ಬೆಂಗಳೂರು: ಬಾಲಿವುಡ್ ನಟ ಶಾರುಖ್ ಖಾನ್ (Shah Rukh Khan) ಜೂಹಿ ಚಾವ್ಲಾ ಅವರ ಜತೆ ರಾಜು ಬನ್ ಗಯಾ ಜೆಂಟಲ್ಮ್ಯಾನ್ (Raju Ban Gaya Gentleman) ಚಿತ್ರೀಕರಣದಲ್ಲಿದ್ದಾಗ ಗೌರಿ ಖಾನ್ ಅವರನ್ನು ಆಗಷ್ಟೇ ಮದುವೆಯಾಗಿದ್ದರು. ಚಿತ್ರದ ಹಾಡಿನ ಚಿತ್ರೀಕರಣಕ್ಕಾಗಿ ಡಾರ್ಜಿಲಿಂಗ್ಗೆ ಹೋಗಿದ್ದರು. ಗೌರಿ ಕೂಡ ಶಾರುಖ್ ಖಾನ್ ಜತೆಗಿದ್ದರು. ಡಾರ್ಜಿಲಿಂಗ್ ಜೋಡಿಯ ಹನಿಮೂನ್ ಸ್ಪಾಟ್ ಆಗಿತ್ತು. ಇತ್ತೀಚೆಗೆ, ನಟ ವಿವೇಕ್ ವಾಸವಾನಿ ಅವರು ಡಾರ್ಜಿಲಿಂಗ್ನ ಶಾರುಖ್ ಖಾನ್ ಮತ್ತು ಗೌರಿ ಅವರ ಹನಿಮೂನ್ನ ಫೋಟೊವನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ.
ವಿವೇಕ್ ಟ್ವಿಟ್ಟರ್ನಲ್ಲಿ “ರಾಜು ಬನ್ ಗಯಾ ಜೆಂಟಲ್ಮ್ಯಾನ್ ಸಿನಿಮಾದ ಮೊದಲ ಹಾಡನ್ನು ಚಿತ್ರೀಕರಿಸುವಾಗ ಡಾರ್ಜಿಲಿಂಗ್ಗೆ ಹೋಗಿದ್ದೇವು. ಶಾರುಖ್ ಆಗಷ್ಟೇ ಮದುವೆಯಾಗಿದ್ದರು. ನೇರವಾಗಿ ಡಾರ್ಜಿಲಿಂಗ್ಗೆ ಚಿತ್ರೀಕರಣಕ್ಕೆ ಹೋದೆವು. ಅದು ಕೂಡ ವಧುವಿನ ಜತೆʼʼಎಂದು ಬರೆದುಕೊಂಡಿದ್ದಾರೆ.
ನೆಟ್ಟಿಗರು ಈ ಪೋಸ್ಟ್ಗೆ ಕಾಮೆಂಟ್ ವಿಭಾಗದಲ್ಲಿ ವಿವೇಕ್ ಅವರ ಲವ್ಚಂದ್ ಕುಕ್ರೇಜಾ ಪಾತ್ರವನ್ನು ನೆನಪಿಸಿಕೊಂಡರು. ಡಾರ್ಜಿಲಿಂಗ್ನಲ್ಲಿ ಚಿತ್ರೀಕರಿಸಲಾದ ಚಿತ್ರದ ‘ದಿಲ್ ಹೈ ಮೇರಾ ದೀವಾನಾ’ ಹಾಡನ್ನು ಸಹ ನೆನಪಿಸಿಕೊಂಡಿದ್ದಾರೆ. ಶಾರುಖ್ ಅವರ ಪ್ರಣಯದ ಕಲ್ಪನೆಯನ್ನು ಶ್ಲಾಘಿಸಿದ್ದಾರೆ. ಅಭಿಮಾನಿಯೊಬ್ಬರು ಹೀಗೆ ಬರೆದಿದ್ದಾರೆ, “ಶಾರುಖ್ ಖಾನ್ ಪ್ರಣಯದ ರಾಜ …ರೀಲ್ಸ್ನಲ್ಲಿ ಹಾಗೂ ನಿಜಜೀವನದಲ್ಲಿ. ಅವರನ್ನು