Site icon Vistara News

Shah Rukh Khan: ʻಇಂಡಿಯನ್​ ಆಫ್​ ದಿ ಇಯರ್​ 2023 ಪ್ರಶಸ್ತಿʼ ಮುಡಿಗೇರಿಸಿಕೊಂಡ ಶಾರುಖ್‌!

Shah Rukh Khan bagged the CNN News18 Indian of the Year 2023 award

ಬೆಂಗಳೂರು: ಶಾರುಖ್ ಖಾನ್ ಅವರು ಈ ವರ್ಷ ಸಾಲು ಸಾಲು ಹಿಟ್‌ ಸಿನಿಮಾಗಳನ್ನು ನೀಡಿದ್ದಾರೆ. ವೃತ್ತಿಬದುಕಿನಲ್ಲಿ ಅವರು ಅನೇಕ ಏಳು-ಬೀಳುಗಳನ್ನು ಕಂಡಿದ್ದಾರೆ. ಇದೀಗ CNN News18 ‘ ಇಂಡಿಯನ್​ ಆಫ್​ ದಿ ಇಯರ್​ 2023’ (Indian of The Year 2023) ಪ್ರಶಸ್ತಿ ಸ್ವೀಕರಿಸಿದ್ದಾರೆ. ಬಳಿಕ ಅವರು ಸುಮಾರು 10 ನಿಮಿಷಗಳ ಕಾಲ ಸುದೀರ್ಘ ಭಾಷಣ ಮಾಡಿದರು. ತಮ್ಮ ಕಷ್ಟದ ಸಮಯದಲ್ಲಿ ತಮ್ಮ ಕುಟುಂಬದೊಂದಿಗೆ ಜತೆಗೆ ನಿಂತ ಅಭಿಮಾನಿಗಳಿಗೆ ಧನ್ಯವಾದ ಹೇಳಿದರು.

ಶಾರುಖ್‌ ಮಾತನಾಡಿ ʻʻ“ಕಳೆದ ನಾಲ್ಕು, ಐದು ವರ್ಷ ನನ್ನ ಕುಟುಂಬಕ್ಕೆ ಹಲವು ಕಷ್ಟಗಳು ಎದುರಾದವು. ನಿಮ್ಮಲ್ಲಿ ಕೆಲವರು ಕೋವಿಡ್‌ನಿಂದ ಕಷ್ಟವನ್ನು ಅನುಭವಿಸಿದ್ದೀರಿ ಎನ್ನುವುದು ತಿಳಿದಿದೆ. ನನ್ನ ಹಲವು ಸಿನಿಮಾಗಳು ಪ್ಲಾಪ್‌ ಆದವು. ಬಹಳಷ್ಟು ತಜ್ಞರು ಮತ್ತು ವಿಶ್ಲೇಷಕರು ನನ್ನ ಬಗ್ಗೆ ನೆಗೆಟಿವ್‌ ಆಗಿ ಬರೆದಿದ್ದು ಇದೆ. ಕೆಲವರು ನನ್ನ ಬದುಕು ಅಂತ್ಯವಾಯ್ತು ಎನ್ನಲು ಆರಂಭಿಸಿದರು. ನಾನು ಇದರ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ತದನಂತರ, ವೈಯಕ್ತಿಕವಾಗಿ ಹಲವು ಸಮಸ್ಯೆಗಳು ಬಂದವು. ನಾನು ಪಾಠ ಕಲಿತೆ. ಶಾಂತವಾಗಿರಬೇಕು, ಕಷ್ಟಪಟ್ಟು ಕೆಲಸ ಮಾಡಬೇಕು ಎಂಬುದನ್ನು ಕಲಿತೆ. ಎಲ್ಲವೂ ಸರಿಯಿದೆ ಎನ್ನುವಾಗ ಇನ್ಯಾವುದೋ ಸಮಸ್ಯೆ ಎದುರಾಗುತ್ತಿತ್ತು. ಆಗ ಭರವಸೆ ತುಂಬ ಮುಖ್ಯʼʼಎಂದರು.

