ಬೆಂಗಳೂರು: ರಣವೀರ್ ಸಿಂಗ್ ಮತ್ತು ಆಲಿಯಾ ಭಟ್ ನಟಿಸಿರುವ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ (Rani Kii Prem Kahaani) ಸಿನಿಮಾ ಉತ್ತಮವಾಗಿ ಕಲೆಕ್ಷನ್ ಆಗುತ್ತಿದೆ. ಈ ಐದು ದಿನಗಳಲ್ಲಿ ಸಿನಿಮಾ 60 ಕೋಟಿ ರೂ. ಕಲೆಕ್ಷನ್ ಮಾಡಿದೆ. ಇದೀಗ ಈ ಸಿನಿಮಾದಲ್ಲಿ ಶಬಾನಾ ಅಜ್ಮಿ-ಧರ್ಮೇಂದ್ರ ಅವರ ಲಿಪ್ ಲಾಕ್ ಸೀನ್ ಕೂಡ ಇದೆ. ಈ ಬಗ್ಗೆ ಹಲವು ಚರ್ಚೆಗಳು ನಡೆಯುತ್ತಿದೆ. ಧರ್ಮೇಂದ್ರ ಅವರಿಗೆ ಈಗ 87 ವರ್ಷ ಹಾಗೂ ನಟಿ ಶಬಾನಾ ಅಜ್ಮಿ ಅವರಿಗೆ 72 ವರ್ಷ ವಯಸ್ಸು. ಈ ವಯಸ್ಸಿನಲ್ಲಿ ಇವರ ಕೆಮೆಸ್ಟ್ರಿಯನ್ನೂ ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ಈ ಹಿಂದೆ ಧರ್ಮೇಂದ್ರ ಅವರು ಲಿಪ್ ಲಾಕ್ ಕುರಿತು ಹೇಳಿಕೊಂಡಿದ್ದರು. ಇದೀಗ ಶಬಾನಾ ಸರದಿ. ಸಂದರ್ಶನವೊಂದರಲ್ಲಿ ನಟಿ ಲಿಪ್ ಲಾಕ್ ಬಗ್ಗೆ ಮಾತನಾಡಿ ʻʻಧರ್ಮೇಂದ್ರನಷ್ಟು ಸುಂದರ ವ್ಯಕ್ತಿಯನ್ನು ಚುಂಬಿಸಲು ಯಾರು ಬಯಸುವುದಿಲ್ಲ?ʼʼಎಂದು ಹೇಳಿಕೊಂಡಿದ್ದಾರೆ.
ಜೂಮ್‌ಗೆ ನೀಡಿದ ಸಂದರ್ಶನದಲ್ಲಿ ಶಬಾನಾ ಮಾತನಾಡಿ, “ನಾವು ಕಿಸ್ ಮಾಡಿದಾಗ ಜನರು ನಕ್ಕು ಹುರಿದುಂಬಿಸಿದರು. ಚಿತ್ರೀಕರಣದ ಸಮಯದಲ್ಲಿ ನಮಗೆ ಈ ದೃಶ್ಯ ಮಾಡುವಾಗ ಸಮಸ್ಯೆಯಾಗಿರಲಿಲ್ಲ. ನಾನು ಈ ಹಿಂದೆ ತೆರೆಯ ಮೇಲೆ ಹೆಚ್ಚು ಕಿಸ್ ಮಾಡಿಲ್ಲ ನಿಜ. ಆದರೆ ಧರ್ಮೇಂದ್ರನಷ್ಟು ಸುಂದರ ವ್ಯಕ್ತಿಯನ್ನು ಚುಂಬಿಸಲು ಯಾರು ಬಯಸುವುದಿಲ್ಲ?ʼʼಎಂದು ಹೇಳಿದ್ದಾರೆ.
ಪತಿ ಜಾವೇದ್ ಅಖ್ತರ್ ಅವರ ಪ್ರತಿಕ್ರಿಯೆ ಏನಾಗಿತ್ತು ಎಂಬುದರ ಬಗ್ಗೆ ನಟಿ ಮಾತನಾಡಿ ʻʻಆಶ್ಚರ್ಯಕರವಾದ ಇನ್ನೊಂದು ವಿಷಯವಿದೆ. ನನ್ನ ಪತಿಗೆ ತೊಂದರೆ ಕೊಟ್ಟದ್ದು ಕಿಸ್ ದೃಶ್ಯವಲ್ಲ. ಆದರೆ ಸಿನಿಮಾದಲ್ಲಿಯ ನನ್ನ ರೌಡಿ ವರ್ತನೆ. ಚಿತ್ರದುದ್ದಕ್ಕೂ ನಾನು ಚಪ್ಪಾಳೆ ತಟ್ಟಿ, ಶಿಳ್ಳೆ ಹೊಡೆದು, ಕೇಕೆ ಹಾಕುತ್ತಿದ್ದೆʼʼ ಎಂದರು.
ಇದನ್ನೂ ಓದಿ: Rani Kii Prem Kahaani: 72ರ ನಟಿ ಶಬಾನಾ ಜತೆ ಧರ್ಮೇಂದ್ರ ಲಿಪ್ ಲಾಕ್; ರೊಮ್ಯಾನ್ಸ್‌ಗೆ ವಯಸ್ಸಿದ್ಯಾ ಎಂದ ನಟ!
ರೊಮ್ಯಾನ್ಸ್‌ಗೆ ಯಾವುದೇ ವಯಸ್ಸಿಲ್ಲ!
