ಮುಂಬೈ: ಮುಂಬೈ ಪೊಲೀಸ್ ವಾರ್ಷಿಕ ಕಾರ್ಯಕ್ರಮ ʻಉಮಂಗ್ʼನಲ್ಲಿ (Umang 2023) ಹಲವಾರು ಬಾಲಿವುಡ್ ತಾರೆಯರು ಭಾಗವಹಿಸಿದ್ದರು. ಶಾರುಖ್ ಖಾನ್, ಆಲಿಯಾ ಭಟ್, ಸಲ್ಮಾನ್ ಖಾನ್, ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಹೀಗೆ ಅನೇಕ ಬಾಲಿವುಡ್ ಸ್ಟಾರ್‌ಗಳು ಸೇರಿದ್ದರು. ಅನನ್ಯ ಪಾಂಡೆ ಮತ್ತು ಆದಿತ್ಯ ರಾಯ್ ಕಪೂರ್ ಕೂಡ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಶಾರುಖ್ ಖಾನ್ ಅವರು ಕಾರ್ಯಕ್ರಮದಲ್ಲಿ ಪ್ರಮುಖ ಹೈಲೈಟ್ ಆಗಿದ್ದರು.
ಶಾರುಖ್ ಸೂಟ್ ಲುಕ್‌ನಲ್ಲಿ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದರು. ಕಪ್ಪು ಬ್ಲೇಜರ್ ಜತೆ ಬಿಳಿ ಶರ್ಟ್ ಧರಿಸಿದ್ದರು. ಸಲ್ಮಾನ್ ಖಾನ್ ನೀಲಿ ಬಣ್ಣದ ಶರ್ಟ್‌ನಲ್ಲಿ ಕಂಡಿದ್ದಾರೆ. ಗಾಲಿಕುರ್ಚಿಯಲ್ಲಿ ಕಾಣಿಸಿಕೊಂಡ ಗಾಯಕಿ ಉಷಾ ಉತ್ತುಪ್ ಅವರಿಗೆ ಅಪ್ಪುಗೆಯನ್ನು ನೀಡಿದರು ಸಲ್ಮಾನ್ ಖಾನ್. ನೀಲಿ ಬಣ್ಣದ ಬನಾರಸ್ ಸೀರೆಯಲ್ಲಿ ದೀಪಿಕಾ ಪಡುಕೋಣೆ ಮಿಂಚಿದ್ದಾರೆ. ಆಲಿಯಾ ಭಟ್ ಫ್ಲವರ್ ಪ್ರಿಂಟೆಡ್ ಸೀರೆಯಲ್ಲಿ ಎಲ್ಲರ ಗಮನ ಸೆಳೆದರು.
ಉಮಂಗ್ 2023ರಲ್ಲಿ ಶಾರುಖ್ ವಿಶೇಷ ಪ್ರದರ್ಶನ
‘ಡಂಕಿ’ ಬಿಡುಗಡೆಯ ಸಂಭ್ರಮದಲ್ಲಿರುವ ನಟ ಶಾರುಖ್ ವೇದಿಕೆಯಲ್ಲಿ ಡ್ಯಾನ್ಸ್ ಮೂಲಕ ಎಲ್ಲರನ್ನು ರಂಜಿಸಿದರು. ತಮ್ಮ ಬ್ಲಾಕ್‌ಬಸ್ಟರ್ ಚಿತ್ರಗಳಾದ ‘ಪಠಾಣ್’ ಮತ್ತು ‘ಜವಾನ್’ ಗಳ ಹಾಡುಗಳಿಗೆ ಹೆಜ್ಜೆ ಹಾಕಿದ್ದಾರೆ. ಈವೆಂಟ್ ವೈರಲ್ ವೀಡಿಯೊಗಳಲ್ಲಿ, ಶಾರುಖ್ ʻಜೂಮೇ ಜೋ ಪಠಾಣ್ʼ ಹುಕ್‌ಸ್ಟೆಪ್ ಮಾಡಿದ್ದಾರೆ.
Shah Rukh Khan grooves to #NotRamaiyaVastavaiya at Umang 2023❤️#Umang2023 #ShahRukhKhan #Dunki #DunkiBlockbuster #ShahRukhKhan𓀠 pic.twitter.com/9J5IHy4IUo
— Thriller Soundtrack Music (@sandeeprathi100) December 24, 2023
ವಿಜಯ್ ವರ್ಮಾ ಭೇಟಿಯಾದ ರಣವೀರ್
ರಣವೀರ್ ಸಿಂಗ್ ಅವರು ವಿಜಯ್ ವರ್ಮಾ ಜತೆ ಒಟ್ಟಿಗೆ ಇರುವ ವಿಡಿಯೊ ಕೂಡ ವೈರಲ್ ಆಗಿದೆ. ಸ್ಟೈಲಿಶ್ ಆಗಿ ಕಾಣಿಸಿಕೊಂಡ ಕರಣ್ ಜೋಹರ್ ಅವರು ಕಿಯಾರಾ ಆಡ್ವಾಣಿ ಅವರೊಂದಿಗೆ ಮಾತನಾಡುವಲ್ಲಿ ನಿರತರಾಗಿದ್ದರು.
ಕಿಯಾರಾ ಎಥ್ನಿಕ್ ಲುಕ್‌ನಲ್ಲಿ ಸುಂದರವಾಗಿ ಕಾಣುತ್ತಿದ್ದರು. ಸಿದ್ಧಾರ್ಥ್ ಮಲ್ಹೋತ್ರಾ ಕೂಡ ಕಾರ್ಯಕ್ರಮದ ಭಾಗವಾಗಿದ್ದರು. ರಣಬೀರ್ ಕಪೂರ್ ಮತ್ತು ನಟ ಬಾಬಿ ಡಿಯೋಲ್ ಫೋಟೊಗೆ ಪೋಸ್ ಕೂಡ ನೀಡಿದ್ದಾರೆ.
ಸಮಾರಂಭದಲ್ಲಿ ಜಾನ್ವಿ ಕಪೂರ್, ಟಬು, ರಿತೇಶ್ ದೇಶಮುಖ್, ಜೆನಿಲಿಯಾ ಡಿಸೋಜಾ, ತಮನ್ನಾ ಭಾಟಿಯಾ, ಕೃತಿ ಸನೋನ್, ಮೃಣಾಲ್ ಠಾಕೂರ್, ನವಾಜುದ್ದೀನ್ ಸಿದ್ದಿಕಿ, ಹಿಮೇಶ್ ರೇಶಮಿಯಾ, ಅರ್ಬಾಜ್ ಖಾನ್, ವಿಕ್ಕಿ ಕೌಶಲ್, ಮಾಧುರಿ ದೀಕ್ಷಿತ್, ರಾವೆ ಶ್ರೀರಾಮ್ ನೇಹಿ ಟಂಡನ್, ರಾಕುಲ್ ಪ್ರೀತ್ ಸಿಂಗ್, ಜಾಕಿ ಭಗ್ನಾನಿ, ಜಾನ್ ಅಬ್ರಹಾಂ, ಜಾಕಿ ಶ್ರಾಫ್, ಕಾರ್ತಿಕ್ ಆರ್ಯನ್ ಮತ್ತು ವಾಣಿ ಕಪೂರ್ ಇತರರು ಇದ್ದರು.