Site icon Vistara News

Sara Ali Khan: ಗಡ್ಡ-ಮೀಸೆಯ ಲುಕ್‌ನಲ್ಲಿ ಕಾಣಿಸಿಕೊಂಡ ಸಾರಾ ಅಲಿ ಖಾನ್!

Sara Ali Khan shared a funny picture ‘beard’ in pic

ಬೆಂಗಳೂರು: ಸಾರಾ ಅಲಿ ಖಾನ್ (Sara Ali Khan) ಅವರ ಗಡ್ಡ ಮೀಸೆ ಇರುವ ಫೋಟೊ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ. ನಿರ್ದೇಶಕ ಹೋಮಿ ಅದಜಾನಿಯಾ (Homi Adajania) ಅವರ ಹುಟ್ಟುಹಬ್ಬದ ಪ್ರಯುಕ್ತ ಸಾರಾ ಅವರು ಈ ವೇಷದಲ್ಲಿ ವಿಶ್‌ ಮಾಡಿದ್ದಾರೆ. ಅವರಿಗೆ ತಮಾಷೆಯ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ. ಫಿಲ್ಟರ್ ಬಳಸಿ ಈ ರೀತಿ ಎಡಿಟ್​ ಮಾಡಿ ಶುಭ ಹಾರೈಸಿದ್ದಾರೆ

ಸಾರಾ ಅಲಿ ಖಾನ್​ ಅವರ ಈ ಫೋಟೊ ಕ್ಲಿಕ್ಕಿಸಿದ್ದು ಹೋಮಿ ಅದಜಾನಿಯಾ ಅವರು. ಹಾಗಾಗಿ ಅವರ ಬರ್ತ್​ಡೇ ಪ್ರಯುಕ್ತ ಇದೇ ಫೋಟೋವನ್ನು ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಪೋಸ್ಟ್​ ಮಾಡುವ ಮೂಲಕ ವಿಶ್​ ಮಾಡಿದ್ದಾರೆ ಸೈಫ್​ ಅಲಿ ಖಾನ್​ ಪುತ್ರಿ. ಅಲ್ಲದೇ, ಹೋಮಿ ಅದಜಾನಿಯಾ ಜತೆ ವರ್ಕೌಟ್​ ಮಾಡುತ್ತಿರುವ ವಿಡಿಯೊವನ್ನೂ ಅವರು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: Sara Ali Khan: ಇಲ್ಲಿವೆ ವಿದೇಶದಲ್ಲಿ ಭಾರತೀಯ ಉಡುಗೆ ಧರಿಸಿ ಮಿಂಚಿದ ಸಾರಾ ಅಲಿ ಖಾನ್‌ ಫೋಟೊಗಳು

ಇನ್‌ಸ್ಟಾಗ್ರಾಮ್ ಸ್ಟೋರೀಸ್‌ನಲ್ಲಿ ಪೂಲ್‌ನಲ್ಲಿ ನಿಂತರುವ ಫೋಟೊವನ್ನು ಹಂಚಿಕೊಂಡ ಸಾರಾ, “ಫೋಟೋಗ್ರಾಫರ್ ಅನ್ನು ಗುರುತಿಸಿ. ಅದಜಾನಿಯಾ ಮತ್ತೊಮ್ಮೆ ಜನ್ಮದಿನದ ಶುಭಾಶಯಗಳು” ಎಂದು ಬರೆದಿದ್ದಾರೆ. ಸಾರಾ ಅವರು ಹೋಮಿ ಅವರ ಮುಂದಿನ ʻಮರ್ಡರ್ ಮುಬಾರಕ್ʼ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ವರದಿಯಾಗಿದೆ. ಅವರು ವಿಕ್ಕಿ ಕೌಶಲ್ ಮತ್ತು ಲಕ್ಷ್ಮಣ್ ಉಟೇಕರ್ ಅವರ ಜತೆ ಹೆಸರಿಡದ ಚಿತ್ರದ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ ಎಂದು ವರದಿಯಾಗಿದೆ. ಇದಲ್ಲದೆ, ‘ಏ ವತನ್​ ಮೇರೆ ವತನ್​’ ಚಿತ್ರಕ್ಕೂ ಸಾರಾ ಅಲಿ ಖಾನ್​ ನಾಯಕಿ ಆಗಿದ್ದಾರೆ.

Exit mobile version