ಬೆಂಗಳೂರು: ಶಾರಖ್‌ಖಾನ್ (Shah Rukh Khan) ಅವರಿಗೆ ವಿಶ್ವಾದ್ಯಂತ ಅಭಿಮಾನಿಗಳ ಬಳಗವಿದೆ. ಆಗಾಗ ಫ್ಯಾನ್ಸ್ ಹೃದಯಗಳನ್ನು ಗೆಲ್ಲುತ್ತಲೇ ಇರುತ್ತಾರೆ. 60 ವರ್ಷದ ಕ್ಯಾನ್ಸರ್ ರೋಗಿಯೊಬ್ಬರು ತಮ್ಮ ಜೀವನದಲ್ಲಿ ಒಮ್ಮೆಯಾದರೂ ಶಾರುಖ್ ಅವರನ್ನು ಭೇಟಿಯಾಗಬೇಕೆಂದು ಬಯಸಿದ್ದರು. ಆದರೀಗ ಶಾರುಖ್ ಅಭಿಮಾನಿಯ ಕನಸನ್ನು ನನಸು ಮಾಡಿದ್ದಾರೆ. ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅಭಿಮಾನಿಗೆ ವಿಡಿಯೊ ಕಾಲ್ ಮಾಡಿ ಮಾತನಾಡಿದ್ದಾರೆ. ಇದೀಗ ಶಾರುಖ್ ಬಗ್ಗೆ ಅವರ ಫ್ಯಾನ್ಸ್ ಮೆಚ್ಚುಗೆ ಸೂಚಿಸಿದ್ದಾರೆ.
ಅಭಿಮಾನಿಗೆ ವಿಡಿಯೊ ಕಾಲ್ ಮಾಡಿದ ಶಾರುಖ್
ಶಿವಾನಿ ಚಕ್ರವರ್ತಿ ಎಂಬ 60 ವರ್ಷದ ಮಹಿಳೆಯೊಬ್ಬರು ವರ್ಷಗಳಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಶಿವಾನಿ ತನ್ನ ಜೀವನದುದ್ದಕ್ಕೂ ಶಾರುಖ್ ಖಾನ್ ಅವರ ದೊಡ್ಡ ಅಭಿಮಾನಿಯಾಗಿದ್ದರು. ಒಮ್ಮೆಯಾದರೂ ಸೂಪರ್‌ಸ್ಟಾರ್‌ನನ್ನು ಭೇಟಿಯಾಗಬೇಕೆಂಬುದು ಆಕೆಯ ಕನಸಾಗಿತ್ತು. ಪ್ರಿಯಾ ಚಕ್ರವರ್ತಿ ಎಂಬವವರು ವಿಡಿಯೊ ಒಂದನ್ನು ಪೋಸ್ಟ್ ಮಾಡಿದ್ದರು. ಈ ವಿಡಿಯೋದಲ್ಲಿ ಅವರು ಶಾರುಖ್ ಖಾನ್ ಬಳಿ ವಿಶೇಷ ಮನವಿ ಮಾಡಿದ್ದರು. ‘ನನ್ನ ತಾಯಿಗೆ ಕ್ಯಾನ್ಸರ್. ಅವರು ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ. ಅವರಿಗೆ ಈಗ 57 ವರ್ಷ ವಯಸ್ಸು. ಶಾರುಖ್ ಖಾನ್ಅವರನ್ನು ಭೇಟಿ ಮಾಡಬೇಕು ಎಂಬುದು ಅವರ ಕೊನೆಯ ಆಸೆ. ಅವರಿಗೆ ಎಷ್ಟು ದಿನ ಉಳಿದಿದೆಯೋ ಗೊತ್ತಿಲ್ಲ’ ಎಂದು ಪ್ರಿಯಾ ಟ್ವೀಟ್ ಮಾಡಿದ್ದರು.
ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ಶಾರುಖ್ ವಿಡಿಯೊ ಕಾಲ್ ಮಾಡಿ ಸುಮಾರು 40 ನಿಮಿಷಗಳ ಕಾಲ ಮಾತನಾಡಿದ್ದಾರೆ. ಕಾಯಿಲೆಯ ವಿರುದ್ಧ ಹೋರಾಡಲು ಆರ್ಥಿಕವಾಗಿ ಸಹಾಯ ಮಾಡುವುದಾಗಿ ಭರವಸೆಯನ್ನೂ ನೀಡಿದ್ದಾರೆ. ಈ ಮೂಲಕ ಅವರ ಅಭಿಮಾನಿಯ ಕೊನೆಯ ಆಸೆಯನ್ನು ಈಡೇರಿಸಿದ್ದಾರೆ.
ಇದನ್ನೂ ಓದಿ: Shah Rukh Khan: ಮಗನ ಬಿಡುಗಡೆಗೆ ಸಮೀರ್ ವಾಂಖೆಡೆ ಜತೆ ಶಾರುಖ್ ಖಾನ್ ಮಾಡಿದ ಚಾಟ್ ಏನು? ಇಲ್ಲಿದೆ ವರದಿ
ಶಾರುಖ್ ಅವರ ಮಗ ಆರ್ಯನ್ ಖಾನ್ ಹೊಸ ವೆಬ್ ಸೀರಿಸ್ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಸದ್ಯ ‘ಸ್ಟಾರ್ಡಂ’ ಎಂದು ಶೀರ್ಷಿಕೆ ಇಡಲಾಗಿದೆ. ‘ಸ್ಟಾರ್ಡಂ’ನಲ್ಲಿ ರಣವೀರ್ ಸಿಂಗ್ ಹಾಗೂ ಶಾರುಖ್ ಖಾನ್ ಅತಿಥಿ ಪಾತ್ರ ಮಾಡಲಿದ್ದಾರೆ ಎಂದು ವರದಿಯಾಗಿದೆ.
ಪಠಾಣ್ ಸಿನಿಮಾ ಸಕ್ಸೆಸ್ ನಂತರ ಶಾರುಖ್ ಖಾನ್ ಜವಾನ್ ಸಿನಿಮಾಗೆ ಸಜ್ಜಾಗುತ್ತಿದ್ದಾರೆ. ರಾಜ್‌ಕುಮಾರ್ ಹಿರಾನಿ ಅವರ ಡಂಕಿ ಚಿತ್ರೀಕರಣದಲ್ಲಿಯೂ ತೊಡಗಿಸಿಕೊಂಡಿದ್ದಾರೆ. ತಾಪ್ಸಿ ಪನ್ನು ಅವರೊಂದಿಗೆ ತೆರೆ ಹಂಚಿಕೊಳ್ಳಲಿದ್ದಾರೆ.