Site icon Vistara News

Shah Rukh Khan: ಹೊಸ ಪೋಸ್ಟರ್‌ ಹಂಚಿಕೊಂಡ ʻಜವಾನ್‌ʼ ಚಿತ್ರತಂಡ

Jawan New poster

ಬೆಂಗಳೂರು: ಶಾರುಖ್ ಖಾನ್ (Shah Rukh Khan) ಅಭಿಮಾನಿಗಳು ಸೆಪ್ಟೆಂಬರ್‌ ಬರುವಿಕೆಗೆ ಕಾಯುತ್ತಿದ್ದಾರೆ. ಅಟ್ಲೀ ನಿರ್ದೇಶನದ ʼಜವಾನ್‌ʼ ಇದೇ ಸೆಪ್ಟೆಂಬರ್ 7ರಂದು ಬಿಡುಗಡೆಯಾಗುತ್ತಿದೆ. ಜವಾನ್‌ ಪ್ರಿವ್ಯೂ ಕೂಡ ಜುಲೈ 10ರಂದು ಬಿಡುಗಡೆಯಾಗಿದೆ. ಟ್ವಿಟ್ಟರ್‌ನಲ್ಲಿ ಟ್ರೆಂಡ್‌ನಲ್ಲಿ ಇರುವಾಗಲೇ ‘ಆಸ್ಕ್ ಎಸ್‌ಆರ್‌ಕೆ’ ಸೆಷನ್ ಶಾರುಖ್‌ ಆಯೋಜಿಸಿದ್ದಾರೆ. ಬಳಿಕ ಸಿನಿಮಾದ ಹೊದ ಪೋಸ್ಟರ್‌ ಹಂಚಿಕೊಂಡಿದ್ದಾರೆ.

‘ಜವಾನ್’ ಕುರಿತು ಅಭಿಮಾನಿಗಳ ಪ್ರಶ್ನೆಗಳಿಗೆ ಶಾರುಖ್‌ ಉತ್ತರಿಸಿದ್ದಾರೆ. ಇದಾದ ಬಳಿಕ ಚಿತ್ರದ ಹೊಸ ಪೋಸ್ಟರ್‌ಗಳನ್ನು ಬಿಡುಗಡೆ ಮಾಡಿದ್ದಾರೆ. ಶಾರುಖ್ ಖಾನ್ ಅವರು ಮೊದಲ ಬಾರಿಗೆ ತಮ್ಮ ಬೋಳು ಅವತಾರದಲ್ಲಿ ಕಂಡ ಫೋಟೊವನ್ನು ಶೇರ್‌ ಮಾಡಿಕೊಂಡಿದ್ದಾರೆ. ಇದೀಗ ಈ ಪೋಸ್ಟರ್‌ ವೈರಲ್‌ ಆಗುತ್ತಿದೆ. ಅಟ್ಲಿ ಚಿತ್ರದಲ್ಲಿ ದ್ವಿಪಾತ್ರದಲ್ಲಿ ನಟಿಸಿರುವ ನಟ, ತಮ್ಮ ಖಳನಾಯಕನ ಅವತಾರಕ್ಕಾಗಿ ಬೋಳು ತಲೆಯಲ್ಲಿ ಕಂಡಿದ್ದಾರೆ. ಜುಲೈ 13ರ ‘ಆಸ್ಕ್ ಎಸ್‌ಆರ್‌ಕೆ’ ಸೆಷನ್‌ನ್‌ನಲ್ಲಿ ‘ಜವಾನ್’ ಹೊಸ ಪೋಸ್ಟರ್‌ಗಳನ್ನು ಬಿಡುವುದಾಗಿ ಅಭಿಮಾನಿಯೊಬ್ಬರಿಗೆ ಭರವಸೆ ನೀಡಿದ್ದರು ಶಾರುಖ್‌. ಹೇಳಿದಂತೆ ಶಾರುಖ್‌ ನಡೆದಿದ್ದಾರೆ.

“ಈಗ ಕೆಲಸಕ್ಕೆ ಹಿಂತಿರುಗಬೇಕಾಗಿದೆ. ಜವಾನ್ ಬಿಡುಗಡೆಗೆ ಸಿದ್ಧವಾಗುತ್ತಿದೆ. AskSRKಗಾಗಿ ನಿಮ್ಮ ಸಮಯ ಮೀಸಲಿಟ್ಟಿದ್ದಕ್ಕೆ ಧನ್ಯವಾದಗಳು. ಸಿನಿಮಾವನ್ನು ಚಿತ್ರಮಂದಿರಗಳಲ್ಲಿ ನೋಡಿʼʼಎಂದು ಶಾರುಖ್‌ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Dunki OTT: ಭಾರಿ ಮೊತ್ತಕ್ಕೆ ಸೇಲ್‌ ಆಯ್ತು ಶಾರುಖ್ ಖಾನ್ ನಟನೆಯ ʻಡಂಕಿʼ ಸಿನಿಮಾ!

ಶಾರುಖ್‌ ಜತೆಗೆ, ʼಜವಾನ್ʼ ಸಿನಿಮಾದಲ್ಲಿ ನಯನತಾರಾ, ವಿಜಯ್ ಸೇತುಪತಿ ಮತ್ತು ಸಾನ್ಯಾ ಮಲ್ಹೋತ್ರಾ ಕೂಡ ನಟಿಸಿದ್ದಾರೆ. ಈ ಹಿಂದೆ ದೀಪಿಕಾ ಪಡುಕೋಣೆ ಕೂಡ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದು ವರದಿಯಾಗಿತ್ತು. ಇದೀಗ ದೀಪಿಕಾ ನಟಿಸುತ್ತಿರುವುದು ಕನ್‌ಫರ್ಮ್‌ ಆಗಿದೆ. ಈ ಹಿಂದೆ ಬಿಡುಗಡೆಯಾದ ಟೀಸರ್‌ನಲ್ಲಿ ಶಾರುಖ್ ಬ್ಯಾಂಡೇಜ್‌ನಲ್ಲಿ ಕಾಣಿಸಿಕೊಂಡಿದ್ದರು.

ʼಜವಾನ್’ ಚಿತ್ರವು ಸೆಪ್ಟೆಂಬರ್ 7ರಂದು ಜಗತ್ತಿನಾದ್ಯಂತ ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಈಗಾಗಲೇ ಜವಾನ್‌ ಪ್ರಿವ್ಯೂ ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗಿದೆ. ‘ಜವಾನ್’ ಚಿತ್ರವನ್ನು ರೆಡ್ ಚಿಲ್ಲೀಸ್ ಎಂಟರ್‌ಟೇನ್‌ಮೆಂಟ್ ಸಂಸ್ಥೆಯಡಿ ಗೌರಿ ಖಾನ್ ನಿರ್ಮಿಸುತ್ತಿದ್ದು, ಅಟ್ಲಿಯವರ ನಿರ್ದೇಶನದಲ್ಲಿ ಮೂಡಿಬಂದಿದೆ. ಚಿತ್ರದ ಮ್ಯೂಸಿಕ್‌ ರೈಟ್ಸ್‌ ಈಗಾಗಲೇ 36 ಕೋಟಿ ರೂ. ಮಾರಾಟವಾಗಿದೆ ಎಂದು ವರದಿಯಾಗಿದೆ.

Exit mobile version