Site icon Vistara News

Shah Rukh Khan: ಶಾರುಖ್‌ ಕೈ ಮುಗಿದು ನನ್ನ ಬಳಿ ಕ್ಷಮೆ ಕೇಳಿದ್ರು; ರ‍್ಯಾಪರ್ ಕಿಂಗ್!

Shah Rukh Khan and Rapper King

ಬೆಂಗಳೂರು: ಶಾರುಖ್ ಖಾನ್ (Shah Rukh Khan) ವಿಶ್ವಾದ್ಯಂತ ತಮ್ಮದೇ ಆದ ಅಭಿಮಾನಿಗಳನ್ನು ಹೊಂದಿದ್ದಾರೆ. ರ‍್ಯಾಪರ್ ಕಿಂಗ್ (Rapper King), ಶೀಘ್ರದಲ್ಲೇ ಕಿಂಗ್ ಖಾನ್ ಅವರೊಂದಿಗೆ ಕೈ ಜೋಡಿಸಲಿದ್ದಾರೆ ಎಂದು ವರದಿಯಾಗಿದೆ. ಈ ವಿಚಾರವಾಗಿ ಮಾಧ್ಯವೊಂದಿಗೆ ಮಾತನಾಡುವಾದ ರ‍್ಯಾಪರ್ ಕಿಂಗ್ ಅವರು ಶಾರುಖ್‌ ಅವರ ಬಗ್ಗೆ ಹಲವು ವಿಚಾರಗಳನ್ನು ಹೇಳಿಕೊಂಡರು. ʻʻಅದರಲ್ಲಿಯೂ ಶಾರುಖ್‌ ಅವರು ಒಮ್ಮೆ ವಿಡಿಯೊ ಕಾಲ್‌ಗೆಂದು ಲೇಟ್‌ ಬಂದಿದ್ದರು. ತಾನು ಲೇಟ್‌ ಬಂದ ಕಾರಣ, ಕೈ ಮುಗಿದು ಕ್ಷಮೆಯಾಚಿಸಿದರು. ಶಾರುಖ್‌ ಅವರಿಗೆ ಕಲಾವಿದರೆಂದರೆ ಗೌರವ. ಕಲಾವಿದರೊಂದಿಗೆ ಹೇಗೆ ಕೆಲಸ ಮಾಡಬೇಕೆಂದು ಅರ್ಥಮಾಡಿಕೊಂಡಿದ್ದಾರೆ. ಏಕೆಂದರೆ ಅವರು ಅವರಿಗೆ ಬೇಕಾದುದನ್ನು ಮಾಡಲು ಸ್ವಾತಂತ್ರ್ಯ ನೀಡುತ್ತಾರೆʼʼಎಂದರು ರ‍್ಯಾಪರ್ ಕಿಂಗ್.

ಚಾಟ್‌ ಶೋ ಒಂದರಲ್ಲಿ ರ‍್ಯಾಪರ್ ಕಿಂಗ್‌ ಈ ಬಗ್ಗೆ ಮಾತನಾಡಿ ʻʻನಾನು ಶಾರುಖ್‌ ಅವರೊಂದಿಗೆ ವಿಡಿಯೊ ಕಾಲ್‌ನಲ್ಲಿ ಮಾತನಾಡಿದ್ದೇನೆ. ಇದಕ್ಕೂ ಮುಂಚೆ ಅವರ ಜತೆ ಮಾತನಾಡುವೆ ಎಂದು ಗೊತ್ತಾದಾಗ ಎರಡು ದಿನಗಳ ಕಾಲ ನನಗೆ ನಿದ್ರೆ ಕೂಡ ಬರಲಿಲ್ಲ” ಎಂದು ಹೇಳಿದರು. ಕಿಂಗ್ ತಮ್ಮ ಸಂಭಾಷಣೆಯನ್ನು ನೆನಪಿಸಿಕೊಂಡು ʻʻಶಾರುಖ್‌ ಕಾಲ್‌ಗೆ ಸ್ವಲ್ಪ ತಡವಾಗಿ ಬಂದರು. ತಡವಾಗಿ ಬಂದಿರುವುದು ನನಗೆ ಮುಖ್ಯವಾಗಿರಲಿಲ್ಲ. ಬಂದ ಬಳಿಕ ಶಾರುಖ್‌ ಅವರು ಮಾಡಿದ ಮೊದಲ ಕೆಲಸವೆಂದರೆ, ಕೈ ಮುಗಿದು ʻಕಿಂಗ್‌, ನಾನು ತಡವಾಗಿ ಬಂದಿದ್ದಕ್ಕೆ ಕ್ಷಮಿಸಿ’ ಎಂದು ಹೇಳಿದರು. ನಾನು ಸೋಫಾದಲ್ಲಿ ಕುಳಿತವನು ತಕ್ಷಣ ನೆಲದ ಮೇಲೆ ಕುಳಿತೆ. ನಾನು ನನ್ನ ಕೈಗಳನ್ನು ಮಡಚಿ, ‘ಸರ್, ದಯವಿಟ್ಟು ಹೀಗೆ ಮಾಡಬೇಡಿ ಎಂದು ಹೇಳಿದೆʼʼ ಎಂದರು.

