ಬೆಂಗಳೂರು: ನವರಂಗ್ ಥಿಯೇಟರ್ ಮಾಲೀಕರು ಹಾಗೂ ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕ ಕೆ. ಸಿ. ಎನ್ ಮೋಹನ್ (KCN Mohan) ಜು. 2ರಂದು ನಿಧನರಾಗಿದ್ದಾರೆ. ಕೆ. ಸಿ. ಎನ್ ಮೋಹನ್ ಅವರಿಗೆ 65 ವರ್ಷ ವಯಸ್ಸಾಗಿತ್ತು. ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಇವರು ಮಣಿಪಾಲ್ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಆದರೀಗ ಚಿಕಿತ್ಸೆ ಫಲಕಾರಿಯಾಗದೇ ಮಣಿಪಾಲ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಹಲವು ಸಿನಿಮಾಗಳಿಗೆ ನಿರ್ಮಾಣ ಮಾಡಿದ್ದ ಕೆ. ಸಿ. ಎನ್ ಮೋಹನ್ ಮೊನ್ನೆಯಷ್ಟೇ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಜುಲೈ 2ರ ಮಧ್ಯಾಹ್ನ 12.30 ಸಮಯಕ್ಕೆ ಕೊನೆಯುಸಿರೆಳೆದಿದ್ದಾರೆ. ಜೂಲಿ, ರಾಮರಾಜ್ಯದಲ್ಲಿ ರಾಕ್ಷಸರು, ಜಯಸಿಂಹ, ಭಲೇ ಚತುರ ಸೇರಿದಂತೆ ಹಲವು ಸಿನಿಮಾಗಳಿಗೆ ನಿರ್ಮಾಣ ಮಾಡಿದ್ದರು.
ಇದನ್ನೂ ಓದಿ: Dhruva Sarja: `ಪೊಗರು’ ಸಿನಿಮಾದಲ್ಲಿ ನಟಿಸಿದ್ದ ಬಾಡಿಬಿಲ್ಡರ್ ಜೋ ಲಿಂಡ್ನರ್ ಕೇವಲ 30ನೇ ವಯಸ್ಸಿಗೆ ನಿಧನ
ಈಗಾಗಲೇ ಕೆ.ಸಿ.ಎನ್.ಮೋಹನ್ ಪತ್ನಿ ಪೂರ್ಣಿಮಾ ಹೃದಯಾಘಾತದಿಂದ ನಿಧನರಾಗಿದ್ದಾರೆ. ಕೆ.ಸಿ.ಎನ್.ಮೋಹನ್ ನಿಧನಕ್ಕೆ ಸಿನಿರಂಗ ಸೋಷಿಯಲ್ ಮೀಡಿಯಾ ಮೂಲಕ ಸಂತಾಪ ಸೂಚಿಸುತ್ತಿದೆ.