ಮುಂಬೈ: ಶಾರುಖ್ ಖಾನ್ (Shah Rukh Khan) ನಟನೆಯ ಪಠಾಣ್ ಸಿನಿಮಾ ವಿಶ್ವಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಸಿನಿಮಾ ಕೋಟಿ ಕೋಟಿ ಹಣ ಗಳಿಸಿಕೊಳ್ಳುತ್ತಿದೆ. ಇದರ ಮಧ್ಯೆಯೇ ಶಾರುಖ್ ಟ್ವಿಟರ್‌ನಲ್ಲಿ ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರಿಸುವ ಕೆಲಸವನ್ನೂ ಮಾಡುತ್ತಿದ್ದಾರೆ. ಈ ವೇಳೆ ಅವರು ತಮ್ಮ ಮಗ ಅಬ್ರಾಮ್ ಪಠಾಣ್ ಸಿನಿಮಾ ಸೆಟ್ ಅಲ್ಲಿ ಏನು ಮಾಡುತ್ತಿದ್ದರು ಎನ್ನುವ ರಹಸ್ಯವನ್ನೂ ಬಿಚ್ಚಿಟ್ಟಿದ್ದಾರೆ.
ಇದನ್ನೂ ಓದಿ: Viral Video: ಎಸ್ಕಲೇಟರ್ನಲ್ಲಿ ನಾಯಿಮರಿ ಆಟ; ಹತ್ತೋದು-ಇಳಿಯೋದು ಸಖತ್ ಕ್ಯೂಟ್
ಆಸ್ಕ್ ಎಸ್‌ಆರ್‌ಕೆ ಮಾಲಿಕೆಯಲ್ಲಿ ಅಭಿಮಾನಿಯೊಬ್ಬರು ಶಾರುಖ್ ಅವರಿಗೆ ವಿಶೇಷ ಪ್ರಶ್ನೆಯೊಂದನ್ನು ಕೇಳಿದ್ದಾರೆ. ಪಠಾಣ್ ಸೆಟ್‌ನಲ್ಲಿ ದೀಪಿಕಾ ಜೊತೆ ಅಬ್ರಾಮ್ ಇರುವ ಫೋಟೋ ಹಂಚಿಕೊಂಡಿರುವ ಅವರು, “ಅಬ್ರಾಮ್ ಏಕಾಗಿ ಸೆಟ್ ಅಲ್ಲಿದ್ದರು. ಅವರೇನಾದರೂ ಸಹಾಯಕ ನಿರ್ದೇಶಕರ ಕೆಲಸ ಮಾಡಿಬಿಟ್ಟರಾ?” ಎಂದು ತಮಾಷೆಯ ಪ್ರಶ್ನೆ ಹಾಕಿದ್ದಾರೆ. ಅದಕ್ಕೆ ಉತ್ತರಿಸಿರುವ ಶಾರುಖ್, “ಇಲ್ಲ ಇಲ್ಲ, ಅವನೇ ನನ್ನ ಸ್ಟೈಲಿಸ್ಟ್ ಆಗಿದ್ದ” ಎಂದು ಹೇಳಿದ್ದಾರೆ.
ಅದಷ್ಟೇ ಅಲ್ಲದೆ ಕೆಲವು ಅಭಿಮಾನಿಗಳು ದೀಪಿಕಾ ಅವರ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂದೂ ಕೇಳಿದ್ದಾರೆ. ಅದಕ್ಕೆ ಶಾರುಖ್ “ದೀಪಿಕಾ ತುಂಬಾ ಸುಂದರ ಮತ್ತು ಒಳ್ಳೆಯವರು” ಎಂದಿದ್ದಾರೆ. ಹಾಗೆಯೇ ಸಿನಿಮಾ ಹಾಗೂ ತಮ್ಮ ವೈಯಕ್ತಿಕ ಜೀವನದ ಹಲವು ಅನುಭವಗಳನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.