ಬೆಂಗಳೂರು: ನಟಿ ಸಾರಾ ಅಲಿ ಖಾನ್ (Sara Ali Khan) 2023ರ ಕಾನ್ ಚಿತ್ರೋತ್ಸವದಲ್ಲಿ ಲೆಹೆಂಗಾ ಧರಿಸಿ ಮಿಂಚಿದ್ದಾರೆ. ಕಾರ್ಪೆಟ್ ಮೇಲೆ ಪೋಸ್ ನೀಡುತ್ತಿರುವ ಹಲವಾರು ಚಿತ್ರಗಳು ಮತ್ತು ವಿಡಿಯೊಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಈವೆಂಟ್‌ಗಾಗಿ, ಸಾರಾ ಲೆಹೆಂಗಾ, ಮ್ಯಾಚಿಂಗ್ ಬ್ಲೌಸ್ ಮತ್ತು ಟ್ರಯಲ್‌ನೊಂದಿಗೆ ದುಪಟ್ಟಾವನ್ನು ಧರಿಸಿದ್ದರು.
ಸಾರಾ ಅಲಿ ಖಾನ್ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಅಭಿಮಾನಿಯೊಬ್ಬರು, “ಅವರು ಯಾವಾಗಲೂ ತಮ್ಮ ದೇಶ ಮತ್ತು ಸಂಸ್ಕೃತಿಯನ್ನು ಪ್ರತಿನಿಧಿಸಲು ಪ್ರಯತ್ನಿಸುತ್ತಾರೆ” ಎಂದು ಹೇಳಿದ್ದಾರೆ. ಮತ್ತೊಬ್ಬರು “ನಟಿ ಸುಂದರವಾಗಿ ಕಾಣಿಸುತ್ತಿದ್ದಾರೆ” ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬರು ʻʻವಧುವಿನಂತೆ ಕಾಣುತ್ತಿದ್ದಾರೆ’ ಎಂದು ಹೇಳಿದ್ದಾರೆ.
ರೆಡ್ ಕಾರ್ಪೆಟ್ ಮೇಲೆ ಬ್ರೂಟ್ ಇಂಡಿಯಾದೊಂದಿಗೆ ನಟಿ ಮಾತನಾಡಿ ʻನಮಸ್ತೆ (ಅವಳ ಕೈಗಳನ್ನು ಮಡಚಿ). ನಾನು ಕಾನ್ ಚಿತ್ರೋತ್ಸವದಲ್ಲಿ ಇದ್ದೇನೆ ಎಂದರೆ ನಂಬಲು ಸಾಧ್ಯವಿಲ್ಲ. ಇದು ಅಬು ಮತ್ತು ಸಂದೀಪ್ (ಖೋಸ್ಲಾ) ಅವರ ಸಾಂಪ್ರದಾಯಿಕ ಭಾರತೀಯ ವಿನ್ಯಾಸವಾಗಿದೆ. ನಾನು ಯಾವಾಗಲೂ ನನ್ನ ಭಾರತೀಯತೆಯ ಬಗ್ಗೆ ಹೆಮ್ಮೆಪಡುತ್ತೇನೆʼʼಎಂದರು. ಸಾರಾ ಅಲಿ ಖಾನ್ ಅವರಿಗೆ ಇದು ಮೊದಲ ಚಿತ್ರೋತ್ಸವ.
ಇದನ್ನೂ ಓದಿ: Sara Ali Khan: ಇಲ್ಲಿವೆ ವಿದೇಶದಲ್ಲಿ ಭಾರತೀಯ ಉಡುಗೆ ಧರಿಸಿ ಮಿಂಚಿದ ಸಾರಾ ಅಲಿ ಖಾನ್ ಫೋಟೊಗಳು
ಸಾರಾ ಅಲಿ ಖಾನ್ `ಜರಾ ಹಟ್ಕೆ ಜರಾ ಬಚ್ ಕೆ’ (Zara Hat Ke Zara Bach Ke) ಸಿನಿಮಾದಲ್ಲಿ ವಿಕ್ಕಿ ಕೌಶಲ್ ಜತೆ ತೆರೆ ಹಂಚಿಕೊಳ್ಳಲಿದ್ದಾರೆ. ಲಕ್ಷ್ಮಣ್ ಉಟೇಕರ್ ನಿರ್ದೇಶನದ ಈ ಚಿತ್ರ ಜೂನ್ 2ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ.
2018ರಲ್ಲಿ ಕೇದಾರನಾಥ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದ ಸಾರಾ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ಯಾವ ಸಿನಿಮಾಗಳೂ ಸಕ್ಸೆಸ್ ಕಂಡಿಲ್ಲ. ಇದಲ್ಲದೆ, ಜಗನ್ ಶಕ್ತಿ ನಿರ್ದೇಶನದ ʻ ಏ ವತನ್ ಮೇರೆ ವತನ್ʼ ಮತ್ತು ಹೋಮಿ ಅದ್ಜಾನಿಯಾ ಅವರ ʻಮರ್ಡರ್ ಮುಬಾರಕ್ ಪ್ರಾಜೆಕ್ಟ್‌ಗಳನ್ನು ಹೊಂದಿದ್ದಾರೆ.