Site icon Vistara News

Sara Ali Khan: ʻನಂದಿʼಯ ಕಿವಿಯಲ್ಲಿ ಸಾರಾ ಅಲಿ ಖಾನ್ ಹೇಳಿಕೊಂಡಿದ್ದೇನು?

Sara Ali Khan prayers at Grishneshwar Jyotirlinga temple

ಬೆಂಗಳೂರು: ಬಾಲಿವುಡ್ ನಟಿ ಸಾರಾ ಅಲಿ ಖಾನ್ (Sara Ali Khan) ಹಿಂದೂ ದೇವಾಲಯಗಳಿಗೆ ಹೋಗಿ ದರ್ಶನ ಪಡೆಯವುದು ಹೊಸತೇನಲ್ಲ. ಇತ್ತೀಚೆಗೆ ಮಹಾರಾಷ್ಟ್ರದ ಗ್ರಿಷ್ಣೇಶ್ವರ ಜ್ಯೋತಿರ್ಲಿಂಗ (Grishneshwar Jyotirlinga) ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ದೇವಸ್ಥಾನಕ್ಕೆ ಭೇಟಿ ನೀಡಿದ ಫೋಟೊಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಸಾರಾ ಅಲಿ ಖಾನ್ ನಂದಿ ಕಿವಿಯಲ್ಲಿ ತಮ್ಮ ಇಷ್ಟಾರ್ಥಗಳನ್ನು ಹೇಳಿಕೊಂಡಿರುವ ಫೋಟೊ ಕೂಡ ಶೇರ್‌ ಮಾಡಿಕೊಂಡಿದ್ದಾರೆ.

ದೇವಸ್ಥಾನದಲ್ಲಿ ಇರುವ ಫೋಟೊಗಳನ್ನು ಹಂಚಿಕೊಂಡು ʻʻಜೈ ಭೋಲೆನಾಥ್ʼʼಎಂದು ಶೀರ್ಷಿಕೆ ನೀಡಿದ್ದಾರೆ. ಇದೀಗ ಅವರ ಫ್ಯಾನ್ಸ್‌ ಕಮೆಂಟ್‌ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. “ಸಾರಾ ನಮ್ಮ ಗೌರವವನ್ನು ಗಳಿಸಿದ್ದಾರೆ” ಎಂದು ಕಮೆಂಟ್‌ ಮಾಡಿದ್ದಾರೆ. “ನಂಬಿಕೆಯು ಹೃದಯದಲ್ಲಿದೆ” ಎಂದು ಮತ್ತೊಬ್ಬ ಬಳಕೆದಾರರು ಉಲ್ಲೇಖಿಸಿದ್ದಾರೆ.

ಈ ಹಿಂದೆ ಸಾರಾ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿರುವ ಮಹಾಕಾಳೇಶ್ವರನ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಮಾಡಿದ್ದರು. ಇದು ಸಾಕಷ್ಟು ಚರ್ಚೆಯಾಗಿತ್ತು. ಸಾರಾ ಅಲಿ ಖಾನ್‌ ಅವರು ದೇವಾಲಯಕ್ಕೆ ತೆರಳಿ, ದರ್ಶನ ಪಡೆದ ಬಳಿಕ ಹಲವು ಟೀಕೆಗಳು ವ್ಯಕ್ತವಾಗಿತ್ತು.

