Site icon Vistara News

Shah Rukh Khan: ಗ್ರೂಪ್‌ ಫೋಟೊ ತೆಗೆಯುವ ವೇಳೆ ನೆಲದ ಮೇಲೆ ಮಲಗಿ ಪೋಸ್‌ ಕೊಟ್ಟ ಶಾರುಖ್‌!

Shah Rukh Khan lies on floor

ಬೆಂಗಳೂರು: ಶಾರುಖ್‌ ಖಾನ್‌ (Shah Rukh Khan) ಅಭಿನಯದ `ಜವಾನ್‌’ ಸಿನಿಮಾ (Jawan Movie success Meet) ಸಕ್ಸೆಸ್‌ ಮೀಟ್‌ ಸೆ. 15ರಂದು ಮುಂಬೈನಲ್ಲಿ ನಡೆಯಿತು. ಈ ವೇಳೆ ನಯನತಾರಾ ಹೊರತುಪಡಿಸಿ ದೀಪಿಕಾ ಪಡುಕೋಣೆ, ವಿಜಯ್‌ ಸೇತುಪತಿ, ನಿರ್ದೇಶಕ ಅಟ್ಲೀ ಸೇರಿದಂತೆ ಹಲವರು ಭಾಗಿಯಾಗಿದ್ದರು. ಶಾರುಖ್ ಖಾನ್ ಸರಳತೆಗೆ ಹಸೆರುವಾಸಿ. ತನ್ನ ಸುತ್ತಲಿನ ಪ್ರತಿಯೊಬ್ಬರನ್ನು ಅಪಾರ ಪ್ರೀತಿ ಮತ್ತು ಗೌರವದಿಂದ ಕಾಣುವ ನಟ. ಅದೇ ಕಾರಣಕ್ಕೆ ಅವರು ಮತ್ತೆ ಪ್ರಶಂಸಿಸಲ್ಪಟ್ಟಿದ್ದಾರೆ. ‘ಜವಾನ್’ ಸಕ್ಸೆಸ್‌ ಮೀಟ್‌ನಲ್ಲಿ ಶಾರುಖ್‌ ಮತ್ತೊಮ್ಮೆ ತಮ್ಮ ಗೆಸ್ಚರ್ ಮೂಲಕ ಸುದ್ದಿಯಲ್ಲಿದ್ದಾರೆ.

ಶಾರುಖ್ ಖಾನ್ ‘ಜವಾನ್’ ಚಿತ್ರತಂಡ ಸೆಪ್ಟೆಂಬರ್ 15ರಂದು ಮುಂಬೈನಲ್ಲಿ ತಮ್ಮ ಚಿತ್ರದ ಸಕ್ಸಸ್ ಪಾರ್ಟಿಯನ್ನು ಆಯೋಜಿಸಿತ್ತು. ಸೆಪ್ಟೆಂಬರ್ 7ರಂದು ಬಿಡುಗಡೆಯಾದ ‘ಜವಾನ್’ ಚಿತ್ರವು ಈಗಾಗಲೇ ವಿಶ್ವದಾದ್ಯಂತ 700 ಕೋಟಿ ರೂಪಾಯಿಗಳನ್ನು ಗಳಿಸಿದೆ. ಸಕ್ಸಸ್ ಮೀಟ್ ನಂತರ ಇಡೀ ಚಿತ್ರದ ತಂಡ ಗ್ರೂಪ್‌ ಪೋಟೊಗಾಗಿ ಪೋಸ್‌ ನೀಡುವಾಗ, ಮೊದಲು ಶಾರುಖ್‌ ನಿಂತು ಪೋಸ್‌ ಕೊಟ್ಟಿದ್ದಾರೆ. ನಿರ್ದೇಶಕ ಅಟ್ಲೀ ಜತೆಗೆ ಕೆಲವು ತಾರೆಗಳು ಫ್ರೇಮ್‌ಗೆ ಬರಬೇಕೆಂದು ಕೆಳಗೆ ಕುಳಿತುಕೊಂಡಿದ್ದಾರೆ. ಕೆಲವು ಫೋಟೊಗಳನ್ನು ಕ್ಲಿಕ್ ಮಾಡಿದ ನಂತರ, ಶಾರುಖ್ ಖಾನ್ ಬೇಗನೆ ಕೆಳಗೆ ಕುಳಿತವರ ಮುಂದೆ ನೆಲದ ಮೇಲೆ ಮಲಗಿ ಪೋಸ್ ನೀಡಿದರು. ಶಾರುಖ್‌ ನೆಲದ ಮೇಲೆ ಮಲಗಿ ಪೋಸ್‌ ನೀಡುವಾಗ ಪ್ರೇಕ್ಷಕರು ಚಪ್ಪಾಳೆ ತಟ್ಟಿ ಶಾರುಖ್‌ ಅವರ ನಡೆಗೆ ಶ್ಲಾಘಿಸಿದರು.