ಇತ್ತೀಚಿನ ಸಂದರ್ಶನವೊಂದರಲ್ಲಿ, ಧರ್ಮೇಂದ್ರ ಅವರು ಚಿತ್ರದಲ್ಲಿನ ತಮ್ಮ ಲಿಪ್‌ಲಾಕ್ ದೃಶ್ಯದ ಕುರಿತು ಮಾತನಾಡಿದ್ದರು. “ಶಬಾನಾ ಮತ್ತು ನಾನು ಲಿಪ್ ಲಾಕ್ ದೃಶ್ಯದಿಂದ ಪ್ರೇಕ್ಷಕರನ್ನು ಆಶ್ಚರ್ಯಗೊಳಿಸಿದ್ದೇವೆ ಎಂದು ನಾನು ಕೇಳಲ್ಪಟ್ಟೆ. ಪ್ರೇಕ್ಷಕರು ಈ ಬಗ್ಗೆ ಹೊಗಳಿದ್ದಾರೆ. ಆದರೆ ನಾನು ಜನರಿಂದ ಇಷ್ಟರ ಮಟ್ಟಿಗೆ ಮೆಚ್ಚುಗೆಯನ್ನು ನಿರೀಕ್ಷಿಸಿರಲಿಲ್ಲ. ನಾನು ಕೊನೆಯ ಬಾರಿ ನಫೀಸಾ ಅಲಿಯೊಂದಿಗೆ ʻಲೈಫ್ ಇನ್ ಎ ಮೆಟ್ರೋʼದಲ್ಲಿ ಲಿಪ್ ಲಾಕ್ ದೃಶ್ಯವನ್ನು ಮಾಡಿದೆ. ಅದಕ್ಕೂ ಕೂಡ ಇದೇ ರೀತಿ ಜನರಿಂದ ಪ್ರಶಂಸೆಗೆ ಒಳಪಟ್ಟಿತ್ತುʼʼಎಂದು ಹೇಳಿದ್ದರು.
ನಟ ಮಾತು ಮುಂದುವರಿಸಿ “ಕರಣ್ ನಮಗೆ ದೃಶ್ಯವನ್ನು ವಿವರಿಸಿದಾಗ, ನಾನು ಉತ್ಸುಕನಾಗಲಿಲ್ಲ. ನಾವು ಆ ಘಟನೆಯನ್ನು ಅರ್ಥಮಾಡಿಕೊಂಡೆವು. ಸಿನಿಮಾಗೆ ಅಗತ್ಯವಿದೆಯೇ ಎಂಬುದು ನಾನು ಯೋಚಿಸಿದೆ. ಬಲವಂತವಾಗಿ ಈ ದೃಶ್ಯವನ್ನು ನಿರ್ದೇಶಕರು ಮಾಡಿಸಿಲ್ಲ. ಹೀಗಾಗಿ ಈ ದೃಶ್ಯವನ್ನು ಮಾಡಲು ಒಪ್ಪಿಕೊಂಡೆ. ಅಲ್ಲದೆ, ರೊಮ್ಯಾನ್ಸ್‌ಗೆ ಯಾವುದೇ ವಯಸ್ಸು ಇಲ್ಲ ಎಂದು ನಾನು ನಂಬುತ್ತೇನೆ. ವಯಸ್ಸು ಕೇವಲ ಒಂದು ಸಂಖ್ಯೆ ಮತ್ತು ವಯಸ್ಸಿನ ಹೊರತಾಗಿಯೂ ಇಬ್ಬರು ವ್ಯಕ್ತಿಗಳು ಚುಂಬಿಸುವ ಮೂಲಕ ಪರಸ್ಪರ ಪ್ರೀತಿಯನ್ನು ತೋರಿಸುತ್ತಾರೆ. ಶಬಾನಾ ಮತ್ತು ನಾನು ಅದನ್ನು ಮಾಡುವಾಗ ಯಾವುದೇ ರೀತಿಯ ಎಡವಟ್ಟನ್ನು ಅನುಭವಿಸಲಿಲ್ಲ ಏಕೆಂದರೆ ಅದು ತುಂಬಾ ಕಲಾತ್ಮಕವಾಗಿ ಚಿತ್ರೀಕರಿಸಲಾಗಿದೆʼʼಎಂದಿದ್ದರು.
7 ವರ್ಷಗಳ ನಂತರ ಕರಣ್ ಜೋಹರ್ ಈ ಸಿನಿಮಾ ಮೂಲಕ ನಿರ್ದೇಶನಕ್ಕೆ ಇಳಿದಿದ್ದಾರೆ. ಆಲಿಯಾ ಭಟ್ ಮತ್ತು ರಣವೀರ್ ಸಿಂಗ್ ಜತೆಗೆ ಧರ್ಮೇಂದ್ರ, ಶಬಾನಾ ಅಜ್ಮಿ ಮತ್ತು ಜಯಾ ಬಚ್ಚನ್ ನಟಿಸಿದ್ದಾರೆ. ದೇಶಾದ್ಯಂತ ರಣವೀರ್ ಸಿಂಗ್ ಅವರಿಗೆ ಅಭಿಮಾನಿಗಳು ಇದ್ದಾರೆ. ಹಾಗಾಗಿ ದೇಶದ ಎಲ್ಲ ಪ್ರಮುಖ ನಗರಗಳಲ್ಲಿ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಸಿನಿಮಾ ಉತ್ತಮವಾಗಿ ಪ್ರದರ್ಶನ ಕಾಣುತ್ತಿದೆ ಅನೇಕ ಬಾಲಿವುಡ್ ಸೆಲೆಬ್ರಿಟಿಗಳು ಸಹ ಚಲನಚಿತ್ರದ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.”