Site icon Vistara News

Shah Rukh Khan: ಮನೆಯ ಗ್ಯಾಲರಿಗೆ ಬಂದು ಅಭಿಮಾನಿಗಳಿಗೆ ಈದ್‌ ಶುಭಾಶಯ ತಿಳಿಸಿದ ಶಾರುಖ್‌

Shah Rukh Khan greets fans from Mannat’s balcony on Eid

ಬೆಂಗಳೂರು: ಈದ್ ಹಬ್ಬದಂದು ತಮ್ಮ ಅಭಿಮಾನಿಗಳಿಗೆ ಶುಭಾಶಯ ಕೋರುವ ಸಂಪ್ರದಾಯವನ್ನು ಶಾರುಖ್‌ ಹಲವು ವರ್ಷಗಳಿಂದ ಅನುಸರಿಸಿಕೊಂಡು ಬಂದಿದ್ದಾರೆ. ಶಾರುಖ್ ಖಾನ್ (Shah Rukh Khan) ಏಪ್ರಿಲ್‌ 22ರಂದು ಮಧ್ಯಾಹ್ನ ತಮ್ಮ ಮನೆ ಮನ್ನತ್‌ನ ಬಾಲ್ಕನಿಯಲ್ಲಿ ಕಾಣಿಸಿಕೊಂಡರು. ಮನ್ನತ್‌ನ ಹೊರಗೆ ನೆರೆದಿದ್ದ ಜನಸಮೂಹವನ್ನು ಕಣ್ತುಂಬಿಕೊಂಡು ಸ್ವಾಗತಿಸಿದರು.

ಬಿಳಿ ಟೀ ಶರ್ಟ್ ಮತ್ತು ಕಪ್ಪು ಡೆನಿಮ್‌ಗಳನ್ನು ಧರಿಸಿದ್ದರು ಶಾರುಖ್. ತಮ್ಮ ಅಭಿಮಾನಿಗಳತ್ತ ಕೈ ಬೀಸಿ, ಫ್ಲೈ ಕಿಸ್‌ ಮಾಡಿದರು. ಹಿಂದಿನ ವರ್ಷದಂತೆ ಈ ಬಾರಿಯೂ, ಅವರ ಮಗ ಅಬ್‌ರಾಮ್ ಬಿಳಿ ಕುರ್ತಾ-ಪೈಜಾಮಾವನ್ನು ಧರಿಸಿದ್ದರು.

ಶಾರುಖ್ ಅವರ ಮನೆಯ ವಿಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದಂತೆ, ಅಭಿಮಾನಿಗಳು ಪ್ರೀತಿಯಿಂದ ನಟನಿಗೆ ಶುಭಾಶಯಗಳನ್ನು ಕೋರಿದರು. ಶಾರುಖ್‌ ಅವರ ಫ್ಯಾನ್ಸ್‌ ಖಾತೆಯು ವಿಡಿಯೊವನ್ನು ಹಂಚಿಕೊಂಡಿದೆ. ಕಾಮೆಂಟ್‌ನಲ್ಲಿ, “ಈದ್ ಮುಬಾರಕ್ ಎಸ್‌ಆರ್‌ಕೆ ಸರ್” ಎಂದು ನೆಟ್ಟಿಗರು ಬರೆದಿದ್ದಾರೆ. ಅವರಲ್ಲಿ ಒಬ್ಬರು ನಟನಿಗೆ ʻಬೀಳಬೇಡಿ, ಜಾಗೃತೆಯಾಗಿ ನಿಲ್ಲಿರಿ” ಎಂದು ಬರೆದಿದ್ದಾರೆ. ಇನ್ನೊಬ್ಬರು “ಪ್ರತಿ ಬಾರಿಯೂ ನಟ ಬಂದು ಹಾರೈಸುತ್ತಾರೆ. ಅವರು ತುಂಬ ವಿನಮ್ರರು. ದೇವರು ಆಶೀರ್ವದಿಸುತ್ತಾನೆ” ಎಂದು ಬರೆದಿದ್ದಾರೆ.

ಇದನ್ನೂ ಓದಿ: Shah Rukh Khan:  ಮತ್ತೆ ತೆರೆ ಮೇಲೆ ಒಂದಾಗಲಿದ್ದಾರಾ ಶಾರುಖ್‌, ಸಲ್ಮಾನ್? ಸಿದ್ಧಾರ್ಥ್ ಆನಂದ್ ಆ್ಯಕ್ಷನ್‌ ಕಟ್‌?

