Site icon Vistara News

Sapthami Gowda | ಅಭಿಷೇಕ್‌ ಅಂಬರೀಶ್‌ ಜತೆ ನಟಿಸುತ್ತಿದ್ದಾರೆ ಕಾಂತಾರ ಚೆಲುವೆ ಸಪ್ತಮಿ ಗೌಡ

Sapthami Gowda

ಬೆಂಗಳೂರು: ಕಾಂತಾರ ಸಿನಿಮಾ ನಟಿ ಸಪ್ತಮಿ ಗೌಡ (Sapthami Gowda ) ಅವರಿಗೆ ಚಿತ್ರರಂಗದಲ್ಲಿ ಸಖತ್‌ ಡಿಮ್ಯಾಂಡ್‌ ಶುರುವಾಗಿದೆ. ಇದೀಗ ಯಂಗ್‌ ರೆಬಲ್‌ ಸ್ಟಾರ್‌ ಅಭಿಷೇಕ್‌ ಅಂಬರೀಶ್‌ ಅವರ ಕಾಳಿ ಸಿನಿಮಾದಲ್ಲಿ ನಟಿಸಲು ಒಪ್ಪಿಗೆ ನೀಡಿದ್ದಾರೆ. ಈಗಾಗಲೇ ನಟಿ ಹಲವು ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ.

ಪೈಲ್ವಾನ್‌, ಗಜಕೇಸರಿ, ಹೆಬ್ಬುಲಿ ಚಿತ್ರವನ್ನು ನಿರ್ದೇಶಿಸಿರುವ ಕೃಷ್ಣ ಅವರು ಕಾಳಿ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಕಾಳಿ ಸಿನಿಮಾ ಈಗಾಗಲೇ ಟೈಟಲ್ ಪೋಸ್ಟರ್‌ ಹಂಚಿಕೊಂಡಿದ್ದು, ನಟಿಯ ಹೆಸರನ್ನು ಮಾತ್ರ ಗೌಪ್ಯವಾಗಿ ಇಟ್ಟಿದ್ದರು. ಇದೀಗ ಈ ಚಿತ್ರದ ನಾಯಕಿಯ ಹೆಸರು ಬಹಿರಂಗೊಂಡಿದೆ. ಸಪ್ತಮಿ ಗೌಡ ಅವರಿಗೆ ಪರಭಾಷೆಯಿಂದ ಆಫರ್ಸ್ ಬರುತ್ತಿವೆ ಎಂದು ಅವರು ಈಗಾಗಲೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ | Sunny Leone | ಉಪೇಂದ್ರ ಸಿನಿಮಾದ ʻಯುಐʼನಲ್ಲಿ ನಟಿಸುತ್ತಿದ್ದಾರಾ ಸನ್ನಿ ಲಿಯೋನ್‌?

ಈಗಾಗಲೇ ಅಭಿಷೇಕ್‌ ಅಂಬರೀಶ್‌ ಅವರ ರಗಡ್‌ ಲುಕ್‌ ರಿವೀಲ್‌ ಮಾಡಿದೆ ಚಿತ್ರತಂಡ. ಕಾವೇರಿ ನದಿ ಗಲಾಟೆಯಲ್ಲಿ ನಡೆದಂತಹ ನೈಜ ಘಟನೆಗಳನ್ನು ಆಧರಿಸಿ ಸಿನಿಮಾ ಮಾಡಲಾಗಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಅಭಿಷೇಕ್‌ ಅವರ ನಾಲ್ಕನೇ ಚಿತ್ರ ಇದಾಗಿದೆ.

ಇದನ್ನೂ ಓದಿ | Young Rebel Star ಅಭಿಷೇಕ್‌ ಅಂಬರೀಶ್‌ ‘ಕಾಳಿ’ ಫಸ್ಟ್‌ ಲುಕ್‌ ರಿವೀಲ್‌

Exit mobile version