Site icon Vistara News

Shah Rukh Khan:  ಮತ್ತೆ ತೆರೆ ಮೇಲೆ ಒಂದಾಗಲಿದ್ದಾರಾ ಶಾರುಖ್‌, ಸಲ್ಮಾನ್? ಸಿದ್ಧಾರ್ಥ್ ಆನಂದ್ ಆ್ಯಕ್ಷನ್‌ ಕಟ್‌?

Shah Rukh Khan and Salman Khan to reunite for Tiger vs Pathaan

ಬೆಂಗಳೂರು: ʻಕರಣ್ ಅರ್ಜುನ್ʼ ಸಿನಿಮಾ ಬಳಿಕ ಡೈನಾಮಿಕ್ ಜೋಡಿಯಾದ ಶಾರುಖ್ ಖಾನ್ (Shah Rukh Khan) ಮತ್ತು ಸಲ್ಮಾನ್ ಖಾನ್ ಒಟ್ಟಿಗೆ ತೆರೆ ಮೇಲೆ ಕಾಣಲು ಅವರ ಅಭಿಮಾನಿಗಳು ಕಾತುರರಾಗಿದ್ದಾರೆ. ಶಾರುಖ್‌ ಅವರ ಪಠಾಣ್‌ ಸಿನಿಮಾದಲ್ಲಿ ಸಲ್ಮಾನ್‌ ಖಾನ್‌ ಅವರ ಪ್ರವೇಶ ಅಭಿಮಾನಿಗಳಿಂದ ವ್ಯಾಪಕವಾಗಿ ಮೆಚ್ಚುಗೆ ಪಡೆದಿದೆ. ಇದಾದ ಬಳಿಕ ಯಶ್ ರಾಜ್ ಫಿಲ್ಮ್ಸ್‌ನ ಸ್ಪೈ ಯೂನಿವರ್ಸ್ ಫ್ರ್ಯಾಂಚೈಸ್‌ನಲ್ಲಿ ಮುಂಬರುವ ಕಂತು ʻಟೈಗರ್ ವರ್ಸಸ್ ಪಠಾಣ್‌ʼ ಅನ್ನು ನಿರ್ದೇಶಿಸಲು ವೈಆರ್‌ಎಫ್ ಸಿದ್ಧಾರ್ಥ್ ಆನಂದ್ ಅವರನ್ನು ನೇಮಿಸಿಕೊಂಡಿದೆ.

ಟೈಗರ್ VS ಪಠಾಣ್

ಬಾಕ್ಸ್ ಆಫೀಸ್ ಕಲೆಕ್ಷನ್‌ನಲ್ಲಿ ಸಖತ್‌ ಮನ್ನಣೆ ಪಡೆದಿರುವ ಪಠಾಣ್‌ ಸಿನಿಮಾ ಬಳಿಕ ತಯಾರಕರು ಮತ್ತೊಂದು ಭಾಗದೊಂದಿಗೆ ವಿಸ್ತರಿಸಲು ನಿರ್ಧರಿಸಿದ್ದಾರೆ. ಚಲನಚಿತ್ರ ವಿಮರ್ಶಕ ಮತ್ತು ವ್ಯಾಪಾರ ವಿಶ್ಲೇಷಕ ತರಣ್ ಆದರ್ಶ್ ಅವರು ಟ್ವಿಟರ್‌ನಲ್ಲಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಟೈಗರ್ ವರ್ಸಸ್ ಪಠಾಣ್‌ ಎಂಬ ಹೊಸ ಕಂತನ್ನು ನಿರ್ದೇಶಿಸಲು ಪಠಾಣ್ ನಿರ್ದೇಶಕ ಸಿದ್ಧಾರ್ಥ್ ಆನಂದ್ ಅವರನ್ನು ವೈಆರ್‌ಎಫ್ ನೇಮಿಸಿಕೊಂಡಿದೆ ಎಂದು ಮಾಹಿತಿ ನೀಡಿದ್ದಾರೆ. ಚಿತ್ರದ ಶೂಟಿಂಗ್ 2024ರ ಜನವರಿಯಿಂದ ಪ್ರಾರಂಭವಾಗಲಿದೆ.

