Site icon Vistara News

Shah Rukh Khan: 17 ವರ್ಷಗಳ ಬಳಿಕ ಜತೆಯಾಗಲಿದ್ದಾರೆ ಶಾರುಖ್- ಅಮಿತಾಭ್‌!

Shah Rukh Khan Amitabh

ಬೆಂಗಳೂರು: ಬಾಲಿವುಡ್ ನಟ ಶಾರುಖ್‌ ಖಾನ್‌ (Shah Rukh Khan) ಜವಾನ್‌ (Jawan Movie) ಸಿನಿಮಾದ ಬಿಡುಗಡೆಗೆ ಸಜ್ಜಾಗಿದ್ದಾರೆ. ಇದರ ಬೆನ್ನಲ್ಲೇ ಇದೀಗ ಮತ್ತೆ ಶಾರುಖ್‌ ಸಿಹಿ ಸುದ್ದಿಯನ್ನು ಅವರ ಫ್ಯಾನ್ಸ್‌ಗೆ ನೀಡಿದ್ದಾರೆ. ಕೇವಲ ಶಾರುಖ್‌ ಮಾತ್ರವಲ್ಲ ಅಮಿತಾಭ್‌ (Amitabh Bachchan) ಕೂಡ ಅವರ ಫ್ಯಾನ್ಸ್‌ಗೆ ಗುಡ್‌ನ್ಯೂಸ್‌ ಕೊಟ್ಟಿದ್ದಾರೆ. ಸೂಪರ್‌ಸ್ಟಾರ್‌ಗಳಾದ ಶಾರುಖ್ ಖಾನ್ ಮತ್ತು ಅಮಿತಾಭ್‌ ಬಚ್ಚನ್ 17 ವರ್ಷಗಳ ಬಳಿಕ ಶೀಘ್ರದಲ್ಲೇ ಒಂದು ಪ್ರಾಜೆಕ್ಟ್‌ಗಾಗಿ ಒಟ್ಟಿಗೆ ತೆರೆಗೆ ಬರುತ್ತಿದ್ದಾರೆ. 2006ರಲ್ಲಿ ಬಿಡುಗಡೆಯಾದ ‘ಕಭಿ ಅಲ್ವಿದಾ ನಾ ಕೆಹನಾ’ದಲ್ಲಿ (Kabhi Alvida Naa Kehna) ಕೊನೆಯ ಬಾರಿಗೆ ಈ ಜೋಡಿ ಒಟ್ಟಿಗೆ ತೆರೆ ಹಂಚಿಕೊಂಡಿತ್ತು. ಈ ಸುದ್ದಿ ವೈರಲ್‌ ಆಗುತ್ತಿದ್ದಂತೆ ಸೋಷಿಯಲ್‌ ಮೀಡಿಯಾದಲ್ಲಿ ಇವರಿಬ್ಬರ ಫ್ಯಾನ್ಸ್‌ ಖುಷಿ ಹಂಚಿಕೊಳ್ಳುತ್ತಿದ್ದಾರೆ.