ಹೊರತುಪಡಿಸಿ ಯಾರೂ ಉತ್ತಮವಾಗಿ ಮಾಡುವುದಿಲ್ಲ” ಎಂದು ಬರೆದಿದ್ದಾರೆ. ಇನ್ನೊಬ್ಬರು ಬರೆದಿದ್ದಾರೆ, “ವಾವ್.. ಸುಂದರ ಚಿತ್ರ … ಎಂತಹ ಕಥೆ …. ಗೌರಿ ಮೇಡಂ ಆ ಹಾಡಿನಲ್ಲಿ ಕಣ್ಣು ಮಿಟುಕಿಸಿರಬೇಕು…”ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: Shah Rukh Khan: ಮನೆಯ ಗ್ಯಾಲರಿಗೆ ಬಂದು ಅಭಿಮಾನಿಗಳಿಗೆ ಈದ್ ಶುಭಾಶಯ ತಿಳಿಸಿದ ಶಾರುಖ್
ನಟ ವಿವೇಕ್ ವಾಸವಾನಿ ಟ್ವೀಟ್
ಈ ಹಿಂದೆ, ಚಿತ್ರದ ಬರಹಗಾರ ಮನೋಜ್ ಲಾಲ್ವಾನಿ ಬಾಲಿವುಡ್ ಹಂಗಾಮಾಗೆ ನೀಡಿದ ಸಂದರ್ಶನವೊಂದರಲ್ಲಿ ಈ ಬಗ್ಗೆ ಹೇಳಿಕೊಂಡಿದ್ದರು. ಶಾರುಖ್ ಖಾನ್ ದೆಹಲಿಯಲ್ಲಿ ವಿವಾಹವಾದರು. ನಂತರ ಡಾರ್ಜಿಲಿಂಗ್ನಲ್ಲಿ ಅವರ ಹನಿಮೂನ್. ಶಾರುಖ್ ಮತ್ತು ಗೌರಿ ಅವರ ಪರಿಚಯದ ದೃಶ್ಯವನ್ನು ಚಿತ್ರದಲ್ಲಿ ಶೂಟ್ ಮಾಡಬೇಕಾಗಿದ್ದರಿಂದ ನಾವು ಸಹ ಅವರ ಜತೆಗಿದ್ದೆವು. ಇಡೀ ಸಿಬ್ಬಂದಿ ರೈಲಿನಲ್ಲಿ ಸೆಕೆಂಡ್ ಕ್ಲಾಸ್ನಲ್ಲಿ ಪ್ರಯಾಣಿಸಿದ್ದು ನನಗೆ ಇನ್ನೂ ನೆನಪಿದೆ. ಇದು ಕಷ್ಟಕರವಾದ, 36 ಗಂಟೆಗಳ ಪ್ರಯಾಣವಾಗಿತ್ತುʼʼಎಂದಿದ್ದರು.
‘ಡಂಕಿ’ ಮಾತ್ರವಲ್ಲದೇ ‘ಜವಾನ್’ ಸಿನಿಮಾದಲ್ಲೂ ಶಾರುಖ್ ಖಾನ್ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಅಟ್ಲಿ ಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ. ಶಾರುಖ್ ಖಾನ್ಗೆ ಜೋಡಿಯಾಗಿ ನಯನತಾರಾ ಅಭಿನಯಿಸಿದ್ದಾರೆ. ಜೂನ್ 2ರಂದು ಬಿಡುಗಡೆ ಆಗಲಿರುವ ಈ ಸಿನಿಮಾದಲ್ಲಿ ವಿಜಯ್ ಸೇತುಪತಿ ಕೂಡ ಪ್ರಮುಖ ಪಾತ್ರ ಮಾಡುತ್ತಿದ್ದಾರೆ.