Site icon Vistara News

Samantha | ʻಶಾಕುಂತಲಂʼ ಟ್ರೈಲರ್ ಲಾಂಚ್ ವೇಳೆ ಚಿತ್ರತಂಡ ಬೆಂಬಲ‌ ನೆನೆದು ಕಣ್ಣೀರು ಹಾಕಿದ ಸಮಂತಾ!

Samantha Shaakuntalam Trailer Launch

ಬೆಂಗಳೂರು : ಮೈಯೋಸಿಟಿಸ್‌ ಕಾಯಿಲೆಯಿಂದ ಬಳಲುತ್ತಿದ್ದ ಟಾಲಿವುಡ್‌ ನಟಿ ಸಮಂತಾ (Samantha) ಬಹಳ ಸಮಯದ ನಂತರ, ಜನವರಿ 9ರಂದು ಹೈದರಾಬಾದ್‌ನಲ್ಲಿ ನಡೆದ ʻಶಾಕುಂತಲಂʼ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ಕಾಣಿಸಿಕೊಂಡಿದ್ದಾರೆ. ವೇದಿಕೆಯಲ್ಲಿ ಸಮಂತಾ ಚಿತ್ರದ ಕುರಿತ ಭಾವುಕರಾಗಿದ್ದಾರೆ.

ಅನಾರೋಗ್ಯದ ನಡುವೆಯೂ ಶಾಕುಂತಲಂ‌ ಟ್ರೈಲರ್ ಲಾಂಚ್‌ನಲ್ಲಿ ಸಮಂತಾ ಕಾಣಿಸಿಕೊಂಡಿದ್ದು, ಚಿತ್ರ ತಂಡ ಬೆಂಬಲ‌ ನೆನೆದು ಕಣ್ಣೀರು ಹಾಕಿದ್ದಾರೆ. ಸಮಂತಾ ಮಾತನಾಡಿ ʻʻನಾನು ಜೀವನದಲ್ಲಿ ಅನೇಕ ಸಂಘರ್ಷಗಳನ್ನು ಎದುರಿಸಿದ್ದೇನೆ. ಆದರೆ ನಾನು ಸಿನಿಮಾವನ್ನು ಎಷ್ಟು ಪ್ರೀತಿಸುತ್ತೇನೆ ಮತ್ತು ಚಿತ್ರರಂಗವು ನನ್ನನ್ನು ಎಷ್ಟು ಪ್ರೀತಿಸುತ್ತದೆ ಎಂಬುದು ನನಗೆ ತಿಳಿದಿದೆ. ಶಾಕುಂತಲಂ ಸಿನಿಮಾಗೆ ನಿಮ್ಮ ಪ್ರೀತಿ ಇದೆ. ಇತ್ತೀಚೆಗೆ, ನಾನು ಶಾಕುಂತಲಂ ನೋಡಿದೆ, ಮತ್ತು ಅದು ನನ್ನ ನಿರೀಕ್ಷೆಗಳನ್ನು ಮೀರಿದೆ. ನಿರ್ದೇಶಕ ಗುಣಶೇಖರ್ ಅವರು ನನಗೆ ಭರವಸೆ ನೀಡಿದ್ದರು. ಸಿನಿಮಾ ನೋಡಿದ ನಂತರ ಗುಣಶೇಖರ್ ಅವರ ಕಾಲಿಗೆ ಬಿದ್ದೆ. ಚಲನಚಿತ್ರವನ್ನು ನೋಡುವಾಗ ನಾನು ಅನುಭವಿಸಿದ ಅದೇ ಭಾವನೆಗಳನ್ನು ಪ್ರತಿಯೊಬ್ಬರೂ ಅನುಭವಿಸಬಹುದುʼʼ ಎಂದು ಹೇಳಿಕೊಂಡಿದ್ದಾರೆ. ಸಮಂತಾ ಮಾತನಾಡಿರುವ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಇದನ್ನೂ ಓದಿ | Samantha | ವರ್ಕೌಟ್‌ ದಿನಗಳ ಬಗ್ಗೆ ಮತ್ತೆ ನೆನಪಿಸಿಕೊಂಡ ಸಮಂತಾ!