ಇದನ್ನೂ ಓದಿ: Shah Rukh Khan: ತಲೆ ಬೋಳಿಸಿದ ಹುಡುಗಿಯರೆಂದರೆ ಇಷ್ಟ ಎಂದ ಶಾರುಖ್‌ ಖಾನ್‌!

ಚಿತ್ರದ ಯಶಸ್ಸಿನ ಸಂಭ್ರಮವನ್ನು ಹಂಚಿಕೊಂಡ ಶಾರುಖ್ ಖಾನ್, “ಇದೊಂದು ಸಂಭ್ರಮಾಚರಣೆ. ಒಂದು ಚಿತ್ರದೊಂದಿಗೆ ವರ್ಷಗಳ ಕಾಲ ಬದುಕುವ ಅವಕಾಶ ನಮಗೆ ಸಿಗುವುದು ಅಪರೂಪ. ಕೋವಿಡ್ ಮತ್ತು ಸಮಯದ ಕೊರತೆಯಿಂದಾಗಿ ನಾಲ್ಕು ವರ್ಷಗಳಿಂದ ಜವಾನ್ ತಯಾರಿಯಲ್ಲಿ ಇತ್ತು. ಈ ಚಿತ್ರದಲ್ಲಿ ಸಾಕಷ್ಟು ಮಂದಿ ಶ್ರಮ ಪಟ್ಟಿದ್ದಾರೆ. ಅದರಲ್ಲೂ ದಕ್ಷಿಣದ ಜನರು ಮುಂಬೈಗೆ ಬಂದು ನೆಲೆಸಿರುವವರು. ಕಳೆದ ನಾಲ್ಕು ವರ್ಷಗಳಿಂದ ಮುಂಬೈನಲ್ಲಿ ನೆಲೆಸಿದ್ದಾರೆ ಮತ್ತು ಈ ಚಿತ್ರಕ್ಕಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಇದು ಅತ್ಯಂತ ಕಷ್ಟದ ಕೆಲಸವಾಗಿದೆʼʼಎಂದರು.

ಕಾರ್ಯಕ್ರಮಕ್ಕಾಗಿ ದೀಪಿಕಾ ಬಿಳಿ ಸೀರೆಯನ್ನು ಧರಿಸಿದ್ದರು. ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ 500 ಕೋಟಿ ರೂಪಾಯಿಗಳ ಗಡಿ ದಾಟಿದ ಹಿಂದಿ ಸಿನಿಮಾವಾಗಿ ಹೊರಹೊಮ್ಮಿದೆ. ಚಿತ್ರದ ಕಲೆಕ್ಷನ್ ಇಲ್ಲಿಯವರೆಗೆ 520.79 ಕೋಟಿ ರೂ. ಆಗಿದೆ. ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಸೆಪ್ಟೆಂಬರ್ 7 ರಂದು ಚಿತ್ರಮಂದಿರಗಳಲ್ಲಿ ವಿಶ್ವಾದ್ಯಂತ ಬಿಡುಗಡೆಯಾಯಿತು. ‘ಜವಾನ್’ ನಲ್ಲಿ, ಶಾರುಖ್‌ ಅವರು ನಯನತಾರಾ, ವಿಜಯ್ ಸೇತುಪತಿ ಮತ್ತು ದೀಪಿಕಾ ಪಡುಕೋಣೆ ಇತರರೊಂದಿಗೆ ಪರದೆಯನ್ನು ಹಂಚಿಕೊಂಡಿದ್ದಾರೆ.

Exit mobile version