ಬೆಂಗಳೂರು: ಶಾರುಖ್ ಖಾನ್ (Shah Rukh Khan) ʻಪಠಾಣ್ʼ ಸಿನಿಮಾ ಬಳಿಕ ಮತ್ತೆ ಶೂಟಿಂಗ್ಗಳಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ಶಾರುಖ್ ಅಭಿನಯದ ಜವಾನ್ ಚಿತ್ರದ ಪರಿಷ್ಕೃತ ಬಿಡುಗಡೆ ದಿನಾಂಕ ಪ್ರಕಟಿಸಿದೆ. ಇದರ ಬೆನ್ನಲ್ಲೇ ಶಾರುಖ್ ಹೊಸ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರಾ ಎಂಬ ಗಾಸಿಪ್‌ಗಳು ಹರಿದಾಡುತ್ತಿವೆ. ಪೂರಕವಾಗಿ ʻಸ್ಟೂಡೆಂಟ್ ಆಫ್ ದಿ ಇಯರ್- 2ʼ ಮತ್ತು ʻಐ ಹೇಟ್ ಲವ್ ಸ್ಟೋರಿʼ ಸಿನಿಮಾ ನಿರ್ದೇಶಕ ಪುನಿತ್ ಮಲ್ಹೋತ್ರಾ ಅವರು ಶಾರುಖ್ ಜತೆಗಿನ ಫೋಟೊವನ್ನು ಹಂಚಿಕೊಂಡಿದ್ದಾರೆ.
ನಿರ್ದೇಶಕ ಪುನಿತ್ ಮಲ್ಹೋತ್ರಾ ಇನ್‌ಸ್ಟಾದಲ್ಲಿ ಹೊಸ ಫೋಸ್ಟ್ ಹಂಚಿಕೊಂಡಿದ್ದಾರೆ. ಶಾರುಖ್ ಅವರೊಂದಿಗೆ ಹೊಸ ಪ್ರಾಜೆಕ್ಟ್‌ಗಾಗಿ ಚಿತ್ರೀಕರಿಸಿದಂತಿದೆ. ಶೀರ್ಷಿಕೆಯಲ್ಲಿ ಹೀಗೆ ಬರೆದಿದ್ದಾರೆ, “ ಶಾರುಖ್ ಜತೆ ಸೆಟ್‌ನಲ್ಲಿ, ಇದೆಲ್ಲವನ್ನೂ ಪ್ರೀತಿಗೆ ಸಾಟಿಯಿಲ್ಲʼʼ ಎಂದು ʻಧರ್ಮ 2.0ʼ ಟ್ಯಾಗ್ ಕೂಡ ಮಾಡಿದ್ದಾರೆ, ಇದೀಗ ಜೋಡಿ ಜಾಹೀರಾತಿಗಾಗಿ ಚಿತ್ರೀಕರಿಸಿದಂತಿದೆ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
ಶಾರುಖ್ ಖಾನ್ ಇತ್ತೀಚೆಗೆ ಅಟ್ಲಿ ನಿರ್ದೇಶನದ ಜವಾನ್ ಬಿಡುಗಡೆ ದಿನಾಂಕವನ್ನು ಘೋಷಿಸಿದರು. ಚಿತ್ರಸೆಪ್ಟೆಂಬರ್ 7ರಂದು ಬಿಡುಗಡೆಯಾಗಲಿದೆ. ಜವಾನ್ ನಲ್ಲಿ ನಯನತಾರಾ ಮತ್ತು ವಿಜಯ್ ಸೇತುಪತಿ ಪ್ರಮುಖ ಪಾತ್ರಗಳಲ್ಲಿ ನಟಿಸಲಿದ್ದಾರೆ. ಸುನಿಲ್ ಗ್ರೋವರ್, ಪ್ರಿಯಾಮಣಿ, ವಿಜಯ್ ಸೇತುಪತಿ, ಸನ್ಯಾ ಮಲ್ಹೋತ್ರಾ ಮತ್ತು ರಿದ್ಧಿ ಡೋಗ್ರಾ ಕೂಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ದೀಪಿಕಾ ಪಡುಕೋಣೆ, ವಿಜಯ್ ದಳಪತಿ, ಸಂಜಯ್ ದತ್ ಮತ್ತು ಅಲ್ಲು ಅರ್ಜುನ್ ಕೂಡ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ. ಕೆಲವು ದಿನಗಳ ಹಿಂದೆ, ಚಿತ್ರದ ಸೆಟ್‌ಗಳಿಂದ ಶಾರುಖ್ ಮತ್ತು ದೀಪಿಕಾ ಅವರ ಕೆಲವು ಚಿತ್ರಗಳು ಲೀಕ್ ಆಗಿದ್ದವು.
ಪುನಿತ್ ಮಲ್ಹೋತ್ರಾ ಪೋಸ್ಟ್
ಇದನ್ನೂ ಓದಿ; Shah Rukh Khan: ʻಜವಾನ್ʼ ರಿಲೀಸ್ ಡೇಟ್ ಅನೌನ್ಸ್ : ನಿರ್ದೇಶಕರಿಗೆ,ನಿರ್ಮಾಪಕರಿಗೆ ಹೇಳಬೇಡಿ ಅಂದಿದ್ಯಾಕೆ ಶಾರುಖ್?
ಶೀಘ್ರದಲ್ಲೇ ಸಲ್ಮಾನ್ ಖಾನ್ ಅವರ ಟೈಗರ್-3 ನಲ್ಲಿ ಶಾರುಖ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರಾಜ್‌ಕುಮಾರ್ ಹಿರಾನಿ ನಿರ್ದೇಶನದ ಡಂಕಿ ಡಿಸೆಂಬರ್‌ನಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಈ ಚಿತ್ರದಲ್ಲಿ ಶಾರುಖ್ ಜತೆಗೆ ತಾಪ್ಸಿ ಪನ್ನು ನಟಿಸಿದ್ದಾರೆ.