ಟ್ರೈಲರ್‌ ತಮಿಳು, ತೆಲುಗು, ಕನ್ನಡ, ಹಿಂದಿ ಹಾಗೂ ಮಲಯಾಳಂನಲ್ಲಿ ಬಿಡುಗಡೆಗೊಂಡಿದ್ದು, ನೋಡುಗರು ಕಮೆಂಟ್‌ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ʻಶಾಕುಂತಲಂʼ 3-ಡಿ ಆವೃತ್ತಿಯನ್ನು ವೀಕ್ಷಿಸಲು ಅವರ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. ಸಮಂತಾ ರುತ್ ಪ್ರಭು ನಟನೆಯ ʻಶಾಕುಂತಲಂʼ ಸಿನಿಮಾ ಫೆಬ್ರವರಿ 17ರಂದು ತಮಿಳು, ತೆಲುಗು, ಕನ್ನಡ, ಹಿಂದಿ ಹಾಗೂ ಮಲಯಾಳಂನಲ್ಲಿ ಬಿಡುಗಡೆಗೊಳ್ಳಲಿದೆ.

ಮಹಾಕವಿ ಕಾಳಿದಾಸನ ಅಭಿಜ್ಞಾನ ʻಶಾಕುಂತಲಂʼ ನಾಟಕವನ್ನು ಆಧರಿಸಿ ಚಿತ್ರ ನಿರ್ಮಾಣವಾಗಿದೆ. ರಾಜ ದುಷ್ಯಂತ ಪಾತ್ರದಲ್ಲಿ ದೇವ್ ಮೋಹನ್ ನಟಿಸಿದರೆ, ಶಾಕುಂತಲೆಯಾಗಿ ಸಮಂತಾ ಕಾಣಿಸಿಕೊಳ್ಳುತ್ತಿದ್ದಾರೆ. ಟಾಲಿವುಡ್‌ ನಟ ಅಲ್ಲು ಅರ್ಜುನ್‌ ಮಗಳು ಅರ್ಹಾ ಕೂಡ ಈ ಚಿತ್ರಕ್ಕೆ ಬಣ್ಣ ಹಚ್ಚಿದ್ದಾರೆ.

ಚಿತ್ರವನ್ನು ಗುಣಶೇಖರ್ ನಿರ್ದೇಶಿಸಿದ್ದಾರೆ. ನೀಲಿಮಾ ಗುಣ ಮತ್ತು ದಿಲ್ ರಾಜು ನಿರ್ಮಾಣ ಮಾಡಿದ್ದಾರೆ. ಸಚಿನ್ ಖೇಡೇಕರ್, ಅನನ್ಯ ನಾಗಲ್ಲ, ಮೋಹನ್ ಬಾಬು, ಗೌತಮಿ ಮತ್ತು ಅದಿತಿ ಬಾಲನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸಮಂತಾ ರುತ್ ಪ್ರಭು ಈಗಾಗಲೇ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸಮಂತಾ ಹಾಗೂ ವಿಜಯ್‌ ದೇವರಕೊಂಡ ಅಭಿನಯದ ʻಖುಷಿʼ ಚಿತ್ರ ತೆರೆಗೆ ಬರಲು ಸಜ್ಜಾಗುತ್ತಿದೆ.

ಇದನ್ನೂ ಓದಿ | Samantha | ʻಶಾಕುಂತಲಂʼ ಚಿತ್ರೀಕರಣದ ಅತ್ಯಂತ ಕಷ್ಟಕರವಾದ ಭಾಗವನ್ನು ಬಹಿರಂಗಪಡಿಸಿದ ಸಮಂತಾ!

Exit mobile version