ಬೆಂಗಳೂರು: ʻಅಮೃತವರ್ಷಿಣಿ’ ಸಿನಿಮಾ ಖ್ಯಾತಿಯ ಬಹುಭಾಷಾ ನಟ ಶರತ್ ಬಾಬು (Sarath Babu) ಆರೋಗ್ಯ ಸ್ಥಿತಿಯಲ್ಲಿ ಏರುಪೇರಾಗಿದೆ. ಆರೋಗ್ಯ ಸ್ಥಿತಿಯಲ್ಲಿ ಗಂಭೀರ ಬದಲಾವಣೆಗಳಾದ ಕಾರಣ ಅವರನ್ನು ಐಸಿಯುಗೆ ಶಿಫ್ಟ್ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. 71 ವರ್ಷ ವಯಸ್ಸಿನ ಶರತ್ ಬಾಬು ಈಚೆಗೆ ಅನಾರೋಗ್ಯಕ್ಕೆ ತುತ್ತಾಗಿದ್ದರು. ಶರತ್ ಬಾಬು ಅವರ ಆರೋಗ್ಯ ಹದಗೆಟ್ಟಿರುವ ಕುರಿತಾಗಿ ತೆಲುಗು ನಟಿ ಕಲ್ಯಾಣಿ ಪಾದಲಾ (ಕರಾಟೆ ಕಲ್ಯಾಣಿ) ಇನ್‌ಸ್ಟಾದಲ್ಲಿ ಮಾಹಿತಿ ಹಂಚಿಕೊಂಡಿದ್ದರು.
ಅನಾರೋಗ್ಯದ ಹಿನ್ನೆಲೆಯಲ್ಲಿ ಅವರು ಬೆಂಗಳೂರಿನ ಆಸ್ಪತ್ರೆಯಲ್ಲಿ (Hospital) ಚಿಕಿತ್ಸೆ ಪಡೆಯುತ್ತಿದ್ದರು. ಚೇತರಿಸಿಕೊಂಡಿದ್ದ ಅವರ ಆರೋಗ್ಯದಲ್ಲಿ ಮತ್ತೆ ಏರುಪೇರಾದ ಕಾರಣ ಹೈದರಾಬಾದ್ನ ಗಚ್ಚಿಬೌಲಿಯಲ್ಲಿನ (Gachibowli) ಎಐಜಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ʻಅಮೃತವರ್ಷಿಣಿʼ ಚಿತ್ರದಲ್ಲಿ ರಮೇಶ್ ಅರವಿಂದ್, ಸುಹಾಸಿನಿ ಜತೆ ನಟಿಸರುವ ಶರತ್ ಬಾಬು ಕನ್ನಡ ಮಾತ್ರವಲ್ಲದೆ, ತೆಲುಗು ಹಾಗೂ ತಮಿಳು ಭಾಷೆಗಳಲ್ಲಿ 200ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದರು. 1951ರಲ್ಲಿ ಆಂಧ್ರಪ್ರದೇಶದಲ್ಲಿ ಜನಿಸಿದ ಇವರು 1973ರಲ್ಲಿ ತೆರೆಕಂಡಿದ್ದ `ರಾಮರಾಜ್ಯಂ’ ತೆಲುಗು ಚಿತ್ರದಿಂದ ಸಿನಿಪಯಣವನ್ನು ಆರಂಭಿಸಿದ್ದರು. ಶರತ್ ಬಾಬು ತೆಲುಗು ಮತ್ತು ತಮಿಳು ಚಿತ್ರಗಳಲ್ಲಿ ನಾಯಕನಾಗಿ ನೂರಾರು ಚಿತ್ರಗಳಲ್ಲಿ ನಟಿಸಿದ್ದಾರೆ. ಸುಮಾರು 8 ನಂದಿ ಪ್ರಶಸ್ತಿಗಳನ್ನು ಪಡೆದಿದ್ದಾರೆ.
ಇದನ್ನೂ ಓದಿ: Sarath Babu: ʻಅಮೃತವರ್ಷಿಣಿ’ ಸಿನಿಮಾ ಖ್ಯಾತಿಯ ನಟ ಶರತ್ ಬಾಬು ಆರೋಗ್ಯ ಸ್ಥಿತಿ ಗಂಭೀರ
ಇವರ ಮೂಲ ಹೆಸರು ಸತ್ಯಂ ಬಾಬು ದೀಕ್ಷಿತಲು. ನಾಯಕನಾಗಿ ಮತ್ತು ಪೋಷಕನಟನಾಗಿ ಸಾಕಷ್ಟು ಮನ್ನಣೆ ಪಡೆದಿದ್ದಾರೆ. ಶರತ್ ಬಾಬು ರಮಾಪ್ರಭಾ ಮತ್ತು ಸ್ನೇಹಾ ನಂಬಿಯಾರ್ ಅವರನ್ನು ವಿವಾಹವಾಗಿದ್ದರು. ಇಬ್ಬರಿಗೂ ವಿಚ್ಛೇದನ ನೀಡಿದ್ದಾರೆ.