ಚಿತ್ರದಲ್ಲಿ ಶಾರುಖ್ ಖಾನ್ ಏಜೆಂಟ್ ಪಠಾಣ್ ಪಾತ್ರವನ್ನು ಪುನರಾವರ್ತಿಸುತ್ತಿದ್ದಾರೆ. ಆದರೆ ಸಲ್ಮಾನ್ ಖಾನ್ ಟೈಗರ್ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಸೂಪರ್‌ಸ್ಟಾರ್‌ಗಳಾದ ಶಾರುಖ್ ಖಾನ್ ಮತ್ತು ಸಲ್ಮಾನ್ ಖಾನ್, 1995ರ ಫ್ಯಾಂಟಸಿ ಆ್ಯಕ್ಷನ್ ಚಿತ್ರ ಕರಣ್ ಅರ್ಜುನ್‌ನಲ್ಲಿ ಒಟ್ಟಿಗೆ ನಟಿಸಿದ್ದರು. ಬಳಿಕ ಬೇರೆ ಯಾವ ಸಿನಿಮಾದಲ್ಲಿಯೂ ನಟಿಸಿಲ್ಲ. ಶಾರುಖ್ ಖಾನ್ ನಟಿಸಿದ ಮತ್ತು ಆನಂದ್ ನಿರ್ದೇಶಿಸಿದ ಬ್ಲಾಕ್‌ಬಸ್ಟರ್ ಪಠಾಣ್‌ನಲ್ಲಿ ಸಲ್ಮಾನ್ ಖಾನ್ ಅತಿಥಿ ಪಾತ್ರವನ್ನು ನಿಭಾಯಿಸಿದ್ದರು ಇದು YRF ಸ್ಪೈ ಯೂನಿವರ್ಸ್ ಫ್ರ್ಯಾಂಚೈಸ್‌ನ ಪಾತ್ರಗಳನ್ನು ಒಟ್ಟಿಗೆ ತಂದ ಮೊದಲ ಚಿತ್ರವಾಗಿದೆ. ಟೈಗರ್ 3 ಇದೇ ನವೆಂಬರ್‌ನಲ್ಲಿ ದೀಪಾವಳಿಯಂದು ತೆರೆಗೆ ಬರುವ ನಿರೀಕ್ಷೆಯಿದೆ.

ಇದನ್ನೂ ಓದಿ: Shah Rukh Khan: ಶಾರುಖ್‌ ಅಭಿಮಾನಿಗಳ ಅಭಿಮಾನದ ಜವಾನ್‌ ಪೋಸ್ಟರ್‌ ವೈರಲ್‌! ಟ್ರೆಂಡ್‌ ಆಗಿದ್ಯಾಕೆ?

ಇದನ್ನೂ ಓದಿ: Video: ಪತಿ-ಪತ್ನಿಯಂತೆ ನಿಂತು ಫೋಟೋಕ್ಕೆ ಪೋಸ್​ ಕೊಟ್ಟರಾ ಐಶ್ವರ್ಯಾ ರೈ-ಸಲ್ಮಾನ್ ಖಾನ್?​; ಐಶ್​ ಅಭಿಮಾನಿಗಳಿಗೆ ನೋವು

ತರಣ್ ಆದರ್ಶ್ ಟ್ವೀಟ್‌

ಸಿದ್ಧಾರ್ಥ್ ಅವರು ತಮ್ಮ ಮುಂದಿನ ಫೈಟರ್ ಸಿನಿಮಾವನ್ನು ನಿರ್ದೇಶಿಸಲಿದ್ದಾರೆ. ಚಿತ್ರದಲ್ಲಿ ಹೃತಿಕ್ ರೋಷನ್, ದೀಪಿಕಾ ಪಡುಕೋಣೆ, ಅನಿಲ್ ಕಪೂರ್ ಮತ್ತು ಇತರರು ನಟಿಸಿದ್ದಾರೆ. 2024ರ ಜನವರಿ 25ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ ಎಂದು ವರದಿಯಾಗಿದೆ.

Exit mobile version