Site icon Vistara News

Satish Kaushik: ಸತೀಶ್ ಕೌಶಿಕ್ ನಿಧನದ ಮುಂಚೆ ಫಾರ್ಮ್‌ ಹೌಸ್‌ನಲ್ಲಿ ಔಷಧ ಪತ್ತೆ: ತನಿಖೆ ಕೈಗೊಂಡ ಪೊಲೀಸರು

Woman alleges foul play in Satish Kaushik death over Rs 15 crore dispute, Delhi police order to Inquiry

ಸತೀಶ್‌ ಕೌಶಿಕ್‌

ಬೆಂಗಳೂರು: ಖ್ಯಾತ ನಟ ಹಾಗೂ ನಿರ್ದೇಶಕ ಸತೀಶ್ ಕೌಶಿಕ್ (Satish Kaushik) ಹೃದಯಾಘಾತದಿಂದ ನಿಧನರಾಗಿದ್ದಾರೆ. ಮೃತಪಡುವುದಕ್ಕೂ ಮುನ್ನ ಪಾರ್ಟಿಯಲ್ಲಿ ಭಾಗಿಯಾಗಿದ್ದ ದೆಹಲಿಯ ಫಾರ್ಮ್‌ ಹೌಸ್‌ನಲ್ಲಿ ಕೆಲವು ಔಷಧ ಪದಾರ್ಥಗಳು ಪತ್ತೆಯಾಗಿವೆ. ಇದೀಗ ಈ ಸಾವಿನ ಸುತ್ತ ಅನುಮಾನ ವ್ಯಕ್ತವಾಗಿದೆ. ಸತೀಶ್ ಸಾವಿನ ಹಿಂದಿನ ದಿನ ಹೋಳಿ ಪಾರ್ಟಿಯಲ್ಲಿ ಭಾಗಿಯಾಗಿದ್ದರು.

1965ರ ಏಪ್ರಿಲ್‌ 13ರಂದು ಹರ್ಯಾಣದಲ್ಲಿ ಜನಿಸಿದ ಸತೀಶ್‌ ಕೌಶಿಕ್‌, ಬಾಲಿವುಡ್‌ನ ಖ್ಯಾತ ನಟ, ಕಾಮಿಡಿಯನ್‌, ನಿರ್ದೇಶಕ ಹಾಗೂ ನಿರ್ಮಾಪಕ ಕೂಡ. ಬಾಲಿವುಡ್‌ಗೆ ಆಗಮಿಸುವ ಮುನ್ನ ಅವರು ಹಲವಾರು ನಾಟಕಗಳಲ್ಲಿ ನಟಿಸಿದ್ದರು. ಸತೀಶ್ ಸಾವಿನ ಅನುಮಾನದ ಹಿನ್ನೆಲೆಯಲ್ಲಿ ಪೊಲೀಸರು ಹೋಳಿ ಪಾರ್ಟಿಯಲ್ಲಿ ಭಾಗಿಯಾಗಿದ್ದ ಫಾರ್ಮ್ ಹೌಸ್‌ಗೆ ಭೇಟಿ ನೀಡಿದ್ದರು. ಪಾರ್ಟಿ ನಡೆದ ಸ್ಥಳದಲ್ಲಿ ಕೆಲವು ಔಷಧಿಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಅಲ್ಲದೇ, ಸತೀಶ್ ಅವರ ದೇಹವನ್ನು ಮರಣೋತ್ತರ ಪರೀಕ್ಷೆಗೂ ಕಳುಹಿಸಿದ್ದರು ಎಂದು ಗೊತ್ತಾಗಿದೆ. ಮರಣೋತ್ತರ ಪರೀಕ್ಷೆಯ ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: Satish Kaushik: 800 ರೂ. ಜೇಬಿನಲ್ಲಿಟ್ಟುಕೊಂಡು ಮುಂಬೈಗೆ ಬಂದು ಗೆದ್ದ ಸತೀಶ್‌ ಕೌಶಿಕ್‌

ಈ ಬಗ್ಗೆ ಅಧಿಕಾರಿಯೊಬ್ಬರು ಮಾಧ್ಯಮಕ್ಕೆ ಹೇಳಿಕೆ ನೀಡಿದ್ದು ʻʻಸಾವಿಗೆ ಕಾರಣವೇನು ಎಂಬುದನ್ನು ಪತ್ತೆ ಹಚ್ಚಲು ಶವಪರೀಕ್ಷೆಯಾಗಿ ಕಾಯುತ್ತಿದ್ದೇವೆ. ಪಾರ್ಟಿಯಲ್ಲಿ ಭಾಗವಹಿಸಿದ ಅತಿಥಿಗಳ ಹೆಸರನ್ನೂ ಪಡೆದುಕೊಂಡಿದ್ದೇವೆʼʼಎಂದಿದ್ದಾರೆ.

ಮಿ.ಇಂಡಿಯಾ ಫಿಲ್ಮ್‌ನ ಕಲಂದರ್‌, ದೀವಾನಾ ಮಸ್ತಾನಾದ ಪಪ್ಪು ಪೇಗರ್‌, ಬ್ರಿಕ್‌ ಲೇನ್‌ನ ಚಾನು ಅಹ್ಮದ್‌ ಮುಂತಾದ ಪಾತ್ರಗಳಲ್ಲಿ ಅವರು ನಟಿಸಿದ್ದರು. 1990ರ ರಾಮ್‌ ಲಖನ್‌ ಹಾಗೂ 1997ರ ಸಾಜನ್‌ ಚಲೇ ಸಸುರಾಲ್‌ ಸಿನಿಮಾಗಳಲ್ಲಿನ ನಟನೆಗಳಿಗೆ ಫಿಲಂಫೇರ್‌ ಅತ್ಯುತ್ತಮ ಹಾಸ್ಯನಟ ಪ್ರಶಸ್ತಿಯನ್ನೂ ಪಡೆದಿದ್ದರು. ಅವರಿಗೆ ಪತ್ನಿ ಹಾಗೂ ಮಗಳು ಇದ್ದಾರೆ.

Exit mobile version