ʻʻಶಾರುಖ್ ಅವರು ನನಗೆ ಬೇಕಾದುದನ್ನು ಮಾಡುವ ಸ್ವಾತಂತ್ರ್ಯ ನೀಡಿದರು. ಹಾಡನ್ನು ರಚಿಸುವ ಸ್ವಾತಂತ್ರ್ಯವನ್ನು ನನಗೆ ನೀಡಿದರು. ಶಾರುಖ್‌ ಇದನ್ನೂ ಹೇಳಿದ್ದರು. ‘ನಾನು ಸ್ಕ್ರಿಪ್ಟ್ ಬದಲಾಯಿಸುತ್ತೇನೆ, ನೀವು ಹಾಡನ್ನು ಮಾಡಿ. ಏನು ಮಾಡಬೇಕೆಂದು ನಾನು ನಿಮಗೆ ಹೇಳುವುದಿಲ್ಲ ಎಂದರು. ಕಲಾವಿದನಿಗೆ ಸ್ವಾತಂತ್ರ್ಯ ನೀಡುವುದು ಎಷ್ಟು ಮುಖ್ಯ ಎಂದು ಅವರಿಗೆ ತಿಳಿದಿದೆʼʼ ಎಂದು ತಿಳಿಸಿದರು.

ಇದನ್ನೂ ಓದಿ: Shah Rukh Khan: ʼಡಂಕಿʼಯಲ್ಲಿ ಕುಸ್ತಿ ಸೀನ್; ‘ಜವಾನ್’ ನೆನಪಿಸಿಕೊಂಡ ಫ್ಯಾನ್ಸ್‌

ಡಿಸೆಂಬರ್‌ 22ಕ್ಕೆ ಡಂಕಿ

ಬಾಲಿವುಡ್‌ ಬಾದ್‌ ಷಾ ಶಾರುಖ್‌ ಖಾನ್‌ (Shah Rukh Khan) ಅಭಿನಯದ ʼಡಂಕಿʼ (Dunki) ಸಿನಿಮಾದ ಕ್ರೇಜ್ ಜೋರಾಗಿದೆ. ‘ಪಠಾಣ್‌’ (Pathaan) ಮತ್ತು ‘ಜವಾನ್‌’ (Jawan) ಚಿತ್ರಗಳ ಮೂಲಕ ಈ ವರ್ಷ ಬಾಕ್ಸ್‌ ಆಫೀಸ್‌ನಲ್ಲಿ ಕಮಾಲ್‌ ಮಾಡಿದ್ದ ಶಾರುಖ್‌ ಹ್ಯಾಟ್ರಿಕ್‌ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಸದ್ಯ ‘ಡಂಕಿ’ ಟೀಸರ್ ಧೂಳೆಬ್ಬಿಸಿದೆ. ʼಡಂಕಿ ಡ್ರಾಪ್ 1ʼ ಬಳಿಕ ಬಂದ ʼಡಂಕಿ ಡ್ರಾಪ್ 2ʼ ಅಂದರೆ ʼಲುಟ್ ಪುಟ್ ಗಯಾʼ ಎಂಬ ಮೆಲೋಡಿ ಹಾಡು ಎಲ್ಲರ ಗಮನ ಸೆಳೆದಿದೆ.

ಡಂಕಿ’ ಬಾಲಿವುಡ್‌ನ ಯಶಸ್ವಿ ನಿರ್ದೇಶಕ ರಾಜ್‌ಕುಮಾರ್ ಹಿರಾನಿ ಬತ್ತಳಿಕೆಯಿಂದ ಬರುತ್ತಿರುವ ಮತ್ತೊಂದು ವಿಶಿಷ್ಠ ಸಿನಿಮಾ. ಭಾರತದ ಪಂಜಾಬ್‌ ಹಾಗೂ ಸುತ್ತಮುತ್ತಲಿನ ಪ್ರದೇಶದಿಂದ ಕಾನೂನು ಬಾಹಿರವಾಗಿ ಕೆನಡಾ ಹಾಗೂ ಅಮೆರಿಕಕ್ಕೆ ತೆರಳುವವರನ್ನು ಗಮನದಲ್ಲಿಟ್ಟುಕೊಂಡು ಸಿನಿಮಾ ಮಾಡಲಾಗಿದೆ. ವಿದೇಶ, ಪ್ರೀತಿ, ಸ್ನೇಹ, ತಾಯ್ನಾಡು ಇಂತಹದ್ದೇ ಎಳೆಯನ್ನಿಟ್ಟುಕೊಂಡು ರಾಜ್ ಕುಮಾರ್ ಹಿರಾನಿ, ಅಭಿಜಿತ್ ಜೋಶಿ ಮತ್ತು ಕನಿಕಾ ಧಿಲ್ಲೋನ್ ‘ಡಂಕಿ’ಗೆ ಕಥೆ ಹೆಣೆದಿದ್ದಾರೆ.

‘ಡಂಕಿ’ ಸಿನಿಮಾವನ್ನು ಜಿಯೋ ಸ್ಟುಡಿಯೋಸ್, ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್‌ ಹಾಗೂ ರಾಜ್‌ಕುಮಾರ್ ಹಿರಾನಿ ಫಿಲ್ಮ್ಸ್ ಬ್ಯಾನರ್‌ನಿಂದ ಗೌರಿ ಖಾನ್ ಹಾಗೂ ರಾಜ್‌ಕುಮಾರ್ ಹಿರಾನಿ ನಿರ್ಮಿಸುತ್ತಿದ್ದಾರೆ. ಡಿಸೆಂಬರ್ 22ಕ್ಕೆ ‘ಡಂಕಿ’ ಅದ್ಧೂರಿಯಾಗಿ ವಿಶ್ವಾದ್ಯಂತ ಬಿಡುಗಡೆಯಾಗಲಿದೆ.

Exit mobile version