ಬೆಂಗಳೂರು: `ಕೇದಾರನಾಥ್’ ಮತ್ತು `ಸಿಂಬಾ’ದಲ್ಲಿ ಯಶಸ್ಸನ್ನು ಕಂಡ ನಂತರ, ಸಾರಾ ಅಲಿ ಖಾನ್ (Sara Ali Khan) ಅವರು 2020ರಲ್ಲಿ ಬಿಡುಗಡೆಯಾದ ಲವ್ ಆಜ್ ಕಲ್-2 ಮತ್ತು ಕೂಲಿನಂ-1 ಸಿನಿಮಾದಲ್ಲಿ ಅಷ್ಟಾಗಿ ಯಶಸ್ಸು ಕಂಡಿಲ್ಲ. ಇತ್ತೀಚೆಗೆ, 2020 ವರ್ಷ ತನಗೆ ತುಂಬಾ ಕೆಟ್ಟ ಹಂತವಾಗಿತ್ತು, ಬ್ರೇಕಪ್‌ನಿಂದ ಪ್ರಾರಂಭವಾಯಿತು ಎಂದು ಬಹಿರಂಗಪಡಿಸಿದ್ದಾರೆ.
ಸಾರಾ ಅವರು ರಣವೀರ್ ಅಲ್ಲಾಬಾಡಿಯಾ ಅವರ ಪಾಡ್‌ಕ್ಯಾಸ್ಟ್ ದಿ ರಣವೀರ್ ಶೋಗಾಗಿ ಮಾತನಾಡುವಾಗ,“2020 ಬ್ರೇಕಪ್‌ನೊಂದಿಗೆ ಪ್ರಾರಂಭವಾಯಿತು. ಮತ್ತು ಎರಡು ಸಿನಿಮಾಗಳು ಪ್ಲಾಪ್ ಆದವು”ಎಂದು ಹೇಳಿಕೊಂಡಿದ್ದಾರೆ. ಚಿತ್ರದ ಚಿತ್ರೀಕರಣದ ಸಮಯದಲ್ಲಿ ಸಾರಾ ತನ್ನ ಲವ್ ಆಜ್ ಕಲ್ ಸಹ-ನಟ ಕಾರ್ತಿಕ್ ಆರ್ಯನ್ ಜತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳು ಹಬ್ಬಿದ್ದವು. ಫೆಬ್ರವರಿ 2020ರಲ್ಲಿ ಚಿತ್ರದ ಬಿಡುಗಡೆಗೆ ಮುಂಚೆಯೇ ಇಬ್ಬರೂ ಬೇರೆಯಾದರು ಎನ್ನಲಾಗಿದೆ.
ʻʻ2020 ನನಗೆ ತುಂಬಾ ಕೆಟ್ಟ ಹಂತವಾಗಿತ್ತು. ಇದು ಬ್ರೇಕಪ್ ನಿಂದ ಪ್ರಾರಂಭವಾಯಿತು. ಕೆಟ್ಟದಾಗುತ್ತಲೇ ಇತ್ತು. ಅವುಗೆಳಲ್ಲವೂ ಇಂಟರ್‌ನೆಟ್ ನಲ್ಲಿ ಇದೆ. ಇಮ್ತಿಯಾಜ್ ಅಲಿ ಸಿನಿಮಾದಲ್ಲಿ ನಟಿಸಿದ್ದ ಸಾರಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಅನೇಕ ಟೀಕೆಗಳನ್ನು ಎದುರಿಸಿರುವುದಾಗಿʼʼ ಹೇಳಿಕೊಂಡರು.
ಇದನ್ನೂ ಓದಿ: Sara Ali Khan: ಗಡ್ಡ-ಮೀಸೆಯ ಲುಕ್‌ನಲ್ಲಿ ಕಾಣಿಸಿಕೊಂಡ ಸಾರಾ ಅಲಿ ಖಾನ್!
2018ರಲ್ಲಿ ಕೇದರನಾಥ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದ ಸಾರಾ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ಯಾವ ಸಿನಿಮಾಗಳು ಸಕ್ಸೆಸ್ ಕಂಡಿಲ್ಲ. ಕೊನೆಯದಾಗಿ ಸಾರಾ ಅಕ್ಷಯ್ ಕುಮಾರ್ ಮತ್ತು ಧನುಷ್ ಅತ್ರಂಗಿ ರೇ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಸಿನಿಮಾ ಕೂಡ ಬಾಕ್ಸ್ ಆಫೀಸ್ ನಲ್ಲಿ ಹೀನಾಯ ಸೋಲು ಕಂಡಿತು. ಲಕ್ಷ್ಮಣ್ ಉಟೇಕರ್ ಅವರ ಇನ್ನೂ ಹೆಸರಿಡದ ಚಿತ್ರದಲ್ಲಿ ವಿಕ್ಕಿ ಕೌಶಲ್ ಅವರೊಂದಿಗೆ ಸಾರಾ ಮುಂದಿನ ಬಾರಿ ಕಾಣಿಸಿಕೊಳ್ಳಲಿದ್ದಾರೆ.