ನವ ದೆಹಲಿ : ʼಕೆಜಿಎಫ್-2ʼ ಹಾಗೂ ʼರನ್‌ವೇ-34ʼ ಸಿನಿಮಾ ಈ ಹಿಂದೆ ಅಮೆಜಾನ್ ಪ್ರೈಮ್‌ನಲ್ಲಿ ರೆಂಟ್ ಮಾದರಿಯಲ್ಲಿ ಓಟಿಟಿಯಲ್ಲಿ ರಿಲೀಸ್ ಆಗಿತ್ತು. ಗುರುವಾಗ ಮತ್ತೊಂದು ಬ್ಲಾಕ್‌ಬಸ್ಟರ್ ಚಿತ್ರವನ್ನು ಇದೇ ರೀತಿ ಬಿಡುಗಡೆ ಮಾಡುವುದಾಗಿ ಅನೌನ್ಸ್ ಮಾಡಿದೆ. ಅದುವೇ ಮಹೇಶ್ ಬಾಬು ಹಾಗೂ ಕೀರ್ತಿ ಸುರೇಶ್ ಅಭಿನಯದ ʼಸರ್ಕಾರು ವಾರಿ ಪಾಠʼ ‘(Sarkaru Vaari Paata)
ಇದರ ಜತೆಗೆ ವೀಕ್ಷಕರು ಇತ್ತಿಚಿನ ಭಾರತೀಯ ಮತ್ತು ಅಂತಾರಾಷ್ಟ್ರೀಯ ಚಲನಚಿತ್ರಗಳನ್ನು ಬಾಡಿಗೆ ಪಡೆಯಬಹುದಾಗಿದೆ. ಜತೆಗೆ ಪ್ರಪಂಚದಾದ್ಯಂತ ಜನಪ್ರಿಯ ಚಲನಚಿತ್ರಗಳು ಮತ್ತು ಪ್ರಶಸ್ತಿ ವಿಜೇತ ಫ್ರಾಂಚೈಸಿಗಳನ್ನು ಬಾಡಿಗೆ ಪಡೆಯಬಹುದು.
ಇದನ್ನೂ ಓದಿ : Mahesh Babu | ಭರ್ಜರಿ ಕಲೆಕ್ಷನ್ ಮಾಡಿದ ಸರ್ಕಾರು ವಾರಿ ಪಾಟ
ಪರಶುರಾಮ ಪೆಟ್ಲಾ ನಿರ್ದೇಶನದ ಮತ್ತು ನವೀನ್ ಯುರ್ನೇನಿ ನಿರ್ಮಾಣದ ಈ ಚಿತ್ರದಲ್ಲಿ ಕಿಶೋರ್ ಮತ್ತು ಸುಬ್ಬರಾಜು ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ಮೇ ತಿಂಗಳಲ್ಲಿ ರಿಲೀಸ್ ಆದ ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಸಕತ್ ಸುದ್ದಿ ಮಾಡಿತ್ತು. ಚಿತ್ರ ಒಟಿಟಿಯಲ್ಲಿ ರಿಲೀಸ್ ಆಗುವುದರ ಕುರಿತು ಮಾತನಾಡಿದ ಮಹೇಶ್ ಬಾಬು ʼʼಸರ್ಕಾರು ವಾರಿ ಪಾಠ ಬಿಡುಗಡೆ ಆದ ಮೇಲಿನಿಂದ ಇದುವರೆಗೂ ಥ್ರಿಲ್ಲಿಂಗ್ ರೈಡ್ ಕಂಡಿದೆ. ಜನರು ಸಾಕಷ್ಟು ಪ್ರೀತಿಯನ್ನು ಈ ಸಿನಿಮಾಗೆ ನೀಡಿದ್ದಾರೆ. ಒಟಿಟಿಯಲ್ಲಿ ರಿಲೀಸ್ ಆಗುತ್ತಿರುವುದು ತುಂಬಾ ಸಂತಸದ ವಿಚಾರʼʼ ಎಂದು ಹೇಳಿಕೊಂಡರು.
ʼʼಇದು ಆಕ್ಷನ್ ಮತ್ತು ಡ್ರಾಮಾ, ಹ್ಯೂಮರ್ ಕೂಡ ಹೊಂದಿದ ಚಿತ್ರ. ಸ್ನೇಹಿತರೊಂದಿಗೆ ಆರಾಮದಾಯಕವಾಗಿ ನೈಟ್ ಕೂತು ನೋಡುವಂತಹ ಸಿನಿಮಾ. ಮನೆಯಲ್ಲಿಯೇ ತುಂಬಾ ಜೋಶ್‌ನಿಂದ ಜನರು ವೀಕ್ಷಣೆ ಮಾಡಬಹುದಾದ ಒಳ್ಳೆಯ ಸಿನಿಮಾʼʼ ಎಂದರು.
ನಟಿ ಕೀರ್ತಿ ಸುರೇಶ್, ʼʼಲೋಕಲ್ ಕಥೆಗಳನ್ನು ಡಿಜಿಟಲ್ ಮೂಲಕ ಜನರಿಗೆ ತಲುಪಿಸುವಲ್ಲಿ ಸ್ಟ್ರೀಮಿಂಗ್ ಸೇವೆಗಳು ಸಾಕಷ್ಟು ದೊಡ್ಡ ಪಾತ್ರಗಳನ್ನು ವಹಿಸುತ್ತಿವೆ. ಇದೀಗ ಈ ಚಿತ್ರ ಅಮೆಜಾನ್ ಪ್ರೈಮ್‌ನಲ್ಲಿ ಬಿಡುಗಡೆಗೊಳ್ಳುತ್ತಿರುವುದು ಸಂತಸದ ವಿಚಾರ. ಥಿಯೇಟರ್‌ನಲ್ಲಿ ನೋಡದೇ ಇರುವವರು ಈಗ ಮನೆಯಲ್ಲಿಯೇ ಕೂತು ನೋಡಬಹುದುʼʼ ಎಂದರು.
ಮಹೇಶ್ ಬಾಬು (Mahesh Babu) ಮತ್ತು ಕೀರ್ತಿ ಸುರೇಶ್ ನಟನೆಯ ಸರ್ಕಾರು ವಾರಿ ಪಾಠ ಸಿನಿಮಾ ಮೊದಲನೇ ದಿನವೇ ಭಾರಿ ಮೆಚ್ಚುಗೆಗೆ ಪಾತ್ರವಾಗಿತ್ತು.
ಇದನ್ನೂ ಓದಿ | Keerthy Suresh : ಸೀರೆಯಲ್ಲಿ ಸಕತ್ ಹಾಟ್ ಲುಕ್, ಇದೀಗ ಸಿಕ್ಕಾಪಟ್ಟೆ ವೈರಲ್