ಬೆಂಗಳೂರು: 1998ರಲ್ಲಿ ʻದಿಲ್ ಸೆʼ (Dil Se Movie) ಸಿನಿಮಾಗಾಗಿ ಶಾರುಖ್ ಖಾನ್ ಮತ್ತು ಮಣಿರತ್ನಂ ಒಟ್ಟಿಗೆ ಕೆಲಸ ಮಾಡಿದ್ದರು. ಇದೀಗ ಮತ್ತೆ ಇವರಿಬ್ಬರು ಒಟ್ಟಿಗೆ ಸಿನಿಮಾ ಮಾಡಬೇಕು ಎಂಬುದು ಫ್ಯಾನ್ಸ್ ಆಸೆ. ಬುಧವಾರ (ಜ.10) CNN-News18 (Indian Of The Year 2023) ಇವೆಂಟ್ನಲ್ಲಿ ಈ ಬಗ್ಗೆ ಶಾರುಖ್ ಮುಕ್ತವಾಗಿ ಮಾತನಾಡಿದ್ದಾರೆ. ಜತೆಗೆ ಶಾರುಖ್ ಖಾನ್ ಕೂಡ ಮಣಿರತ್ನಂ ಜತೆ ಕೆಲಸ ಮಾಡಲು ರೆಡಿ ಇರುವುದಾಗಿ ಹೇಳಿದ್ದಾರೆ. ಆದರೆ ಮಣಿರತ್ನಂ ಒಂದು ಷರತ್ತನ್ನು ಇಟ್ಟಿದ್ದಾರೆ. ಇದನ್ನು ಪೂರೈಸಲು ಶಾರುಖ್ ಕೂಡ ರೆಡಿ ಆಗಿದ್ದಾರೆ.
ಶಾರುಖ್ ಖಾನ್ ಅವರು ಮಣಿರತ್ನಂ ಅವರಿಗೆ ಹೀಗೆ ಹೇಳಿದರು: “ನಾನು ನಿಮ್ಮಲ್ಲಿ ವಿನಂತಿಸುತ್ತಿದ್ದೇನೆ, ಬೇಡಿಕೊಳ್ಳುತ್ತಿದ್ದೇನೆ. ನನ್ನೊಂದಿಗೆ ಚಿತ್ರ ಮಾಡುವಂತೆ ನಾನು ಪ್ರತಿ ಬಾರಿಯೂ ಹೇಳುತ್ತಿದ್ದೇನೆ. ದಯವಿಟ್ಟು ನನಗಾಗಿ ಒಂದು ಸಿನಿಮಾ ಮಾಡಿ. ನೀವು ಹೇಳಿದರೆ ವಿಮಾನದ ಮೇಲೆ ನಿಂತು ‘ಚಯ್ಯ ಚಯ್ಯ’ ಎಂದು ಡ್ಯಾನ್ಸ್ ಮಾಡುತ್ತೇನೆ! ಆಗ ಅಲ್ಲಿದ್ದವರು ಶಾರುಖ್ ಜತೆ ಸಿನಿಮಾ ಯಾವಾಗ ಎಂದು ಹೇಳಿ ಎಂದು ಮಣಿರತ್ನಂ ಅವರಿಗೆ ಹೇಳಿದ್ದಾರೆ. ‘ನಾನು ವಿಮಾನ ಖರೀದಿ ಮಾಡಿದಾಗ’ ಎಂದರು ಮಣಿರತ್ನಂ. ಇದಕ್ಕೆ ಶಾರುಖ್ ‘‘ನಾನು ನಿಮಗಾಗಿ ವಿಮಾನ ಖರೀದಿಸಲೇ’ ಎಂದು ಕೇಳಿದರು. ಇದಕ್ಕೆ ಮಣಿರತ್ನಂ ಒಪ್ಪಿಗೆ ನೀಡಿ. ‘ನೀವು ನನಗಾಗಿ ವಿಮಾನ ಖರೀದಿಸಿದರೆ ನಿಮ್ಮ ಸಿನಿಮಾ ಮಾಡುತ್ತೇನೆ’ ಎಂದರು. ‘ನನ್ನ ಸಿನಿಮಾಗಳು ಯಶಸ್ಸು ಕಾಣುತ್ತಿವೆ. ಈಗ ವಿಮಾನ ದೊಡ್ಡ ವಿಚಾರ ಅಲ್ಲʼ ಎಂದೂ ಶಾರುಖ್ ಹೇಳಿದರು. ಅಲ್ಲಿದ್ದವರು ಈ ತಮಾಷೆಯೆ ಸಂಭಾಷಣೆಗೆ ನಕ್ಕು ಪ್ರತಿಕ್ರಿಯಿಸಿದರು.
ಇದನ್ನೂ ಓದಿ: Shah Rukh Khan: ಡಂಕಿ ಡ್ರಾಪ್-5′ ರಿಲೀಸ್; `ಓ ಮಾಹಿ’ ಎಂದು ಹೆಜ್ಜೆ ಹಾಕಿದ ಕಿಂಗ್ ಖಾನ್!
ವೈರಲ್ ವಿಡಿಯೊ
Shah Rukh Khan expressed his eagerness to work with Mani Ratnam, even going as far as to humorously mention dancing on top of a plane for a film collaboration. Additionally, he concluded by singing the song "Jiya Jale." #SRK #ManiRatnam #ARRahman
— WGenZInfo (@WGenZInfo1) January 11, 2024
pic.twitter.com/RjokY8L0Ka
ಇವೆಂಟ್ನಲ್ಲಿ ಅವರ ಸಂವಾದದ ಕ್ಲಿಪ್ ಅನ್ನು ಹಂಚಿಕೊಂಡ ಅಭಿಮಾನಿಯೊಬ್ಬರು ಟ್ವೀಟ್ ಮಾಡಿದ್ದಾರೆ. “ದಿಲ್ ಸೆ ನಂತರ ಮತ್ತೆ ಮಣಿರತ್ನಂ ಹಾಗೂ ಶಾರುಖ್ ಒಂದಾಗಿ ಸಿನಿಮಾ ಮಾಡಬೇಕುʼʼ ಎಂದು ಬರೆದುಕೊಂಡಿದ್ದಾರೆ.
ಮಣಿರತ್ನಂ ನಿರ್ದೇಶಿಸಿದ, ʻದಿಲ್ ಸೆʼ ಸಿನಿಮಾ ಸಖತ್ ಹಿಟ್ ಆಗಿತ್ತು. ಶಾರುಖ್ ಖಾನ್ ಅಭಿನಯದ ʻದಿಲ್ ಸೆʼ ಸಿನಿಮಾದ ಹಾಡುಗಳು ಅಭಿಮಾನಿಗಳಲ್ಲಿ ಕ್ರೇಜ್ ಹುಟ್ಟು ಹಾಕಿತ್ತು. ಅದರಲ್ಲಿಯೂ ʻಚಯ್ಯ ಚಯ್ಯʼ ಹಾಡು ಸೂಪರ್ ಹಿಟ್ ಆಗಿತ್ತು. ಇದನ್ನು ಎ ಆರ್ ರೆಹಮಾನ್ ಸಂಯೋಜಿಸಿದ್ದರು.