Site icon Vistara News

Vijay Sethupathi: ರಗಡ್‌ ಲುಕ್‌ನಲ್ಲಿ ವಿಜಯ್ ಸೇತುಪತಿ! ʻಜವಾನ್‌ʼ ಹೊಸ ಪೋಸ್ಟರ್‌ ಔಟ್‌!

Shah Rukh Khan introduces Vijay Sethupathi

ಬೆಂಗಳೂರು: ಶಾರುಖ್ ಖಾನ್ (Shah Rukh Khan) ಅಭಿಮಾನಿಗಳು ಸೆಪ್ಟೆಂಬರ್‌ ಬರುವಿಕೆಗೆ ಕಾಯುತ್ತಿದ್ದಾರೆ. ಅಟ್ಲೀ ನಿರ್ದೇಶನದ ʼಜವಾನ್‌ʼ ಇದೇ ಸೆಪ್ಟೆಂಬರ್ 7ರಂದು ಬಿಡುಗಡೆಯಾಗುತ್ತಿದೆ. ಜವಾನ್‌ ಪ್ರಿವ್ಯೂ ಕೂಡ ಜುಲೈ 10ರಂದು ಬಿಡುಗಡೆಯಾಗಿದೆ. ಈಗಾಗಲೇ ಶಾರುಖ್‌ ಹಾಗೂ ನಯನತಾರಾ ಅವರ ಪಾತ್ರದ ಪೋಸ್ಟರ್‌ಗಳು ರಿವೀಲ್‌ ಆಗಿದೆ. ಇದೀಗ ವಿಜಯ್ ಸೇತುಪತಿ (Vijay Sethupathi) ಅವರ ಪೋಸ್ಟರ್‌ ಬಿಡುಗಡೆಗೊಂಡಿದೆ. ಚಿತ್ರದಲ್ಲಿ ಸೇತುಪತಿ ವಿಲನ್‌ ಆಗಿ ನಟಿಸುತ್ತಿದ್ದಾರೆ. ಅಷ್ಟೇ ಅಲ್ಲದೇ ಹೊಸ ಪೋಸ್ಟರ್​ನಲ್ಲಿ ‘ಸಾವಿನ ವ್ಯಾಪಾರಿ’ ಎಂಬ ಟ್ಯಾಗ್​ಲೈನ್​ ಗಮನ ಸೆಳೆಯುತ್ತಿದೆ. ಆ ಮೂಲಕ ವಿಜಯ್ ಸೇತುಪತಿ ಪಾತ್ರ ಎಷ್ಟು ಭಯಂಕರವಾಗಿರಲಿದೆ ಎಂಬುದರ ಸುಳಿವು ಚಿತ್ರತಂಡ ನೀಡಿದೆ.

ಶಾರುಖ್‌ ಜತೆಗೆ, ʼಜವಾನ್ʼ ಸಿನಿಮಾದಲ್ಲಿ ನಯನತಾರಾ, ವಿಜಯ್ ಸೇತುಪತಿ ಮತ್ತು ಸಾನ್ಯಾ ಮಲ್ಹೋತ್ರಾ ಕೂಡ ನಟಿಸಿದ್ದಾರೆ. ಈ ಹಿಂದೆ ದೀಪಿಕಾ ಪಡುಕೋಣೆ ಕೂಡ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದು ವರದಿಯಾಗಿತ್ತು. ಇದೀಗ ದೀಪಿಕಾ ನಟಿಸುತ್ತಿರುವುದು ಕನ್‌ಫರ್ಮ್‌ ಆಗಿದೆ. ಈ ಹಿಂದೆ ಬಿಡುಗಡೆಯಾದ ಟೀಸರ್‌ನಲ್ಲಿ ಶಾರುಖ್ ಬ್ಯಾಂಡೇಜ್‌ನಲ್ಲಿ ಕಾಣಿಸಿಕೊಂಡಿದ್ದರು.

ಇದನ್ನೂ ಓದಿ: Shah Rukh Khan: ಹೊಸ ಪೋಸ್ಟರ್‌ ಹಂಚಿಕೊಂಡ ʻಜವಾನ್‌ʼ ಚಿತ್ರತಂಡ

ʼಜವಾನ್’ ಚಿತ್ರವು ಸೆಪ್ಟೆಂಬರ್ 7ರಂದು ಜಗತ್ತಿನಾದ್ಯಂತ ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಈಗಾಗಲೇ ಜವಾನ್‌ ಪ್ರಿವ್ಯೂ ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗಿದೆ. ‘ಜವಾನ್’ ಚಿತ್ರವನ್ನು ರೆಡ್ ಚಿಲ್ಲೀಸ್ ಎಂಟರ್‌ಟೇನ್‌ಮೆಂಟ್ ಸಂಸ್ಥೆಯಡಿ ಗೌರಿ ಖಾನ್ ನಿರ್ಮಿಸುತ್ತಿದ್ದು, ಅಟ್ಲಿಯವರ ನಿರ್ದೇಶನದಲ್ಲಿ ಮೂಡಿಬಂದಿದೆ. ಚಿತ್ರದ ಮ್ಯೂಸಿಕ್‌ ರೈಟ್ಸ್‌ ಈಗಾಗಲೇ 36 ಕೋಟಿ ರೂ. ಮಾರಾಟವಾಗಿದೆ ಎಂದು ವರದಿಯಾಗಿದೆ.

Exit mobile version