ಈ ಬಗ್ಗೆ ನಟಿ ಸಂದರ್ಶನವೊಂದರಲ್ಲಿ ಮಾತನಾಡಿ ʻʻನಾನು ನನ್ನ ಕೆಲಸವನ್ನು ಗಂಭೀರವಾಗಿ ತೆಗೆದುಕೊಳ್ಳುತ್ತೇನೆ. ನಾನು ಜನರಿಗಾಗಿ ಕೆಲಸ ಮಾಡುತ್ತೇನೆ. ನಿಮಗೆ ನನ್ನ ಕೆಲಸ, ನಟನೆ ಇಷ್ಟವಾಗದಿದ್ದರೆ, ಅದನ್ನು ಟೀಕಿಸಿ. ನಾನು ಅಜ್ಮೇರ್‌ ಷರೀಫ್‌ಗೂ ಹೋಗುತ್ತೇನೆ, ಇದೇ ನಂಬಿಕೆಯೊಂದಿಗೆ ಬಾಂಗ್ಲಾ ಸಾಹಿಬ್‌ ಅಥವಾ ಮಹಾಕಾಳೇಶ್ವರನ ದರ್ಶನ ಪಡೆಯುತ್ತೇನೆ. ಇದು ನನ್ನ ವೈಯಕ್ತಿಕ ನಂಬಿಕೆ. ನಾನು ಮತ್ತೆ ಮಹಾಕಾಳೇಶ್ವರನ ದರ್ಶನ ಪಡೆಯುತ್ತೇನೆ. ಜನ ಏನು ಬೇಕಾದರೂ ಅಂದುಕೊಳ್ಳಲಿ, ನನಗೇನೂ ತೊಂದರೆ ಇಲ್ಲ. ನನಗೆ ದೈವದಲ್ಲಿ, ಅಮೂರ್ತ ಶಕ್ತಿಯಲ್ಲಿ ನಂಬಿಕೆ ಇದೆ”ಎಂದು ಹೇಳಿಕೊಂಡಿದ್ದರು.

ಇದನ್ನೂ ಓದಿ: Sara Ali Khan : ಬಾಂದ್ರಾದ ರಸ್ತೆ ಬದಿ ಅಂಗಡಿಗಳಲ್ಲಿ ಶಾಪಿಂಗ್‌ ಮಾಡಿದ ನಟಿ ಸಾರಾ! ವೈರಲ್‌ ಆಯ್ತು ವಿಡಿಯೊ

ಈ ದೇಗುಲದ ಭೇಟಿಗೂ ಮೊದಲು ಸಾರಾ ಹಾಗೂ ನಟ ವಿಕ್ಕಿ ಕೌಶಲ್‌ ಅವರು ಲಕ್ನೋದಲ್ಲಿ ಮತ್ತೊಂದು ದೇಗುಲಕ್ಕೆ ಭೇಟಿ ಕೊಟ್ಟಿದ್ದರು. ಅಲ್ಲಿ ಇಬ್ಬರೂ ದೇವರಲ್ಲಿ ಪ್ರಾರ್ಥನೆ ಮಾಡುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದ ನಟಿ, “ಜೈ ಭೋಲೆನಾಥ್‌” ಎಂದು ಕ್ಯಾಪ್ಷನ್‌ ಕೊಟ್ಟಿದ್ದರು.

ಸಾರಾ ಅಲಿ ಖಾನ್ ಅವರು ಅನುರಾಗ್ ಬಸು ಅವರ ʻಮೆಟ್ರೋ ಇನ್ ದಿನೊʼ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆದಿತ್ಯ ರಾಯ್ ಕಪೂರ್, ಕೊಂಕಣ ಸೆಂಶರ್ಮಾ, ಪಂಕಜ್ ತ್ರಿಪಾಠಿ, ಫಾತಿಮಾ ಸನಾ ಶೇಖ್, ಅನುಪಮ್ ಖೇರ್ ಮತ್ತು ಅಲಿ ಫಜಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಅನುರಾಗ್ ಬಸು ಚಿತ್ರದ ಹೊರತಾಗಿ, ಸಾರಾ ಅವರು ಥ್ರಿಲ್ಲರ್ ಸಿನಿಮಾ ʻಏ ವತನ್ ಮೇರೆ ವತನ್ʼ ಕೂಡ ಹೊಂದಿದ್ದಾರೆ. ಈ ಚಿತ್ರವನ್ನು ಕಣ್ಣನ್ ಅಯ್ಯರ್ ಅವರು ನಿರ್ದೇಶಿಸಿದ್ದಾರೆ.

Exit mobile version