2006ರಲ್ಲಿ ಬಿಡುಗಡೆಯಾದ ‘ಕಭಿ ಅಲ್ವಿದಾ ನಾ ಕೆಹನಾ’ ಸಿನಿಮಾವನ್ನು ಕರಣ್ ಜೋಹರ್ ಬರೆದು ನಿರ್ದೇಶಿಸಿದ್ದರು. ಚಿತ್ರದಲ್ಲಿ ಅಭಿಷೇಕ್ ಬಚ್ಚನ್, ರಾಣಿ ಮುಖರ್ಜಿ, ಪ್ರೀತಿ ಜಿಂಟಾ ಮತ್ತು ಕಿರಣ್ ಖೇರ್ ಕೂಡ ನಟಿಸಿದ್ದರು. ಇವರಿಬ್ಬರು ಮತ್ತೊಮ್ಮೆ ಒಟ್ಟಿಗೆ ಪರದೆಯನ್ನು ಹಂಚಿಕೊಳ್ಳುವುದನ್ನು ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ಮೂಲಗಳ ಪ್ರಕಾರ ಅಮಿತಾಭ್ ಬಚ್ಚನ್ ಮತ್ತು ಶಾರುಖ್ ಖಾನ್ ಕೈಯಲ್ಲಿ ಒಂದು ಪ್ರಾಜೆಕ್ಟ್‌ ಇದೆ. ಆದರೆ ಹೆಚ್ಚಿನ ಸುದ್ದಿಗಳು ಇನ್ನೂ ಹೊರಬಂದಿಲ್ಲ. ಆಗಸ್ಟ್ 26ರಂದು ಟ್ವಿಟರ್‌ನಲ್ಲಿ ಶಾರುಖ್ ಖಾನ್ ಆಸ್ಕ್ ಎಸ್‌ಆರ್‌ಕೆ ಸೆಷನ್ ನಡೆಸಿದರು. ಅಲ್ಲಿ ಅಭಿಮಾನಿಯೊಬ್ಬರು ಅಮಿತಾಭ್‌ ಬಚ್ಚನ್ ಬಗ್ಗೆ ಏನಾದರೂ ಹೇಳುವಂತೆ ಕೇಳಿದರು. ಆಗ ಶಾರುಖ್‌ ಇಬ್ಬರೂ (ಅಮಿತಾಭ್‌-ಶಾರುಖ್‌) ಒಟ್ಟಿಗೆ ಇರುವ ಪೋಸ್ಟರ್ ಕೂಡ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಸ್ವತಃ ಶಾರುಖ್‌ ಅವರೇ ಈ ಬಗ್ಗೆ ಉತ್ತರಿಸಿದರು.

ʻʻಬಹಳ ವರ್ಷಗಳ ನಂತರ ಅಮಿತಾಭ್‌ ಅವರೊಂದಿಗೆ ಕೆಲಸ ಮಾಡುವುದು ತುಂಬಾ ಖುಷಿಯಾಯಿತು. ಸ್ಫೂರ್ತಿ ಮತ್ತು ಆಶೀರ್ವಾದದೊಂದಿಗೆ ಶೂಟ್‌ಗೆ ಆದಷ್ಟು ಬೇಗ ಬರುತ್ತೇನೆʼʼಎಂದು ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Shah Rukh Khan : ಶಾರುಖ್‌ ಖಾನ್‌ ಚಿತ್ರಗಳಲ್ಲೇ ಅತಿ ದುಬಾರಿ ವೆಚ್ಚದ ಸಿನಿಮಾ ಇದು!

ಶಾರುಖ್‌ ಟ್ವೀಟ್‌

ಶಾರುಖ್ ಖಾನ್ ಮತ್ತು ಅಮಿತಾಭ್‌ ಬಚ್ಚನ್ ಈ ಹಿಂದೆ ‘ಮೊಹಬ್ಬತೇನ್ (Mohabbatein)’, ‘ಕಭಿ ಖುಷಿ ಕಭಿ ಗಮ್ (Kabhi Khushi Kabhi Gham)’ ಮತ್ತು ‘ವೀರ್ ಝಾರಾ’ (Veer Zaara) ನಂತಹ ಐಕಾನಿಕ್ ಚಲನಚಿತ್ರಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು.

ಅಟ್ಲೀ ನಿರ್ದೇಶನದ ‘ಜವಾನ್’ ಸಿನಿಮಾದಲ್ಲಿ ಶಾರುಖ್‌ ಕಾಣಿಸಿಕೊಳ್ಳಲಿದ್ದಾರೆ. ಈ ವರ್ಷ ಸೆಪ್ಟೆಂಬರ್ 7ರಂದು ಚಿತ್ರ ಥಿಯೇಟರ್‌ಗಳಿಗೆ ಬರಲಿದೆ. ಶಾರುಖ್‌ ಕೈಯಲ್ಲಿ ‘ಡಂಕಿ’ ಸಿನಿಮಾ ಕೂಡ ಇದೆ. ಅಮಿತಾಭ್‌ ಕೂಡ ಪ್ರಭಾಸ್ ಮತ್ತು ದೀಪಿಕಾ ಪಡುಕೋಣೆ ಅವರೊಂದಿಗೆ ‘ಪ್ರಾಜೆಕ್ಟ್ ಕೆ’ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಷ್ಟೇ ಅಲ್ಲದೇ ಟೈಗರ್ ಶ್ರಾಫ್ ಅವರ ‘ಗಣಪತ್’ ಮತ್ತು ‘ದಿ ಇಂಟರ್ನ್’ ಹಿಂದಿ ರಿಮೇಕ್‌ನಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ.

Exit mobile version