ಬೆಂಗಳೂರು : ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಚಂದನವನದ ಹಿರಿಯ ವಸ್ತ್ರಾಲಂಕಾರ ಹಾಗೂ ಹಾಸ್ಯ ಕಲಾವಿದ ಗಂಡಸಿ ನಾಗರಾಜ್ (65) (Gandasi Nagaraj) ವಿಧಿವಶರಾಗಿದ್ದಾರೆ. ನವರಸ ನಾಯಕ ಜಗ್ಗೇಶ್ ಅವರ ಆಪ್ತ ವಸ್ತ್ರಾಲಂಕಾರ ಕಲಾವಿದ ಇವರಾಗಿದ್ದರು. ಸುಮಾರು 40 ವರ್ಷಗಳ ಕಾಲ ಕನ್ನಡ ಚಿತ್ರರಂಗದ ಕಲಾ ಸೇವೆ ಮಾಡಿದ ಇವರು ಕಳೆದ 5 ತಿಂಗಳಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದರು. ಕಳೆದ 4 ದಿನಗಳಿಂದ ದೇವೇಗೌಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಡಿಸೆಂಬರ್ 11 ಭಾನುವಾರ ರಾತ್ರಿ 10.30ಕ್ಕೆ ಕೊನೆಯುಸಿರೆಳೆದಿದ್ದಾರೆ. ಗಂಡಸಿ ನಾಗರಾಜ್ ಅವರಿಗೆ ಇಬ್ಬರು ಮಕ್ಕಳಿದ್ದು, ಮಗಳು ಕೊರೊನಾ ಬಂದು ನಿಧನರಾಗಿದ್ದಾರೆ. ಇದೀಗ ಒಬ್ಬ ಮಗ ಮತ್ತು ಸೊಸೆಯನ್ನು ಅಗಲಿದ್ದಾರೆ.
ಗಂಡಸಿ ನಾಗರಾಜ್ ಅವರು ʻಸರ್ವರ್ ಸೋಮಣ್ಣʼ , ʻಸೂಪರ್ ನನ್ನ ಮಗʼ, ʻಭಂಡ ನನ್ನ ಗಂಡʼ , ʻಗುಂಡನ ಮದುವೆʼ ʻರಾಯರ ಮಗʼ , ʻಹಬ್ಬʼ , ʻಶ್ರೀ ಮಂಜುನಾಥʼ , ʻಮದುವೆʼ , ʻಮಾತಾಡು ಮಾತಾಡು ಮಲ್ಲಿಗೆʼ , ʻಪರ್ವʼ , ʻರಾಜಹುಲಿʼ, ʻಶಿಕಾರಿʼ ಹೀಗೆ 1000ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ʻಕೋಟಿಗೊಬ್ಬ 3ʼ ಇವರ ಕೊನೆಯ ಚಿತ್ರವಾಗಿತ್ತು.
ಇದನ್ನೂ ಓದಿ | K Muralidharan | ಹಿರಿಯ ನಿರ್ಮಾಪಕ ಕೆ. ಮುರಳೀಧರನ್ ವಿಧಿವಶ