ಕನ್ನಡದಲ್ಲಿ ‘ಜೋಗುಳ’ (Jyothi Rai), ‘ಕನ್ಯಾದಾನ’, ‘ಅನುರಾಗ ಸಂಗಮ, ‘ಗೆಜ್ಜೆಪೂಜೆ’, ‘ಲವಲವಿಕೆ’, ‘ಗೆಜ್ಜೆಪೂಜೆ’, ‘ಪ್ರೇರಣಾ’, ‘ಕಿನ್ನರಿ’, ‘ಮೂರು ಗಂಟು’, ‘ಕಸ್ತೂರಿ ನಿವಾಸ’ ಸೇರಿದಂತೆ 15ಕ್ಕೂ ಅಧಿಕ ಧಾರಾವಾಹಿಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ಜ್ಯೋತಿ ರೈ ಸದ್ದಿಲ್ಲದೇ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ.
ಈಗಾಗಲೇ ಒಂದು ಮದುವೆ ಆಗಿರುವ ಜ್ಯೋತಿ ರೈ ತೆಲುಗಿನ ಯುವ ನಿರ್ದೇಶಕ ಸುಕು ಪುರ್ವಜ್ ಜತೆ ಸಹಜೀವನ ನಡೆಸುತ್ತಿದ್ದಾರೆ. 20ನೇ ವರ್ಷಕ್ಕೆ ಮದುವೆಯಾದ ಇವರಿಗೆ ಓರ್ವ ಪುತ್ರನೂ ಇದ್ದಾನೆ. ಮಗ ಆಟಿಸಂ ಕಾಯಿಲೆಯಿಂದ ಬಳಲುತ್ತಿದ್ದ. ಈ ವಿಚಾರ ಸಖತ್ ಸುದ್ದಿಯಾಗಿತ್ತು.
ಜ್ಯೋತಿ ರೈ ಕೇವಲ ಕನ್ನಡ ಮಾತ್ರವಲ್ಲ ‘ಸೀತಾರಾಮ ಕಲ್ಯಾಣ’ ಸೇರಿದಂತೆ ಒಂದಷ್ಟು ಕನ್ನಡ ಸಿನಿಮಾಗಳಲ್ಲೂ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ‘ಕನ್ಯಾದಾನಂ’ ಧಾರಾವಾಹಿ ಮೂಲಕ ಆಕೆ ತೆಲುಗು ಕಿರುತೆರೆಗೆ ಪರಿಚಿತರಾಗಿದ್ದರು. ‘ಗುಪ್ಪೆಡಂತ ಮನಸು’ ಧಾರಾವಾಹಿ ಪಾತ್ರ ಒಳ್ಳೆ ಹೆಸರು ತಂದುಕೊಂಡಿತ್ತು.
ಕೊಡಗಿನಲ್ಲಿ ಹುಟ್ಟಿ ಬೆಳೆದ ನಟಿ ಜ್ಯೋತಿ ರೈ ಎಂಎನ್‌ಸಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು. ಬಂದೇ ಬರತಾವ ಕಾಲ’ ಧಾರಾವಾಹಿಯಲ್ಲಿ ನಟಿಸಿದರು. ಅಲ್ಲಿಂದ ಮುಂದೆ ಸಾಲು ಸಾಲು ಧಾರಾವಾಹಿಗಳಲ್ಲಿ ನಟಿಸಿದರು. ನಿರೂಪಕಿಯಾಗಿಯೂ ಗಮನ ಸೆಳೆದರು. ಜ್ಯೋತಿ ರೈ ಸದ್ಯ ‘ಪ್ರೆಟಿ ಗರ್ಲ್’ ಎನ್ನುವ ವೆಬ್ ಸೀರಿಸ್‌ನಲ್ಲಿ ನಟಿಸುತ್ತಿದ್ದಾರೆ.