Site icon Vistara News

Sapthami Gowda: ಯುವ ರಾಜ್‌ಕುಮಾರ್‌ಗೆ ಜೋಡಿಯಾದ ಸಪ್ತಮಿ ಗೌಡ: ತೆರೆ ಮೇಲೆ ಮಿಂಚಲಿದ್ದಾರೆ ಯುವ-ಸಪ್ತಮಿ

Sapthami Gowda

ಬೆಂಗಳೂರು: ರಾಘವೇದ್ರ ರಾಜ್‌ಕುಮಾರ್‌ ಅವರ ಕಿರಿಯ ಮಗ ಯುವ ರಾಜ್‌ಕುಮಾರ್‌ ಚೊಚ್ಚಲ ಸಿನಿಮಾ ʻಯುವʼ (Yuva Film) ಟೀಸರ್‌ ಬಿಡುಗಡೆಗೊಂಡ ಬೆನ್ನಲ್ಲೇ ನಾಯಕಿ ಯಾರೆಂಬುದು ರಿವೀಲ್‌ ಆಗಿದೆ. ಯುವ ರಾಜ್‌ಕುಮಾರ್‌ಗೆ ‘ಕಾಂತಾರ’ ಸುಂದರಿ ಸಪ್ತಮಿ ಗೌಡ (Sapthami Gowda) ನಾಯಕಿಯಾಗಲಿದ್ದಾರೆ. ಚಿತ್ರದಲ್ಲಿ ಸಪ್ತಮಿ ಪಾತ್ರಕ್ಕೆ ಹೆಚ್ಚಿನ ಆದ್ಯತೆಯಿದ್ದು, ನಟಿ ಬಿಗ್ ಸ್ಕ್ರೀನ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಯುವ-ಸಪ್ತಮಿ ಜೋಡಿ ಮೊದಲ ಬಾರಿಗೆ ತೆರೆಯ ಮೇಲೆ ಕಾಣಿಸಿಕೊಳುತ್ತಿದೆ.

ಹೊಂಬಾಳೆ ಫಿಲ್ಮ್ಸ್ ಬ್ಯಾನರ್‌ನಲ್ಲಿ ಸಂತೋಷ್ ಆನಂದ್‌ ರಾಮ್ ಈ ಸಿನಿಮಾ ಕಟ್ಟಿಕೊಡುತ್ತಿದ್ದಾರೆ. ಟೀಸರ್ ನೋಡಿದ ಅಭಿಮಾನಿಗಳು ಖುಷಿಯಾಗಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ, ಶ್ರೀಶ ಕುದುವಳ್ಳಿ ಛಾಯಾಗ್ರಹಣ ‘ಯುವ’ ಚಿತ್ರಕ್ಕಿದೆ.  ಈ ವರ್ಷದ ಡಿಸೆಂಬರ್ 22ಕ್ಕೆ ʻಯುವʼ ಚಿತ್ರ ತೆರೆಗೆ ಅಬ್ಬರಿಸಲಿದೆ.

https://twitter.com/hombalefilms/status/1632701331831144449?s=20

ʼದಿ ವ್ಯಾಕ್ಸಿನ್ ವಾರ್ʼ ಸಿನಿಮಾದಲ್ಲಿ ಸಪ್ತಮಿ ಗೌಡ ಅಭಿನಯಿಸುತ್ತಿದ್ದಾರೆ. ಈ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಮಧುರ್ ಭಂಡಾರ್ಕರ್‌ ಅವರ ‘ಇಂಡಿಯಾ ಲಾಕ್‌ಡೌನ್‌’ ಸಿನಿಮಾದಲ್ಲಿ ನಟಿಸಿದ್ದ ಗೋಪಾಲ್ ಸಿಂಗ್, ಹಿರಿಯ ನಟಿ ದಿವ್ಯಾ ಸೇಠ್‌ ಸೇರಿದಂತೆ ಸಾಕಷ್ಟು ಜನ ಅನುಭವಿ ಕಲಾವಿದರು ಈ ಸಿನಿಮಾಗೆ ಬಣ್ಣ ಹಚ್ಚಲಿದ್ದಾರೆ. ದಿ ವ್ಯಾಕ್ಸಿನ್‌ ವಾರ್ ಸಿನಿಮಾವು ಹಿಂದಿ, ಕನ್ನಡ, ತೆಲುಗು, ತಮಿಳು, ಮಲಯಾಳಂ, ಮರಾಠಿ ಸೇರಿದಂತೆ ಒಟ್ಟು 11 ಭಾಷೆಗಳಲ್ಲಿ ತೆರೆಗೆ ಬರಲಿದೆ.

Exit mobile version