ಬೆಂಗಳೂರು: ಶಾರುಖ್ ಖಾನ್ ಜನವರಿ 16ರಂದು ಮುಂಬೈನಲ್ಲಿ ತಮ್ಮ ಮ್ಯಾನೇಜರ್ ಪೂಜಾ ದದ್ಲಾನಿ ಅವರೊಂದಿಗೆ ಆಸ್ಪತ್ರೆಯಲ್ಲಿ ಕಾಣಿಸಿಕೊಂಡಿದ್ದು ಈಗ ಸುದ್ದಿಯಾಗಿದೆ. ಮುಂಬೈಯ ಕ್ಲಿನಿಕ್ ಒಂದಕ್ಕೆ ಶಾರುಖ್ ತೆರಳಿದ್ದರು. ಯಾರಿಗೂ ತಿಳಿಯಬಾರದು ಎನ್ನುವ ಕಾರಣಕ್ಕೆ ಹೂಡಿಯನ್ನು ಮುಖಕ್ಕೆ ಮುಚ್ಚಿಕೊಂಡಿದ್ದರು. ʻವೈ ಪ್ಲಸ್ ಕೆಟಗರಿʼ ರಕ್ಷಣೆ ಇದ್ದಿದ್ದರಿಂದ ಯಾರಿಗೂ ಅವರ ಬಳಿ ಸುಳಿಯಲು ಆಗಲಿಲ್ಲ. ಇದರಿಂದ ಅವರ ಅಭಿಮಾನಿಗಳು ಬೇಸರಗೊಂಡರು.
‘ಡಂಕಿ’ ಚಿತ್ರದಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡ ಶಾರುಖ್ ಖಾನ್ ಅವರು ಮುಂಬೈನಲ್ಲಿ ಕಾಣಿಸಿಕೊಂಡಿದ್ದರಿಂದ ಫ್ಯಾನ್ಸ್ ಶಾರುಖ್ ಅವರನ್ನು ಭೇಟಿ ಮಾಡಲು ತುದಿಗಾಲಲ್ಲಿ ಕಾದಿದ್ದರು. ಶಾರುಖ್ ಜೊತೆಯಲ್ಲಿ ಅವರ ಮ್ಯಾನೇಜರ್ ಕೂಡ ಇದ್ದರು. ಹೂಡಿಯನ್ನು ಮುಖಕ್ಕೆ ಮುಚ್ಚಿಕೊಂಡಿದ್ದರು. ಆದರೆ ಶಾರುಖ್ ಮುಖವನ್ನು ಏಕೆ ಮುಚ್ಚಿಕೊಂಡಿದ್ದರು ಎಂಬುದು ತಿಳಿದು ಬಂದಿಲ್ಲ. ಜತೆಗೆ ಇವರಿಗೆ ವೈ ಪ್ಲಸ್ ಕೆಟಗರಿ ರಕ್ಷಣೆ ಇದ್ದಿದ್ದರಿಂದ ಯಾರಿಗೂ ಅವರ ಬಳಿ ಸುಳಿಯಲು ಆಗಲಿಲ್ಲ. ಶಾರುಖ್ ಅವರಿಗೆ ಹಲವು ರೀತಿಯಲ್ಲಿ ಜೀವ ಬೆದರಿಕೆ ಇರುವ ಕಾರಣ ವೈ ಪ್ಲಸ್ ಕೆಟಗರಿ ಭದ್ರತೆ ಒದಗಿಸಲಾಗಿದೆ.
ಮೂಲಗಳ ಪ್ರಕಾರ, ಶಾರುಖ್ ಖಾನ್ ನಟನೆಯ ʻಪಠಾಣ್ʼ ಸಿನಿಮಾ ಬಿಡುಗಡೆ ವೇಳೆ ಉಂಟಾದ ವಿವಾದದ ಬಳಿಕ ನಟನಿಗೆ ಜೀವ ಬೆದರಿಕೆ ಹಾಕಲಾಗಿದ್ದು, ಇದೇ ಕಾರಣಕ್ಕಾಗಿ ಭದ್ರತೆ ಹೆಚ್ಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. “ಪಠಾಣ್ʼ ಸಿನಿಮಾದ ಬೇಷರಂ ರಂಗ್ ಹಾಡಿನಲ್ಲಿ ನಟಿ ದೀಪಿಕಾ ಪಡುಕೋಣೆ ಅವರು ಕೇಸರಿ ಬಿಕಿನಿ ತೊಟ್ಟು ನೃತ್ಯ ಮಾಡಿದ್ದು ಭಾರಿ ವಿವಾದಕ್ಕೆ ಕಾರಣವಾಗಿತ್ತು. ಹಾಗೆಯೇ, ದೇಶಾದ್ಯಂತ ಸಿನಿಮಾವನ್ನು ನಿಷೇಧ ಮಾಡಬೇಕು ಎಂಬ ಒತ್ತಾಯಗಳು ಕೇಳಿಬಂದಿದ್ದವು. ಇದಾದ ಬಳಿಕ ಬಾಲಿವುಡ್ ನಟನಿಗೆ ಹಲವರಿಂದ ಜೀವ ಬೆದರಿಕೆ ಕರೆಗಳು ಬಂದಿದ್ದವು ಎನ್ನಲಾಗಿದೆ. ಆದರೆ, ಭದ್ರತೆ ಒದಗಿಸಲು ಇದೇ ಕಾರಣ ಎಂಬುದನ್ನು ಪೊಲೀಸ್ ಮೂಲಗಳು ದೃಢಪಡಿಸಿಲ್ಲ.
ಇದನ್ನೂ ಓದಿ: Shah Rukh Khan: ಶಾರುಖ್ ಖಾನ್‌ಗೆ ಏಕಾಏಕಿ ವೈ+ ಭದ್ರತೆ; ನಟನಿಗೆ ಯಾರಿಂದ ಜೀವ ಬೆದರಿಕೆ?
ವಿವಾದದ ಮಧ್ಯೆಯೂ ಶಾರುಖ್ ಖಾನ್ ಅವರ ಪಠಾಣ್ ಸಿನಿಮಾ ಜಾಗತಿಕವಾಗಿ ಒಂದು ಸಾವಿರ ಕೋಟಿ ರೂ. ಗಳಿಸಿದೆ ಎಂದು ತಿಳಿದುಬಂದಿದೆ. ಇದರ ನಂತರ ಬಂದ ಜವಾನ್ ಸಿನಿಮಾ ಕೂಡ 1,100 ಕೋಟಿ ರೂ. ಗಳಿಸಿದೆ.