ಅಭಿಮಾನಿಗಳಿಗೆ ಶುಭಾಶಯ ತಿಳಿಸಿದ ಶಾರುಖ್‌

ಈದ್‌ಗೆ ಮಾತ್ರವಲ್ಲ, ಶಾರುಖ್ ಖಾನ್ ಅವರ ಹುಟ್ಟುಹಬ್ಬದಂದು ಮನ್ನತ್‌ನ ಹೊರಗೆ ಸಾವಿರಾರು ಅಭಿಮಾನಿಗಳು ವಿಶೇಷ ದಿನದಂದು ಅವರಿಗೆ ಶುಭ ಹಾರೈಸುತ್ತಾರೆ.

ಶಾರುಖ್‌ ಅವರ ಪಠಾಣ್‌ ಸಿನಿಮಾದಲ್ಲಿ ಸಲ್ಮಾನ್‌ ಖಾನ್‌ ಅವರ ಪ್ರವೇಶ ಅಭಿಮಾನಿಗಳಿಂದ ವ್ಯಾಪಕವಾಗಿ ಮೆಚ್ಚುಗೆ ಪಡೆದಿದೆ. ಇದಾದ ಬಳಿಕ ಯಶ್ ರಾಜ್ ಫಿಲ್ಮ್ಸ್‌ನ ಸ್ಪೈ ಯೂನಿವರ್ಸ್ ಫ್ರ್ಯಾಂಚೈಸ್‌ನಲ್ಲಿ ಮುಂಬರುವ ಕಂತು ʻಟೈಗರ್ ವರ್ಸಸ್ ಪಠಾಣ್‌ʼ ಅನ್ನು ನಿರ್ದೇಶಿಸಲು ವೈಆರ್‌ಎಫ್ ಸಿದ್ಧಾರ್ಥ್ ಆನಂದ್ ಅವರನ್ನು ನೇಮಿಸಿಕೊಂಡಿದೆ.

ಚಿತ್ರದಲ್ಲಿ ಶಾರುಖ್ ಖಾನ್ ಏಜೆಂಟ್ ಪಠಾಣ್ ಪಾತ್ರವನ್ನು ಪುನರಾವರ್ತಿಸುತ್ತಿದ್ದಾರೆ. ಆದರೆ ಸಲ್ಮಾನ್ ಖಾನ್ ಟೈಗರ್ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಸೂಪರ್‌ಸ್ಟಾರ್‌ಗಳಾದ ಶಾರುಖ್ ಖಾನ್ ಮತ್ತು ಸಲ್ಮಾನ್ ಖಾನ್ 1995ರ ಫ್ಯಾಂಟಸಿ ಆ್ಯಕ್ಷನ್ ಚಿತ್ರ ಕರಣ್ ಅರ್ಜುನ್‌ನಲ್ಲಿ ಒಟ್ಟಿಗೆ ನಟಿಸಿದ್ದರು. ಬಳಿಕ ಬೇರೆ ಯಾವ ಸಿನಿಮಾದಲ್ಲಿಯೂ ನಟಿಸಿಲ್ಲ. ಶಾರುಖ್ ಖಾನ್ ನಟಿಸಿದ ಮತ್ತು ಆನಂದ್ ನಿರ್ದೇಶಿಸಿದ ಬ್ಲಾಕ್‌ಬಸ್ಟರ್ ಪಠಾಣ್‌ನಲ್ಲಿ ಸಲ್ಮಾನ್ ಖಾನ್ ಅತಿಥಿ ಪಾತ್ರವನ್ನು ನಿಭಾಯಿಸಿದ್ದರು ಇದು YRF ಸ್ಪೈ ಯೂನಿವರ್ಸ್ ಫ್ರ್ಯಾಂಚೈಸ್‌ನ ಪಾತ್ರಗಳನ್ನು ಒಟ್ಟಿಗೆ ತಂದ ಮೊದಲ ಚಿತ್ರವಾಗಿದೆ. ಟೈಗರ್ 3 ಇದೇ ನವೆಂಬರ್‌ನಲ್ಲಿ ದೀಪಾವಳಿಯಂದು ತೆರೆಗೆ ಬರುವ ನಿರೀಕ್ಷೆಯಿದೆ.

Exit mobile version