪ್ತಮಿ ಗೌಡ ಎಂಟ್ರಿ ಕೊಟ್ಟಿದ್ದು, ಈ ಬಾರಿಯ ಸಂಕ್ರಾಂತಿಯನ್ನು ʻದಿ ವ್ಯಾಕ್ಸಿನ್ ವಾರ್ʼ ಶೂಟಿಂಗ್ ಸೆಟ್ ನಲ್ಲೇ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಇದು ಬಯಸದೇ ಬಂದಿರುವ ಭಾಗ್ಯ ಎಂದೂ ಅವರು ಹೇಳಿಕೊಂಡಿದ್ದಾರೆ. ಸ್ವತಃ ವಿವೇಕ್ ಅಗ್ನಿಹೋತ್ರಿ ಅವರೇ ಸಪ್ತಮಿ ಗೌಡ ಅವರಿಗೆ ಕಾಲ್ ಮಾಡಿ, ನಟಿಸಲು ಅವಕಾಶ ನೀಡಿದ್ದಾರೆ ಎಂದು ಅವರು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ | Star Fashion | ಬ್ಲ್ಯಾಕ್ ಲೆದರ್ ವೆಸ್ಟರ್ನ್ ಔಟ್ಫಿಟ್ನಲ್ಲಿ ಕಾಂತಾರ ನಟಿ ಸಪ್ತಮಿ ಗೌಡ ಗ್ಲಾಮರಸ್ ಲುಕ್
ಮಧುರ್ ಭಂಡಾರ್ಕರ್ ಅವರ ‘ಇಂಡಿಯಾ ಲಾಕ್ಡೌನ್’ ಸಿನಿಮಾದಲ್ಲಿ ನಟಿಸಿದ್ದ ಗೋಪಾಲ್ ಸಿಂಗ್, ಹಿರಿಯ ನಟಿ ದಿವ್ಯಾ ಸೇಠ್ ಸೇರಿದಂತೆ ಸಾಕಷ್ಟು ಜನ ಅನುಭವಿ ಕಲಾವಿದರು ಈ ಸಿನಿಮಾಗೆ ಬಣ್ಣ ಹಚ್ಚಲಿದ್ದಾರೆ. ದಿ ವ್ಯಾಕ್ಸಿನ್ ವಾರ್ ಸಿನಿಮಾವು ಹಿಂದಿ, ಕನ್ನಡ, ತೆಲುಗು, ತಮಿಳು, ಮಲಯಾಳಂ, ಮರಾಠಿ ಸೇರಿದಂತೆ ಒಟ್ಟು 11 ಭಾಷೆಗಳಲ್ಲಿ ತೆರೆಗೆ ಬರಲಿದೆ. ಅನುಪಮ್ ಖೇರ್ ಕೂಡ ಚಿತ್ರಕ್ಕೆ ಬಣ್ಣ ಹಚ್ಚಿದ್ದಾರೆ. ನಾನಾ ಪಾಟೇಕರ್ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ವಿವೇಕ್ ಅಗ್ನಿಹೋತ್ರಿ ಪತ್ನಿ, ಪಲ್ಲವಿ ಜೋಶಿ ನಿರ್ಮಿಸಿದ್ದಾರೆ.
ಇದನ್ನೂ ಓದಿ | Vivek Agnihotri | ವಿವೇಕ್ ಅಗ್ನಿಹೋತ್ರಿಯ ʻದಿ ವ್ಯಾಕ್ಸಿನ್ ವಾರ್ʼ ಸಿನಿಮಾ ಸೆಟ್ನಲ್ಲಿ ಅನುಪಮ್ ಖೇರ್