ʻʻನನ್ನ ಅಭಿಮಾನಿಗಳಿಗೆ, ಪ್ರೇಕ್ಷರಿಗೆ ಧನ್ಯವಾದ. ಇದುವೆರೆಗೆ ನನ್ನ ಸಿನಿಮಾಗಳನ್ನು ನೋಡಿ ಹಾರೈಸುತ್ತಿದ್ದೀರಿ. ಕೆಲವರು ನನ್ನ ಸಿನಿಮಾಗಳನ್ನು ಇಷ್ಟಪಡದಿರಬಹುದು ಆದರೆ ನಾನು ಎಲ್ಲರಿಗೂ ಧನ್ಯವಾದ ಹೇಳಲು ಬಯಸುತ್ತೇನೆ. ನನ್ನ ಕುಟುಂಬ, ನನ್ನ ಮಕ್ಕಳು, ನನ್ನ ಪ್ರೀತಿಪಾತ್ರರಿಗೆ ಖುಷಿ ಕೊಟ್ಟಿದ್ದಕ್ಕಾಗಿ ಧನ್ಯವಾದಗಳು. ಒಂದಷ್ಟು ವರ್ಷಗಳ ಹಿಂದೆ ಪ್ರಶಸ್ತಿ ಪಡೆದಾಗ ಅದನ್ನು ಮನೆಗೆ ತೆಗೆದುಕೊಂಡು ಹೋಗಿ ಮಕ್ಕಳಿಗೆ ನೀಡುತ್ತಿದ್ದೆ. ಕೆಲವು ವರ್ಷಗಳಿಂದ ನನ್ನ ಕುಟುಂಬಕ್ಕೆ ಈ ಪ್ರೋತ್ಸಾಹದ ಅಗತ್ಯವಿತ್ತು. ಈ ಪ್ರಶಸ್ತಿ ಪತ್ನಿ ಗೌರಿ ಖಾನ್, ಮಗಳು ಸುಹಾನಾ ಖಾನ್ ಮತ್ತು ಪುತ್ರರಾದ ಆರ್ಯನ್ ಮತ್ತು ಅಬ್‌ರಾಮ್ ಖಾನ್‌ಗೆ ಅರ್ಪಿಸುತ್ತೇನೆ’ʼʼಎಂದು ಮಾತನಾಡಿದ್ದಾರೆ.

ಇದನ್ನೂ ಓದಿ: Shah Rukh Khan: ಡಂಕಿ ಡ್ರಾಪ್-5′ ರಿಲೀಸ್; `ಓ ಮಾಹಿ’ ಎಂದು ಹೆಜ್ಜೆ ಹಾಕಿದ ಕಿಂಗ್ ಖಾನ್!

2023ರಲ್ಲಿ ಶಾರುಖ್‌ ಅವರ ʻಪಠಾಣ್‌ʼ ಹಾಗೂ ʻಜವಾನ್‌ʼ ಬ್ಲಾಕಬಸ್ಟರ್‌ ಹಿಟ್‌ ಕಂಡಿತು. ʻಡಂಕಿʼ 2023ರ ಶಾರುಖ್‌ ಕೊನೇಯ ಸಿನಿಮಾ ಆಗಿದೆ. ರಾಜ್‌ಕುಮಾರ್ ಹಿರಾನಿ ನಿರ್ದೇಶನದ ʻಡಂಕಿʼ ಮಿಶ್ರ ಪ್ರತಿಕ್ರಿಯೆ ಪಡೆಯಿತು. ಶಾರುಖ್‌ ಇನ್ನೂ ಹೊಸ ಸಿನಿಮಾ ಸಿನಿಮಾ ಬಗ್ಗೆ ಯಾವುದೇ ಅಪ್‌ಡೇಟ್‌ ಹಂಚಿಕೊಂಡಿಲ್ಲ.

Exit mobile version